Dailyhunt Logo
  • Light mode
    Follow system
    Dark mode
    • Play Story
    • App Story
ಬೆಳಗಾವಿ ಉತ್ತರ ವಲಯ: 1,041 ರೌಡಿಶೀಟರ್ ಗಳ ಮನೆಗಳ ಮೇಲೆ ದಿಢೀರ್ ಪೊಲೀಸ್ ದಾಳಿ

ಬೆಳಗಾವಿ ಉತ್ತರ ವಲಯ: 1,041 ರೌಡಿಶೀಟರ್ ಗಳ ಮನೆಗಳ ಮೇಲೆ ದಿಢೀರ್ ಪೊಲೀಸ್ ದಾಳಿ

ಬೆಳಗಾವಿ: ಅಪರಾಧ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಉತ್ತರ ವಲಯದ 5 ಜಿಲ್ಲೆಗಳಲ್ಲಿ ರವಿವಾರ ಬೆಳ್ಳಂಬೆಳಗ್ಗೆ ಪೊಲೀಸರು 1,041 ರೌಡಿಶೀಟರ್‌ಗಳ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿ ಬಿಸಿ ಮುಟ್ಟಿಸಿದ್ದಾರೆ.

ಬೆಳಗಾವಿ, ವಿಜಯಪುರ, ಬಾಗಲಕೋಟೆ, ಧಾರವಾಡ ಹಾಗೂ ಗದಗ ಜಿಲ್ಲೆಗಳಲ್ಲಿ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದಾರೆ.

ರೌಡಿಶೀಟರ್‌ಗಳ ಮನೆಗಳನ್ನು ಜಾಲಾಡಿ, ಅವರ ಇತ್ತೀಚಿನ ಚಟುವಟಿಕೆ ಹಾಗೂ ಸಂಪರ್ಕಗಳ ಕುರಿತು ಮಾಹಿತಿ ಸಂಗ್ರಹಿಸಲಾಗಿದೆ ಎಂದು ಉತ್ತರ ವಲಯ ಐಜಿಪಿ ಸಂದೀಪ ಪಾಟೀಲ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯಲ್ಲಿ 201, ವಿಜಯಪುರದಲ್ಲಿ 482, ಬಾಗಲಕೋಟೆಯಲ್ಲಿ 117, ಧಾರವಾಡದಲ್ಲಿ 46 ಹಾಗೂ ಗದಗ ಜಿಲ್ಲೆಯಲ್ಲಿ 195 ರೌಡಿಶೀಟರ್‌ಗಳ ಮನೆಗಳ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಕಾರ್ಯಾಚರಣೆ ವೇಳೆ ಸಮರ್ಪಕ ದಾಖಲೆಗಳಿಲ್ಲದ 27 ವಾಹನಗಳು ಹಾಗೂ ರೌಡಿಶೀಟರ್‌ಗಳಿಗೆ ಸಂಬಂಧಿಸಿದ 9 ಮಾರಕಾಸ್ತ್ರಗಳನ್ನು ಜಪ್ತಿ ಮಾಡಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani