Dailyhunt
ಬೇಕಲ: ಪತ್ನಿ, ಪುತ್ರಿಗೆ ಕಡಿದ ವ್ಯಕ್ತಿಗೆ ಹೃದಯಾಘಾತ

ಬೇಕಲ: ಪತ್ನಿ, ಪುತ್ರಿಗೆ ಕಡಿದ ವ್ಯಕ್ತಿಗೆ ಹೃದಯಾಘಾತ

ಬೇಕಲ: ಪತ್ನಿ ಮತ್ತು ಪುತ್ರಿಗೆ ಇರಿದು ಕೊಲೆಗೆ ಯತ್ನ ನಡೆಸಿ ಪೊಲೀಸ್ ಠಾಣೆಯಲ್ಲಿ ಶರಣಾದ ವ್ಯಕ್ತಿಗೆ ಹೃದಯಾಘಾತ ಸಂಭವಿಸಿದ ಘಟನೆ ಬೇಕಲ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಚೇರ್ಕಪ್ಪಾರ ಮಂಞಂಗಾಡ್ ಅರ್ಚನಾ ನಿವಾಸದ ಕೆ.ಎ.ಯಶೋಧಾ (67) ಅವರನ್ನು, ಆಕೆಯ ಪತಿ ಆಟೋ ಚಾಲಕ ಟಿ.ವಿ.ನಾಗರಾಜನ್ (73) ಕತ್ತಿಯಿಂದ ಕಡಿದು ಕೊಲೆಗೆ ಯತ್ನಿಸಿದಾಗ ಬಿಡಿಸಲು ಬಂದ ಪುತ್ರಿ ಶೈಜಿ ಮೋಳ್ ( 30) ಅವರೂ ಇರಿತಕ್ಕೊಳಗಾದರು.

ಗಾಯಾಳುಗಳಾದ ತಾಯಿ ಮತ್ತು‌ ಮಗಳು ಪರಿಯಾರಂ ವೈದ್ಯಕೀಯ ಕಾಲೇಜು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಆರೋಪಿ ಬೇಕಲ ಠಾಣೆಗೆ ಶರಣಾಗಿದ್ದಾನೆ. ಪೊಲೀಸರು ಹೇಳಿಕೆ ಪಡೆದುಕೊಳ್ಳುತ್ತಿದ್ದ ಸಂದರ್ಭದಲ್ಲಿ ಆರೋಪಿಗೆ ಹೃದಯಾಘಾತ ಸಂಭವಿಸಿದೆ. ಆಸ್ಪತ್ರೆಯಲ್ಲಿ ಚೇತರಿಸಿಕೊಂಡಿರುವ ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.

ಮನೆ ನುಗ್ಗಿ ಯುವತಿಗೆ ಹಲ್ಲೆ
ಕುಂಬಳೆ: ಮನೆಗೆ ಅಕ್ರಮವಾಗಿ ನುಗ್ಗಿ ಯುವತಿಗೆ ಹಲ್ಲೆ ನಡೆಸಿದ ಆರೋಪದ ಮೇಲೆ ಕುಂಬಳೆ ಕಳತ್ತೂರು ಶಿವಕೃಪಾ ನಿವಾಸಿ ಸಜೀಶ್ (37) ಎಂಬವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani