ಹೊಸದಿಲ್ಲಿ: ಕ್ರೀಡಾಲೋಕದ ಸಾಧನೆಗಾಗಿ ನೀಡಲಾಗುವ ಪ್ರಶಸ್ತಿಗಳನ್ನು ಕ್ರೀಡಾ ಸಚಿವಾಲಯ ಮಂಗಳವಾರ (ಆ.18) ಪ್ರಕಟಿಸಿದೆ. ಇತ್ತೀಚೆಗೆ ನಡೆದ ಕಾಮನ್‌ವೆಲ್ತ್ ಗೇಮ್ಸ್ ನಲ್ಲಿ ಡಬಲ್ ಸಾಧನೆ ಮಾಡಿದ್ದ ತೇಜಸ್ವಿನ್ ಶಂಕರ್ ಸೇರಿ 17 ಮಂದಿಯನ್ನು ಅರ್ಜುನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಆದರೆ, ಈ ಬಾರಿ ಖೇಲ್ ರತ್ನ ಪ್ರಶಸ್ತಿಗೆ ಯಾರ ಹೆಸರೂ ಹೆಸರಿಸಿಲ್ಲ.
ವಿಶ್ವಕಪ್ ವಿಜೇತ ಚೆಸ್ ಆಟಗಾರ್ತಿ ದಿವ್ಯಾ ದೇಶಮುಖ್ ಮತ್ತು ಶಟ್ಲರ್ ಗಾಯತ್ರಿ ಗೋಪಿಚಂದ್ ಅರ್ಜುನ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಅರ್ಜುನ ಪ್ರಶಸ್ತಿ ಪಟ್ಟಿಯಲ್ಲಿ ಚೆಸ್ ಗ್ರ್ಯಾಂಡ್‌ಮಾಸ್ಟರ್ ವಿದಿತ್ ಗುಜರಾತಿ, ಮಹಿಳಾ ಡಬಲ್ಸ್‌ನಲ್ಲಿ ಗಾಯತ್ರಿ ಗೋಪಿಚಂದ್ ಜೊತೆಗಾರರಾಗಿರುವ ಬ್ಯಾಡ್ಮಿಂಟನ್ ಆಟಗಾರ್ತಿ ಟ್ರೀಸಾ ಜಾಲಿ, ಗ್ಲಾಸ್ಗೋ ಕಾಮನ್‌ವೆಲ್ತ್ ಕ್ರೀಡಾಕೂಟದ ಬೆಳ್ಳಿ ಪದಕ ವಿಜೇತ ಬಾಕ್ಸರ್ ನರೇಂದರ್ ಮತ್ತು ಭರವಸೆಯ ಕಿವುಡ ಶೂಟರ್ ಧನುಷ್ ಶ್ರೀಕಾಂತ್ ಸೇರಿದಂತೆ ಹಲವಾರು ಪ್ರಮುಖ ಹೆಸರುಗಳಿವೆ.
1962 ರ ಏಷ್ಯನ್ ಕ್ರೀಡಾಕೂಟದ ಚಿನ್ನ ವಿಜೇತ ತಂಡದ ಸದಸ್ಯರಾಗಿದ್ದ ಭಾರತದ ಮಾಜಿ ಫುಟ್ಬಾಲ್ ಆಟಗಾರ ಐ ಅರುಮೈನಾಯಗಂ ಅವರಿಗೆ 'ಜೀವಮಾನ ಸಾಧನೆ' ವಿಭಾಗದ ಅಡಿಯಲ್ಲಿ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.
"ಭಾರತದ ಸುಪ್ರೀಂ ಕೋರ್ಟ್‌ನ ಮಾಜಿ ನ್ಯಾಯಾಧೀಶರಾದ ನ್ಯಾಯಮೂರ್ತಿ (ನಿವೃತ್ತ) ಅರುಣ್ ಕುಮಾರ್ ಮಿಶ್ರಾ ಅವರ ಅಧ್ಯಕ್ಷತೆಯ ಆಯ್ಕೆ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ, ಸರ್ಕಾರವು ಈ ಕೆಳಗಿನ ಕ್ರೀಡಾಪಟುಗಳು, ತರಬೇತುದಾರರು ಮತ್ತು ಸಂಸ್ಥೆಗಳಿಗೆ ವಿವಿಧ ವಿಭಾಗಗಳ ಅಡಿಯಲ್ಲಿ ಪ್ರಶಸ್ತಿಗಳನ್ನು ನೀಡಲು ನಿರ್ಧರಿಸಿದೆ" ಎಂದು ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಲಾಗಿದೆ.
ರಾಷ್ಟ್ರೀಯ ಕ್ರೀಡಾ ಪ್ರಶಸ್ತಿಗಳು 2025: ವಿಜೇತರ ಸಂಪೂರ್ಣ ಪಟ್ಟಿ
ಅರ್ಜುನ ಪ್ರಶಸ್ತಿ 2025
ತೇಜಸ್ವಿನ್ ಶಂಕರ್ - ಅಥ್ಲೆಟಿಕ್ಸ್
ಮುಹಮ್ಮದ್ ಅಜ್ಮಲ್ ವಿ - ಅಥ್ಲೆಟಿಕ್ಸ್
ಪ್ರಿಯಾಂಕಾ ಗೋಸ್ವಾಮಿ - ಅಥ್ಲೆಟಿಕ್ಸ್
ಟ್ರೀಸಾ ಜಾಲಿ - ಬ್ಯಾಡ್ಮಿಂಟನ್
ಪುಲ್ಲೇಲ ಗಾಯತ್ರಿ ಗೋಪಿಚಂದ್ - ಬ್ಯಾಡ್ಮಿಂಟನ್
ನರೇಂದರ್ - ಬಾಕ್ಸಿಂಗ್
ವಿದಿತ್ ಸಂತೋಷ್ ಗುಜರಾತಿ - ಚೆಸ್
ದಿವ್ಯಾ ಜಿತೇಂದ್ರ ದೇಶಮುಖ್ - ಚೆಸ್
ಧನುಷ್ ಶ್ರೀಕಾಂತ್ - ಶೂಟಿಂಗ್ (ಕಿವುಡ)
ಲಾಲ್ರೆಮ್ಸಿಯಾಮಿ - ಹಾಕಿ
ರಾಜ್‌ಕುಮಾರ್ ಪಾಲ್ - ಹಾಕಿ
ಸುರ್ಜಿತ್ - ಕಬಡ್ಡಿ
ಪೂಜಾ - ಕಬಡ್ಡಿ
ರುದ್ರಾಂಶ್ ಖಂಡೇಲ್ವಾಲ್ - ಪ್ಯಾರಾ-ಶೂಟಿಂಗ್
ಏಕ್ತಾ ಭಯ್ - ಪ್ಯಾರಾ ಅಥ್ಲೆಟಿಕ್ಸ್
ಅರವಿಂದ್ ಸಿಂಗ್ - ರೋಯಿಂಗ್
ಅಖಿಲ್ ಶೆರಾನ್ - ಶೂಟಿಂಗ್
ಅರ್ಜುನ ಪ್ರಶಸ್ತಿ (ಜೀವಮಾನ) 2025
ಅರುಮೈನಾಯಗಂ - ಫುಟ್‌ಬಾಲ್
ದ್ರೋಣಾಚಾರ್ಯ ಪ್ರಶಸ್ತಿ 2025 - ಸಾಮಾನ್ಯ ವರ್ಗ
ಪರ್ವೀರ್ ಸಿಂಗ್ - ಅಥ್ಲೆಟಿಕ್ಸ್
ಛೋಟೆ ಲಾಲ್ ಯಾದವ್ - ಬಾಕ್ಸಿಂಗ್
ನೇಹಾ ನಂದಕುಮಾರ್ ಚವಾಣ್ - ಶೂಟಿಂಗ್
ದ್ರೋಣಾಚಾರ್ಯ ಪ್ರಶಸ್ತಿ 2025 - ಜೀವಮಾನದ ವರ್ಗ
ಧರ್ಮೇಂದ್ರ ಸಿಂಗ್ ಯಾದವ್ - ಬಾಕ್ಸಿಂಗ್
ವೀರೇಂದ್ರ ಕುಮಾರ್ - ಕುಸ್ತಿ
ರಾಷ್ಟ್ರೀಯ ಖೇಲ್ ಪ್ರೋತ್ಸಾಹನ್ ಪುರಸ್ಕಾರ 2025
ಆರ್ಮಿ ಪ್ಯಾರಾಲಿಂಪಿಕ್ ನೋಡ್, ಪುಣೆ - ಕ್ರೀಡೆ ಪ್ರಚಾರ ಮತ್ತು ಅಭಿವೃದ್ಧಿ

