Sunday, 22 Nov, 8.02 pm ಉದಯವಾಣಿ

ಟಾಪ್ 10 ಸುದ್ದಿ
ಬೆಳಗಾವಿ: ಪೊಲೀಸ್ ಪೇದೆಯ ಲಿಖಿತ ಪರೀಕ್ಷೆ ಬರೆಯುತ್ತಿದ್ದ ನಕಲಿ ಅಭ್ಯರ್ಥಿಗಳ ಸೆರೆ

ಬೆಳಗಾವಿ: ಪೊಲೀಸ್ ಪೇದೆ (ಎಸ್‌ಆರ್‌ಪಿಸಿ, ಕೆಎಎಸ್‌ಆರ್‌ಪಿ/ಐಆರ್‌ಬಿ) ಹುದ್ದೆಗಳ ನೇಮಕಕ್ಕೆ ನಡೆದ ಸಿಇಟಿ ಲಿಖಿತ ಪರೀಕ್ಷೆಯನ್ನು ನಕಲಿ ಅಭ್ಯರ್ಥಿ ಬರೆದು ಸಿಕ್ಕಿ ಬಿದ್ದಿದ್ದು, ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಗೋಕಾಕ ತಾಲೂಕಿನ ಹಡಗಿನಹಾಳ ಗ್ರಾಮದ ಭೀಮಶಿ ಮಹಾದೇವ ಹುಕ್ಕೋಳಿ, ಬೆಣಚಿನಮರಡಿ ಗ್ರಾಮದ ಸುರೇಶ ಲಕ್ಷ್ಮಣ ಕಡಬಿ, ಉದಗಟ್ಟಿ ಗ್ರಾಮದ ಆನಂದ ಹನುಮಂತ ವಡೇಯರ ಹಾಗೂ ಉದಗಟ್ಟಿ ಗ್ರಾಮದ ಮೆಹಬೂಬ ಬಾಬಾಸಾಬ ಅಕ್ಕಿವಾಟ ಎಂಬಾತರನ್ನು ಪೊಲೀಸರು ಬಂಧಿಸಿದ್ದಾರೆ.

ನಗರದ ಜಿಐಟಿ ಕಾಲೇಜು, ಲವ್‌ಡೇಲ್ ಸೆಂಟ್ರಲ್ ಸ್ಕೂಲ್, ಕೆಎಲ್‌ಎಸ್ ಸಂಸ್ಥೆಯ ಇಂಗ್ಲಿಷ್ ಮಾಧ್ಯಮ ಶಾಲೆ, ಸರ್ಕಾರಿ ಚಿಂತಾಮಣರಾವ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಲಿಖಿತ ಪರೀಕ್ಷೆಯಲ್ಲಿ ಅಭ್ಯರ್ಥಿಗಳ ಬದಲಾಗಿ ಬೇರೆಯವರು ಪರೀಕ್ಷೆ ಬರೆಯುತ್ತಿರುವ ಬಗ್ಗೆ ಹಾಗೂ ನಕಲಿ ಸಹಿ ಮಾಡಿರುವುದು ಕಂಡು ಬಂದಿದೆ.

ಇದನ್ನೂ ಓದಿ :ಟ್ರೆಂಡಿಂಗ್-#BoycottNetflix: ಟ್ವೀಟಿಗರ ಆಕ್ರೋಶಕ್ಕೆ ಕಾರಣವಾದ ವೆಬ್ ಸರಣಿಯ ಚುಂಬನ ದೃಶ್ಯ

ನಕಲಿ ಅಭ್ಯರ್ಥಿ ಪರೀಕ್ಷೆ ಬರೆಯುವ ಕುರಿತು ಪೊಲೀಸರಿಗೆ ಮಾಹಿತಿ ದೊರೆತಿದ್ದು, ಇದರ ಆಧಾರದ ಮೇಲೆ ಪೊಲೀಸ್ ಅಧಿಕಾರಿಗಳು ನಕಲಿ ಅಭ್ಯರ್ಥಿಗಳನ್ನು ಪತ್ತೆ ಹಚ್ಚಿದ್ದಾರೆ.

ಪ್ರತ್ಯೇಕವಾಗಿ ಉದ್ಯಮಬಾಗ, ಮಾಳಮಾರುತಿ, ಟಿಳಕವಾಡಿ ಹಾಗೂ ಶಹಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top