ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಶವಗಳನ್ನು ಹೂತಿಡಲಾಗಿದೆ ಎಂದು ಆರೋಪಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಜು. 15ರಂದು ಬೆಳ್ತಂಗಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದ ತನಿಖಾ ವರದಿ ಕುರಿತು ಎಸ್‌ಐಟಿ ಪರ ಶನಿವಾರ ಸರಕಾರಿ ಅಭಿಯೋಜಕರು ನ್ಯಾಯಾಲಯದಲ್ಲಿ ವಾದ ಮಂಡಿಸಿದರು.
ಎಸ್‌ಐಟಿ ಸಲ್ಲಿಸಿರುವ ವರದಿ ಆಧರಿಸಿ ಸಹಾಯಕ ಸರಕಾರಿ ಅಭಿಯೋಜಕ ದಿವ್ಯರಾಜ್ ಹೆಗ್ಡೆ ಅವರು, ಎಸ್‌ಐಟಿ ಅಂತಿಮ ವರದಿ ಯಲ್ಲಿ ಉಲ್ಲೇಖೀಸಿರುವ ಅಂಶಗಳ ಆಧಾರದಲ್ಲಿ ಚಿನ್ನಯ್ಯ ಹಾಗೂ ದುಷ್ಪ್ರೇರಣೆ ನೀಡಿದ ಮಹೇಶ್ ಶೆಟ್ಟಿ ತಿಮರೋಡಿ, ಗಿರೀಶ್ ಮಟ್ಟಣ್ಣನವರ್, ಜಯಂತ್ ಟಿ., ವಿಟ್ಠಲ ಗೌಡ ಹಾಗೂ ಸುಜಾತಾ ಭಟ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ವಾದ ಮಂಡಿಸಿದರು.
ಚಿನ್ನಯ್ಯ ಈ ಹಿಂದೆ ನೀಡಿದ್ದ ದೂರು ಸಂಪೂರ್ಣ ಸುಳ್ಳಿನಿಂದ ಕೂಡಿದೆ ಎಂಬ ಅಂಶವನ್ನೂ ವಾದದ ವೇಳೆ ಪ್ರಸ್ತಾವಿಸ ಲಾಯಿತು. ಚಿನ್ನಯ್ಯ, ಎಸ್‌ಐಟಿ ಎಸ್‌ಪಿ ಸೈಮನ್ ಹಾಗೂ ತನಿಖಾ ತಂಡದ ಸಿಬಂದಿ ನ್ಯಾಯಾಲಯಕ್ಕೆ ಹಾಜರಾಗಿ ದ್ದರು. ಎಸ್‌ಐಟಿ ಪರ ವಾದ ಪೂರ್ಣ ಗೊಂಡಿದ್ದು, ಮುಂದಿನ ವಿಚಾರಣೆ ಅ. 30ರಂದು ನಡೆಯಲಿದೆ.

