Dailyhunt
Belthangady: ಕೊಕ್ಕಡ ಬಾರ್‌ನಲ್ಲಿ ಇಬ್ಬರ ಮೇಲೆ ಹಲ್ಲೆ

Belthangady: ಕೊಕ್ಕಡ ಬಾರ್‌ನಲ್ಲಿ ಇಬ್ಬರ ಮೇಲೆ ಹಲ್ಲೆ

ಬೆಳ್ತಂಗಡಿ: ಕೊಕ್ಕಡದ ಬಾರ್‌ ಒಂದರಲ್ಲಿ ಹಣಕಾಸಿನ ವಿಷಯದಲ್ಲಿ ನಡೆದ ಗಲಾಟೆಗೆ ಸಂಬಂಧಿಸಿ ನಾಲ್ಕು ಮಂದಿಯ ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಯತೀಶ್, ಧನುಷ್ ಭಂಡಾರಿ,ಶರತ್ ಭಂಡಾರಿ, ಪ್ರವೀಣ್ ಆರೋಪಿಗಳು. ಕೊಕ್ಕಡದ ಬಾರ್‌ ಒಂದರಲ್ಲಿ ಮಾ.

29ರಂದು ರಾತ್ರಿ 9 ಗಂಟೆಗೆ ಕೊಕ್ಕಡ ಗ್ರಾಮದ ಹೊಸ ಮನೆ ನಿವಾಸಿ ಅಕ್ಷಯ್ ಎಂಬವರು ಮದ್ಯ ಸೇವಿಸಲು ಕುಳಿತಿರುವ ಸಮಯದಲ್ಲಿ ಆರೋಪಿಗಳ ಪೈಕಿ ಯತೀಶ್ ಬಂದು ಅವ್ಯಾಚ ಶಬ್ದಗಳಿಂದ ಬೈದು ದೀಕ್ಷಿತ್ ಗೆ ಹಣ ಕೊಡು ಎಂದಿದ್ದ. ಬಳಿಕ ಅಕ್ಷಯ್‌ನ ಕುತ್ತಿಗೆ ಪಟ್ಟಿಯನ್ನು ಹಿಡಿದು ಎಳೆದುಕೊಂಡು ಬಾರ್ ಹಿಂಬದಿಗೆ ಹೋಗಿ ಯತೀಶ್, ಧನುಷ್ ಭಂಡಾರಿ, ಶರತ್ ಭಂಡಾರಿ, ಪ್ರವೀಣ್ ಸೇರಿಕೊಂಡು ಹಲ್ಲೆ ನಡೆಸಿ, ಕಾಲಿನಿಂದ ತುಳಿದು ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ.

ಗಲಾಟೆ ಬಿಡಿಸಲು ಬಂದ ಸಂದೀಪ್ ಎಂಬವರಿಗೂ ಹಲ್ಲೆ ನಡೆಸಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಹಲ್ಲೆಗೊಳಗಾದ ಅಕ್ಷಯ್ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani