Dailyhunt Logo
  • Light mode
    Follow system
    Dark mode
    • Play Story
    • App Story
ಬಹುಪಯೋಗಿ 'ಸಮರ್ಥಕ್‌ ' ಹಡಗು ನೌಕಾ ಪಡೆಗೆ ಹಸ್ತಾಂತರ

ಬಹುಪಯೋಗಿ 'ಸಮರ್ಥಕ್‌ ' ಹಡಗು ನೌಕಾ ಪಡೆಗೆ ಹಸ್ತಾಂತರ

ವದೆಹಲಿ: ವಿವಿಧೋದ್ದೇಶಗಳಿಗೆ ಬಳಸಬಹುದಾದ ಮೊದಲ ಬಹುಪಯೋಗಿ ಹಡಗು 'ಸಮರ್ಥಕ್‌' ಅನ್ನು ನೌಕಾ ಪಡೆಗೆ ಗುರುವಾರ ಹಸ್ತಾಂತರಿಸಲಾಯಿತು.

ಕಡಲಿನ ಮೇಲೆ ಕಣ್ಗಾವಲು, ಕರಾವಳಿ ಪ್ರದೇಶದಾಚೆಗಿನ ಗಸ್ತು ಸೇರಿದಂತೆ ಹತ್ತು ಹಲವು ಕಾರ್ಯಗಳನ್ನು ಈ ಹಡಗು ನಿರ್ವಹಿಸುತ್ತದೆ.

ಎಲ್ಲಕ್ಕಿಂತ ಮುಖ್ಯವಾಗಿ ವಿಪತ್ತು ಪರಿಹಾರ ಕಾರ್ಯಾಚರಣೆಗಳನ್ನು ನಿಭಾಯಿಸುವ ಸಾಮರ್ಥ್ಯವನ್ನೂ ಈ ಹಡಗು ಹೊಂದಿದೆ.

ಇದೇ ಕಾರಣಕ್ಕೇ ಇದಕ್ಕೆ 'ಸಮರ್ಥಕ್‌' ಎಂಬ ಹೆಸರನ್ನು ಇಡಲಾಗಿದೆ. ಈ ಹಡಗು ಆತ್ಮನಿರ್ಭರ ಭಾರತದ ಪ್ರತೀಕವಾಗಿದ್ದು, ಇದನ್ನು ಭಾರತದಲ್ಲೇ ನಿರ್ಮಿಸಲಾಗಿದೆ. ಜತೆಗೆ ಇದರ ನಿರ್ಮಾಣಕ್ಕೆ ಶೇ.75ರಷ್ಟು ಸ್ಥಳೀಯ ವಸ್ತುಗಳನ್ನೇ ಬಳಸಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani