Dailyhunt
Bellary: ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ ಕಾರ್ಪೊರೇಟರ್

Bellary: ಸರ್ಕಾರಿ ಅಧಿಕಾರಿಯ ಮೇಲೆ ಹಲ್ಲೆ ಮಾಡಿದ ಕಾರ್ಪೊರೇಟರ್

ಳ್ಳಾರಿ: ಸರ್ಕಾರಿ ಅಧಿಕಾರಿಯ ಮೇಲೆ ಕಾರ್ಪೊರೇಟರ್ ಹಲ್ಲೆ ಮಾಡಿದ ಆರೋಪ ಕೇಳಿಬಂದಿದೆ. ಶಾಸಕ ಭರತ್ ರೆಡ್ಡಿ ವಾರ್ಡ್ ಭೇಟಿಯ ವೇಳೆಯೇ ಹಲ್ಲೆ ನಡೆದಿದೆ ಎನ್ನಲಾಗುತ್ತಿದೆ.

ಪಾಲಿಕೆ ಎಇಇ ವೀರೇಶ್ ಮೇಲೆ ಕಾರ್ಪೋರೇಟರ್ ಕುಬೇರ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ವಿವಿಧ ಅಭಿವೃದ್ಧಿ ಕಾರ್ಯಕ್ಕೆ ಚಾಲನೆ ನೀಡಲು ಶಾಸಕ ಭರತ್ ರೆಡ್ಡಿ ಕಾರ್ಪೋರೇಟರ್ ಕುಬೇರ ಅವರ ವಾರ್ಡಿಗೆ ಬಂದಿದ್ದರು. ಈ ವೇಳೆ ಕಾರ್ಪೋರೇಟರ್ ಕುಬೇರ ಮತ್ತು ವೀರೇಶ್ ಮಧ್ಯೆ ವಾಗ್ವಾದ ನಡೆದಿದೆ. ಇಬ್ಬರ ಜಗಳ ತಿಳಿಗೊಳಿಸಿದ ಶಾಸಕ ಭರತ್ ರೆಡ್ಡಿ ಮನೆಯೊಳಗೆ ಹೋದಾಗ ಮತ್ತೊಮ್ಮೆ ಜಗಳವಾಡಿ ಹಲ್ಲೆ ಮಾಡಿದ್ದಾರೆ.

ತಮ್ಮ ವಾರ್ಡ್ ನಲ್ಲಿ ಒತ್ತುವರಿ ತೆರವು ಮಾಡುವಂತೆ ವೀರೇಶ್ ಅವರಿಗೆ ತಿಳಿಸಿದ್ದ ಕಾರ್ಪೋರೇಟರ್ ಕುಬೇರ ಒತ್ತುವರಿ ತೆರವು ವಿಳಂಬವಾದ ಹಿನ್ನೆಲೆ ಹಲ್ಲೆ ಮಾಡಲಾಗಿದೆ ಎಂದು ವೀರೇಶ್ ಆರೋಪಿಸಿದ್ದಾರೆ.

ಸರ್ಕಾರಿ ಅಧಿಕಾರಿಗಳ ಮೇಲೆ ಯಾರೇ ಹಲ್ಲೆ ಮಾಡಿದರೂ ತಪ್ಪು. ತಪ್ಪಿತಸ್ಥರ ವಿರುದ್ಧ ಕ್ರಮ ತೆಗೆದು ಕೊಳ್ಳುಬೇಕು ಎಂದು ಶಾಸಕ ಭರತ್ ರೆಡ್ಡಿ ಹೇಳಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani