ಮುಂಬೈ: ಮುಂದಿನ ಸೀಸನ್ ವನಿತಾ ಪ್ರೀಮಿಯರ್ ಲೀಗ್ (WPL) ತಯಾರಿ ಆರಂಭವಾಗಿದೆ. ಎಲ್ಲಾ ಐದು ತಂಡಗಳು ತಮ್ಮಲ್ಲಿ ಉಳಿಸಿಕೊಳ್ಳಲಿರುವ ಮತ್ತು ಹರಾಜಿಗೆ ಬಿಡಲಿರುವ ಆಟಗಾರರ ಪಟ್ಟಿಯನ್ನು ಬಿಸಿಸಿಐಗೆ ನೀಡಿದೆ.
ಮಹಿಳಾ ಪ್ರೀಮಿಯರ್ ಲೀಗ್ ನ ಐದು ಫ್ರಾಂಚೈಸಿಗಳಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB), ಮುಂಬೈ ಇಂಡಿಯನ್ಸ್ (MI), ಡೆಲ್ಲಿ ಕ್ಯಾಪಿಟಲ್ಸ್ (DC), ಗುಜರಾತ್ ಜೈಂಟ್ಸ್ (GG) ಮತ್ತು ಯುಪಿ ವಾರಿಯರ್ಸ್ (UPW) - 2027ರ ಮಿನಿ-ಹರಾಜಿಗೂ ಮುನ್ನ ತಮ್ಮ ತಂಡದಲ್ಲಿ ಉಳಿಸಿಕೊಳ್ಳುವ ಆಟಗಾರರ ಪಟ್ಟಿಗಳನ್ನು (ರಿಟೆನ್ಷನ್ ಲಿಸ್ಟ್) ಸಲ್ಲಿಸಿವೆ.
ತಂಡದ ಸಾಮರ್ಥ್ಯ ಹೆಚ್ಚುತ್ತಿದ್ದಂತೆ, ಫ್ರಾಂಚೈಸಿಗಳು ದಿಟ್ಟ ಹೆಜ್ಜೆಗಳನ್ನು ಇಟ್ಟಿವೆ. ತಂಡದ ಚಲನಶೀಲತೆಯನ್ನು ಸಮತೋಲನಗೊಳಿಸಲು ಮತ್ತು ಯುದ್ಧತಂತ್ರದ ಸ್ಥಾನಗಳನ್ನು ತೆರವುಗೊಳಿಸಲು ಅನೇಕ ಅನುಭವಿ ಆಟಗಾರರರು ಮತ್ತು ವಿದೇಶಿ ಸೂಪರ್‌ಸ್ಟಾರ್‌ಗಳನ್ನು ತಂಡದಿಂದ ಕೈಬಿಟ್ಟಿದೆ.
ಆಟಗಾರರ ಹರಾಜು ಈ ಬಾರಿ ಅಕ್ಟೋಬರ್ 28 ರಂದು ಕೊಚ್ಚಿಯ 'ಗ್ರ್ಯಾಂಡ್ ಹಯಾತ್'ನಲ್ಲಿ ಸೇರಲಿವೆ; ಪ್ರತಿ ತಂಡವು ಗರಿಷ್ಠ 18 ಆಟಗಾರರನ್ನು ಹೊಂದಲು ಅವಕಾಶವಿರುತ್ತದೆ. ಮಹಿಳಾ ಪ್ರೀಮಿಯರ್ ಲೀಗ್‌ನ (WPL 2027) ಐದನೇ ಆವೃತ್ತಿಯು ಜನವರಿ 14 ರಿಂದ ಫೆಬ್ರವರಿ 7 ರವರೆಗೆ ನಡೆಯಲಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB)
ಬಿಡುಗಡೆಯಾದ ಆಟಗಾರರು: ಗ್ರೇಸ್ ಹ್ಯಾರಿಸ್, ಲಿನ್ಸೆ ಸ್ಮಿತ್, ಡಿ ಹೇಮಲತಾ, ಗೌತಮಿ ನಾಯಕ್
ಉಳಿಸಿಕೊಂಡ ಆಟಗಾರರು: ಎಲ್ಲಿಸ್ ಪೆರ್ರಿ, ಜಾರ್ಜಿಯಾ ವೋಲ್, ಲಾರೆನ್ ಬೆಲ್, ನಡಿನ್ ಡಿ ಕ್ಲರ್ಕ್, ಅರುಂಧತಿ ರೆಡ್ಡಿ, ಪೂಜಾ ವಸ್ತ್ರಾಕರ್, ಪ್ರತ್ಯೂಷಾ ಕುಮಾರ್, ಪ್ರೇಮಾ ರಾವತ್, ರಾಧಾ ಯಾದವ್, ರಿಚಾ ಘೋಷ್, ಸಯಾಲಿ ಸತ್ಘರೆ, ಶ್ರೇಯಾಂಕ ಪಾಟೀಲ್, ಸ್ಮೃತಿ ಮಂಧಾನ
ಲಭ್ಯವಿರುವ ಸ್ಲಾಟ್‌ಗಳು: 5 (ಎರಡು ವಿದೇಶಿ)
ಉಳಿದಿರುವ ಪರ್ಸ್: 1.15 ಕೋಟಿ ರೂ
ದೆಹಲಿ ಕ್ಯಾಪಿಟಲ್ಸ್ (DC)
ಬಿಡುಗಡೆಯಾದ ಆಟಗಾರರು: ಅಲಾನಾ ಕಿಂಗ್, ಲಿಜೆಲ್ ಲೀ, ಸ್ನೇಹ ರಾಣಾ, ತಾನಿಯಾ ಭಾಟಿಯಾ, ಪ್ರಗತಿ ಸಿಂಗ್, ಎಡ್ಲಾ ಸೃಜನಾ
ಉಳಿಸಿಕೊಂಡ ಆಟಗಾರರು: ಅನ್ನಾಬೆಲ್ ಸದರ್ಲ್ಯಾಂಡ್, ಶಿನೆಲ್ ಹೆನ್ರಿ, ಲಾರಾ ವೊಲ್ವಾರ್ಡ್ಟ್, ಲೂಸಿ ಹ್ಯಾಮಿಲ್ಟನ್, ಮರಿಜಾನ್ನೆ ಕಪ್, ದಿಯಾ ಯಾದವ್, ಜೆಮಿಮಾ ರೋಡ್ರಿಗಸ್, ಮಮತಾ ಮಡಿವಾಳ, ಮಿನ್ನು ಮಣಿ, ಶ್ರೀ ಚರಣಿ, ನಂದನಿ ಶರ್ಮಾ, ನಿಕಿ ಪ್ರಸಾದ್, ಶಫಾಲಿ ವರ್ಮಾ
ಲಭ್ಯವಿರುವ ಸ್ಲಾಟ್‌ಗಳು: 5 (ಒಂದು ವಿದೇಶಿ)
ಉಳಿದಿರುವ ಪರ್ಸ್: 1.10 ಕೋಟಿ ರೂ
ಮುಂಬೈ ಇಂಡಿಯನ್ಸ್ (MI)
ಬಿಡುಗಡೆಯಾದ ಆಟಗಾರರು: ಮಿಲ್ಲಿ ಇಲ್ಲಿಂಗ್‌ವರ್ತ್, ಜಿ ಕಮಲಿನಿ, ಕ್ರಾಂತಿ ರೆಡ್ಡಿ, ಪೂನಂ ಖೇಮ್ನಾರ್, ಸೈಕಾ ಇಶಾಖ್, ತ್ರಿವೇಣಿ ವಸಿಷ್ಟ
ಉಳಿಸಿಕೊಂಡಿರುವ ಆಟಗಾರರು: ಮೆಲಿ ಕೆರ್, ಹೀಲಿ ಮ್ಯಾಥ್ಯೂಸ್, ನ್ಯಾಟ್ ಸಿವರ್-ಬ್ರಂಟ್, ನಿಕೋಲಾ ಕ್ಯಾರಿ, ಅಮನ್ಜೋತ್ ಕೌರ್, ಹರ್ಮನ್ ಪ್ರೀತ್ ಕೌರ್, ರಹಿಲಾ ಫಿರ್ದೌಸ್, ಎಸ್ ಸಜನಾ, ಸಂಸ್ಕೃತಿ ಗುಪ್ತಾ, ಶಬ್ನಿಮ್ ಇಸ್ಮಾಯಿಲ್, ವೈಷ್ಣವಿ ಶರ್ಮಾ
ಲಭ್ಯವಿರುವ ಸ್ಲಾಟ್‌ಗಳು: 7 (ಒಂದು ವಿದೇಶಿ)
ಉಳಿದಿರುವ ಪರ್ಸ್: 1 ಕೋಟಿ ರೂ
ಗುಜರಾತ್ ಜೈಂಟ್ಸ್ (GG)
ಬಿಡುಗಡೆಯಾದ ಆಟಗಾರರು: ಡ್ಯಾನಿ ವ್ಯಾಟ್-ಹಾಡ್ಜ್, ಆಯುಷಿ ಸೋನಿ, ಟಿಟಾಸ್ ಸಾಧು, ಶಿವಾನಿ ಸಿಂಗ್
ಉಳಿಸಿಕೊಂಡಿರುವ ಆಟಗಾರರು: ಆಶ್ಲೀ ಗಾರ್ಡನರ್, ಬೆತ್ ಮೂನಿ, ಜಾರ್ಜಿಯಾ ವೇರ್‌ಹ್ಯಾಮ್, ಕಿಮ್ ಗಾರ್ತ್, ಸೋಫಿ ಡಿವೈನ್, ಅನುಷ್ಕಾ ಶರ್ಮಾ, ಭಾರತಿ ಫುಲ್ಮಾಲಿ, ಹ್ಯಾಪಿ ಕುಮಾರಿ, ಜಿಂಟಿಮಣಿ ಕಲಿತಾ, ಕನಿಕಾ ಅಹುಜಾ, ಕಾಶ್ವೀ ಗೌತಮ್, ರಾಜೇಶ್ವರಿ ಗಾಯಕ್ವಾಡ್, ರೇಣುಕಾ ಸಿಂಗ್, ತನುಜಾ ಕನ್ವರ್, ಯಸ್ತಿಕಾ ಕನ್ವರ್.
ಲಭ್ಯವಿರುವ ಸ್ಲಾಟ್‌ಗಳು: 3 (ಒಂದು ವಿದೇಶಿ)
ಉಳಿದಿರುವ ಪರ್ಸ್: 1.25 ಕೋಟಿ ರೂ
ಯುಪಿ ವಾರಿಯರ್ಜ್ (UPW)
ಬಿಡುಗಡೆಯಾದ ಆಟಗಾರರು: ಆಮಿ ಜೋನ್ಸ್, ಚಾರ್ಲಿ ನಾಟ್, ಕ್ಲೋಯ್ ಟ್ರಯಾನ್, ಡಿಯೇಂದ್ರ ಡಾಟಿನ್, ಆಶಾ ಸೋಭಾನ, ಜಿ ತ್ರಿಶಾ, ಕಿರಣ್ ನವಗಿರೆ, ಶ್ವೇತಾ ಸೆಹ್ರಾವತ್, ಸುಮನ್ ಮೀನಾ
ಉಳಿಸಿಕೊಂಡಿರುವ ಆಟಗಾರರು: ಮೆಗ್ ಲ್ಯಾನಿಂಗ್, ಫೋಬಿ ಲಿಚ್‌ಫೀಲ್ಡ್, ಸೋಫಿ ಎಕ್ಲೆಸ್ಟೋನ್, ತಾರಾ ನಾರ್ರಿಸ್, ದೀಪ್ತಿ ಶರ್ಮಾ, ಹರ್ಲೀನ್ ಡಿಯೋಲ್, ಕ್ರಾಂತಿ ಗೌಡ್, ಪ್ರತೀಕಾ ರಾವಲ್, ಶಿಖಾ ಪಾಂಡೆ, ಶಿಪ್ರಾ ಗಿರಿ, ಸಿಮ್ರಾನ್ ಶೇಖ್
ಲಭ್ಯವಿರುವ ಸ್ಲಾಟ್‌ಗಳು: 7 (ಎರಡು ವಿದೇಶಿ)
ಉಳಿದಿರುವ ಪರ್ಸ್: 3.65 ಕೋಟಿ ರೂ

