Dailyhunt Logo
  • Light mode
    Follow system
    Dark mode
    • Play Story
    • App Story
ಬೈಕಿನಲ್ಲಿ ತೆರಳುತ್ತಿದ್ದಾಗ ಪ್ಯಾಂಟ್ ಕಿಸೆಯಲ್ಲಿದ್ದ ಮೊಬೈಲ್ ಸ್ಪೋಟ: ಯುವಕನಿಗೆ ಗಾಯ

ಬೈಕಿನಲ್ಲಿ ತೆರಳುತ್ತಿದ್ದಾಗ ಪ್ಯಾಂಟ್ ಕಿಸೆಯಲ್ಲಿದ್ದ ಮೊಬೈಲ್ ಸ್ಪೋಟ: ಯುವಕನಿಗೆ ಗಾಯ

ಸೊರಬ: ಬೈಕ್‍ನಲ್ಲಿ ತೆರಳುತ್ತಿದ್ದಾಗ ಪ್ಯಾಂಟ್ ಕಿಸೆಯಲ್ಲಿದ್ದ ಮೊಬೈಲ್ ಸ್ಪೋಟಗೊಂಡು ಬೈಕ್ ಸವಾರ ಗಾಯಗೊಂಡಿರುವ ಘಟನೆ ತಾಲೂಕಿನ ಕುಪ್ಪಗಡ್ಡೆ ಗ್ರಾಮದ ಕೆರೆ ಸಮೀಪ ಬುಧವಾರ ನಡೆದಿದೆ.

ತವನಂದಿ ಗ್ರಾಮದ ಬಿ. ಶರತ್ (22) ಗಾಯಗೊಂಡ ಯುವಕನಾಗಿದ್ದು ಈತ ತವನಂದಿ ಗ್ರಾಮದಿಂದ ಕುಪ್ಪಗಡ್ಡೆಗೆ ತೆರಳುವ ಸಂದರ್ಭದಲ್ಲಿ ಮೊಬೈಲ್ ಸ್ಪೋಟಗೊಂಡಿದೆ. ನಿಯಂತ್ರಣ ಕಳೆದುಕೊಂಡ ಯುವಕ ಬೈಕ್‍ನೊಂದಿಗೆ ಕೆರೆಗೆ ಬಿದ್ದಿದ್ದಾನೆ. ಅದೃಷ್ಟವಶಾತ್ ಯಾವುದೇ ಜೀವಹಾನಿಯಾಗಿಲ್ಲ.

ಯುವಕನ ಬಲ ತೊಡೆ ಭಾಗದಲ್ಲಿ ಗಂಭೀರ ಗಾಯವಾಗಿದ್ದು, ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇನ್ನೂ ಶರತ್ ಬಳಸುತ್ತಿದ್ದ ಮೊಬೈಲ್ ಚೈನದಲ್ಲಿ ತಯಾರಿಸಿದ್ದು ಹಾಗೂ ಬೆಂಗಳೂರಿನ ಶೋರೂಂವೊಂದರಲ್ಲಿ ಖರೀಸಿದ್ದನು ಎನ್ನಲಾಗುತ್ತಿದೆ.

ಆನವಟ್ಟಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani