ಕುಂದಾಪುರ: ಬಸ್ರೂರಿನ ಮಾರ್ಗೋಳಿಯಲ್ಲಿ ಎ.2 ರಂದು ಬಸ್ರೂರು ಜಾತ್ರೆಗೆ ಹೋಗುತ್ತಿದ್ದ ಮಹಿಳೆಯೊಬ್ಬರು ದಾರಿ ಮಧ್ಯೆ ಕುಸಿದು ಅಸ್ವಸ್ಥಗೊಂಡು, ಬಳಿಕ ಸಾವನ್ನಪ್ಪಿದ್ದಾರೆ.
ಬಸ್ರೂರು ಮಾರ್ಗೋಳಿಯ ನಿವಾಸಿ ವಿನಯಾ ಶೆಟ್ಟಿ (55) ಸಾವನ್ನಪ್ಪಿದ ಮಹಿಳೆ.
ಮಾರ್ಗೋಳಿಯ ಬಸ್ ನಿಲ್ದಾಣದಲ್ಲಿ ಇವರಿಗಾಗಿ ತಂಗಿ ಸಾಕು ಶೆಟ್ಟಿ ಕಾಯುತ್ತಿದ್ದು, ಈ ವೇಳೆ ಅಲ್ಲಿಗೆ ನಡೆದುಕೊಂಡು ಬರುತ್ತಿದ್ದ ವಿನಯಾ ಶೆಟ್ಟಿ ಅವರು ಹಠಾತ್ ಆಗಿ ಕುಸಿದು ಬಿದ್ದು ಅಸ್ವಸ್ಥಗೊಂಡಿದ್ದಾರೆ.
ಕೂಡಲೇ ಅವರನ್ನು ಕುಂದಾಪುರದ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದು, ಅಲ್ಲಿ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾಗಿ ಅವರ ತಂಗಿ ಸಾಕು ಶೆಟ್ಟಿ ನೀಡಿದ ದೂರಿನಂತೆ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

