Dailyhunt
BAN vs NZ: 2ನೇ ಏಕದಿನ: ನ್ಯೂಜಿಲೆಂಡ್‌ ವಿರುದ್ಧ ಬಾಂಗ್ಲಾಕ್ಕೆ ಗೆಲುವು

BAN vs NZ: 2ನೇ ಏಕದಿನ: ನ್ಯೂಜಿಲೆಂಡ್‌ ವಿರುದ್ಧ ಬಾಂಗ್ಲಾಕ್ಕೆ ಗೆಲುವು

ಢಾಕಾ: ಇಲ್ಲಿ ಸೋಮವಾರ ನಡೆದ 2ನೇ ಏಕದಿನ ಪಂದ್ಯದಲ್ಲಿ ಪ್ರವಾಸಿ ನ್ಯೂಜಿಲೆಂಡ್‌ ವಿರುದ್ಧ ಆತಿಥೇಯ ಬಾಂಗ್ಲಾದೇಶ 6 ವಿಕೆಟ್‌ಗಳ ಜಯ ಗಳಿಸಿದೆ.

ಇದರೊಂದಿಗೆ 3 ಪಂದ್ಯಗಳ ಏಕದಿನ ಸರಣಿ 1 1ರಿಂದ ಸಮಬಲಗೊಂಡಿದೆ. ಮೊದಲು ಬ್ಯಾಟಿಂಗ್‌ ನಡೆಸಿದ ನ್ಯೂಜಿಲೆಂಡ್‌, 48.4 ಓವರ್‌ಗಳಲ್ಲಿ 198 ರನ್‌ ಬಾರಿಸಿ ಆಲೌಟ್‌ ಆಯಿತು.

ತಂಡದ ಪರ ನಿಕ್‌ ಕೆಲ್ಲಿ 83 ರನ್‌ ಸಿಡಿಸಿದರು. ಈ ವೇಳೆ ಬಾಂಗ್ಲಾದ ನಹೀದ್‌ ರಾಣಾ 32ಕ್ಕೆ 5 ವಿಕೆಟ್‌ ಉರುಳಿಸಿ ಕಾಡಿದರು.

ಗುರಿ ಬೆನ್ನತ್ತಿದ ಬಾಂಗ್ಲಾದೇಶ 35.3 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 199 ರನ್‌ ಬಾರಿಸಿತು. ತಂಡದ ಪರ ತಾಂಜಿದ್‌ ಹಸನ್‌ 76, ನಜ್ಮುಲ್‌ ಹೊಸೇನ್‌ 50 ರನ್‌ ಬಾರಿಸಿ ತಂಡದ ಗೆಲುವಿಗೆ ಕಾರಣರಾದರು.

Dailyhunt
Disclaimer: This content has not been generated, created or edited by Dailyhunt. Publisher: Udayavani