Dailyhunt Logo
  • Light mode
    Follow system
    Dark mode
    • Play Story
    • App Story
Ben Stokes: ಕ್ರಿಕೆಟ್‌ನ ಆಕ್ರಮಣಕಾರಿ ಅಧ್ಯಾಯ ಮುಗಿಸಿದ ಬೆನ್‌ ಸ್ಟೋಕ್ಸ್‌

Ben Stokes: ಕ್ರಿಕೆಟ್‌ನ ಆಕ್ರಮಣಕಾರಿ ಅಧ್ಯಾಯ ಮುಗಿಸಿದ ಬೆನ್‌ ಸ್ಟೋಕ್ಸ್‌

ಕ್ರಿಕೆಟ್‌ ಜಗತ್ತಿನಲ್ಲಿ ಅತಿ ಹೆಚ್ಚು ವೀಕ್ಷಕರನ್ನು ಹೊಂದಿರುವ ಕ್ರೀಡೆಯಾಗಿದೆ.ಇಂಗ್ಲೆಂಡ್‌ ದೇಶವನ್ನು ಕ್ರಿಕೆಟ್‌ ನ ಜನಕ ದೇಶವೆಂದು ಸಹ ಕರೆಯಲಾಗುತ್ತದೆ. ಇಂದು ಇದೆ ದೇಶದ ಪ್ರಸ್ತುತ ಇಂಗ್ಲೆಂಡ್‌ ಕ್ರಿಕೆಟ್‌ ನ ಟೆಸ್ಟ್‌ ಪಂದ್ಯದ ನಾಯಕ ಬೆನ್‌ ಸ್ಟೋಕ್ಸ್‌ ಎಲ್ಲ ಕ್ರಿಕೆಟ್‌ ನಿಂದ ನಿವೃತ್ತಿ ಘೋಷಿಸಿರುವುದು ಇಂಗ್ಲೆಂಡ್‌ ಮತ್ತು ಕ್ರಿಕೆಟ್‌ ಜಗತ್ತಿಗೆ ಅಪಾರ ನಷ್ಟವೆಂದರೆ ತಪ್ಪಾಗಲಾರದು.

ಬೆನ್‌ ತಮ್ಮ ಆಕ್ರಮಣಕಾರಿ ಆಟಕ್ಕೆ ಪ್ರಸಿದ್ದರಾಗಿದ್ದರು ಹಾಗೂ ತಮ್ಮ ಕೊನೆಯ ಟೆಸ್ಟ್‌ ನ ಕೊನೆಯ ಇನ್ಸಿಂಗ್‌ ನಲ್ಲಿ ಆಕ್ರಮಣಕಾರಿಯಾಗಿ ಆಟವಾಡಿದರು. ಬ್ರೆಂಡನ್‌ ಮೆಕಲಮ್‌ ಮತ್ತು ಬೆನ್‌ ಸ್ಟೋಕ್ಸ್‌ ಇಬ್ಬರು 2022 ರಲ್ಲಿ ಕ್ರಿಕೆಟ್‌ ಗೆ ಬಾಜ್‌ಬಾಲ್‌ ಎಂಬ ಆಕ್ರಮಣಕಾರಿ ತಂತ್ರವನ್ನು ಪರಿಚಯಿಸಿದರು.

ಬಾಜ್‌ಬಾಲ್‌ ಎಂದರೆ ಕ್ರಿಕೆಟ್‌ ಪ್ರತಿ ಹಂತದಲ್ಲಿ ಆಕ್ರಮಣಕಾರಿ ಆಟ ಪ್ರದರ್ಶನ ಮಾಡುವುದಾಗಿದೆ. ಟೆಸ್ಟ್‌ ಕ್ರಿಕೆಟ್‌ ಎಂದರೆ ನಿಧಾನವಾಗಿ ರನ್‌ ಗಳಿಸುವುದು ಎಂಬುದಾಗಿತ್ತು. ಅದರೆ ಬಾಜ್‌ಬಾಲ್‌ ಆಟದಲ್ಲಿ ಟೆಸ್ಟ್‌ ಕ್ರಿಕೆಟ್‌ ನಲ್ಲಿ 6 ಕ್ಕೂ ಹೆಚ್ಚು ಸರಾಸರಿಯಲ್ಲಿರನ್‌ ಗಳಿಸಿದ ಮತ್ತು ವಿರುದ್ದ ತಂಡಕ್ಕೆ ಇನ್ಸಿಂಗ್‌ ಘೋಷಣೆ ಮಾಡಿಕೊಂಡು ಪೈಪೋಟಿ ನೀಡುವುದೆ ಬಾಜ್‌ಬಾಲ್‌ ತಂತ್ರ.

ಮೂಲತಃ ಬೆನ್‌ ಆಲ್‌ರೌಂಡರ್‌ಆಗಿದ್ದರು, ಆಸಿಸ್‌ ಸರಣಿ , 2019 ICC Men's Cricket World Cup and the 2022 ICC Men's T20 World Cup ನ ಇಂಗ್ಲೆಂಡ್‌ ನ ಗೆಲುವಿನಲ್ಲಿ ಇವರ ಪಾತ್ರ ತುಂಬಾ ದೊಡ್ಡದಾಗಿದೆ. ಇವರ ಪೂರ್ಣ ಹೆಸರು ಬೆಂಜಮಿನ್‌ ಆಂಡ್ರ್ಯೂ ಸ್ಟೋಕ್ಸ್‌ ಜೂನ್‌ 4, 1991 ರಂದು ನ್ಯೂಜಿಲೆಂಡ್‌ನ‌ ಕ್ರೈಸ್ಟ್‌ ಚರ್ಚ್‌ನಲ್ಲಿ ರಗ್ಬಿ ಲೀಗ್‌ ಫುಟ್‌ಬಾಲ್‌ ಆಟಗಾರ ಮತ್ತು ತರಬೇತುದಾರ ಗೆರಾರ್ಡ್‌ ಸ್ಟೋಕ್ಸ್‌ ಅವರ ಮಗನಾಗಿ ಜನಿಸಿದರು .

ಇವರ ತಾಯಿಗೆ ಮಾವೊರಿ ಪರಂಪರೆ ಇದೆ. 2003 ರಲ್ಲಿ ತಮ್ಮ 12 ನೇ ವಯಸ್ಸಿನಲ್ಲಿ, ಸ್ಟೋಕ್ಸ್‌ ಅವರ ತಂದೆ ವರ್ಕಿಂಗ್ಟನ್‌ ಟೌನ್‌ ರಗ್ಬಿ ಲೀಗ್‌ ಫುಟ್‌ಬಾಲ್‌ ಕ್ಲಬ್‌ನ ಮುಖ್ಯ ತರಬೇತುದಾರರಾಗಿ ನೇಮಕಗೊಂಡಾಗ ಇಂಗ್ಲೆಂಡ್‌ಗೆ ಸ್ಥಳಾಂತರಗೊಂಡರು. ಕುಟುಂಬವು ವೆಸ್ಟ್‌ ಕುಂಬ್ರಿಯನ್‌ ಪಟ್ಟಣವಾದ ಕಾಕರ್‌ಮೌತ್‌ನಲ್ಲಿ ನೆಲೆಸಿತು, ಅಲ್ಲಿ ಬೆನ್‌ ಕಾಕರ್‌ಮೌತ್‌ ಶಾಲೆಯಲ್ಲಿ ವ್ಯಾಸಂಗ ಮಾಡಿದರು.

ಈ ಸಮಯದಲ್ಲಿ ಅವರು ಸ್ಥಳೀಯ ಕಾಕರ್‌ಮೌತ್‌ ಕ್ರಿಕೆಟ್‌ ಕ್ಲಬ್‌ನೊಂದಿಗೆ ತಮ್ಮ ಕ್ರಿಕೆಟ್‌ ಕೌಶಲಗಳನ್ನು ಬೆಳೆಸಿಕೊಂಡರು, ಅನಂತರ 2006 ರಲ್ಲಿ ಕೇವಲ 15 ವರ್ಷ ವಯಸ್ಸಿನಲ್ಲಿ ಅವರ ಉತ್ತರ ಲಂಕಾಷೈರ್‌ ಮತ್ತು ಕುಂಬ್ರಿಯಾ ಕ್ರಿಕೆಟ್‌ ಲೀಗ್‌ ಪ್ರೀಮಿಯರ್‌ ಡಿವಿಷನ್‌ ಪ್ರಶಸ್ತಿ ಗೆಲುವಿಗೆ ಕೊಡುಗೆ ನೀಡಿದರು. ಅವರು 16ನೇ ವಯಸ್ಸಿನಲ್ಲಿ ದೈಹಿಕ ಶಿಕ್ಷಣದಲ್ಲಿ ಕೇವಲ ಒಂದು ಎಇಖಉ ಯೊಂದಿಗೆ ಶಾಲೆಯನ್ನು ತೊರೆದರು. ಅವರ ಪೋಷಕರು ಅನಂತರ ಕ್ರೆ„ಸ್ಟ್‌ಚರ್ಚ್‌ನಲ್ಲಿ ಮತ್ತೆ ವಾಸಿಸಲು ನ್ಯೂಜಿಲೆಂಡ್‌ಗೆ ಮರಳಿದರು.

ಬೆನ್‌ ಸ್ಟೋಕ್ಸ್‌ ರವರು 2011 ರಲ್ಲಿ ಏಕದಿನ ಮತ್ತು ಟಿ20 ಪಂದ್ಯಗಳಿಗೆ ಪಾದಾರ್ಪಣೆ ಮಾಡಿದರು ಮತ್ತು 2013 ರಲ್ಲಿ ಟೆಸ್ಟ್‌ ಕ್ರಿಕೆಟ್‌ ಗೆ ಪಾದಾರ್ಪಣೆ ಮಾಡಿದರು. ಅವರು ಅನಂತರ 2019 ರ ಕ್ರಿಕೆಟ್‌ ವಿಶ್ವಕಪ್‌ ಗೆದ್ದ ಇಂಗ್ಲೆಂಡ್‌ ತಂಡದ ಪ್ರಮುಖ ಭಾಗವಾಗಿದ್ದರು. ಫೈನಲ್‌ನಲ್ಲಿ ಇಂಗ್ಲೆಂಡ್‌ನ‌ ಇನ್ನಿಂಗ್ಸ್‌ನಲ್ಲಿ ಅತೀ ಹೆಚ್ಚು ಸ್ಕೋರ್‌ಗಳಿಸಿದರು ಮತ್ತು ಸೂಪರ್‌ಓವರ್‌ನಲ್ಲಿ ಬ್ಯಾಟಿಂಗ್‌ ಮಾಡಿ ಪಂದ್ಯ ಗೆಲ್ಲಲು ಪ್ರಮುಖ ಕಾರಣರಾದರು.

ಇದೇ ಪಂದ್ಯದಲ್ಲಿ ಮ್ಯಾನ್‌ ಆಫ್‌ ದಿ ಮ್ಯಾಚ್‌ ಪ್ರಶಸ್ತಿಯನ್ನು ಗೆದ್ದರು. ಅವರನ್ನು 2019, 2020 ಮತ್ತು 2022 ರಲ್ಲಿ ವಿಸ್ಡನ್‌ ಲೀಡಿಂಗ್‌ ಕ್ರಿಕೆಟಿಗ ಇನ್‌ ದಿ ವರ್ಲ್ಡ್ ಎಂದು ಗೌರವಿಸಲಾಯಿತು ಮತ್ತು 2019 ರಲ್ಲಿ ಅತ್ಯುತ್ತಮ ಪುರುಷ ಕ್ರಿಕೆಟಿಗ ಮತ್ತು ಬಿಬಿಸಿ ನ್ಪೋರ್ಟ್ಸ್ ಪರ್ಸನಾಲಿಟಿ ಆಫ್‌ ದಿ ಇಯರ್‌ಪ್ರಶಸ್ತಿಯನ್ನು ಸಹ ಇವರು ಪಡೆದಿದ್ದಾರೆ. ಎ. 2022 ರಲ್ಲಿ ಇಂಗ್ಲೆಂಡ್‌ನ‌ ಟೆಸ್ಟ್‌ ತಂಡದ ನಾಯಕರನ್ನಾಗಿ ನೇಮಿಸಲಾಯಿತು. ಅವರು 2022 ರ ಟಿ20 ವಿಶ್ವಕಪ್‌ ಗೆದ್ದ ಇಂಗ್ಲೆಂಡ್‌ ತಂಡದ ಭಾಗವಾಗಿದ್ದರು. ಫೈನಲ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದರು.

ಆಲ್‌ರೌಂಡರ್‌ಆಗಿರುವ ಸ್ಟೋಕ್ಸ್‌ ಎಡಗೈ ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್‌ ಮತ್ತು ಬಲಗೈ ವೇಗದ ಬೌಲರ್‌. ಇಂಗ್ಲೆಂಡ್‌ನ‌ 2015-16 ಪ್ರವಾಸದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 258 ರನ್‌ ಗಳಿಸುವ ಮೂಲಕ ಆರನೇ ಸ್ಥಾನದಲ್ಲಿ ಇನ್ನಿಂಗ್ಸ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಟೆಸ್ಟ್‌ ವಿಶ್ವ ದಾಖಲೆಯನ್ನು ಇವರು ಹೊಂದಿದ್ದಾರೆ. ಅದೇ ಟೆಸ್ಟ್‌ನಲ್ಲಿ, ಅವರು ಮತ್ತು ಜಾನಿ ಬೈರ್‌ಸ್ಟೋವ್‌ 399 ರನ್‌ಗಳೊಂದಿಗೆ ಟೆಸ್ಟ್‌ ನಲ್ಲಿ ಆರನೇ ವಿಕೆಟ್‌ಗೆ ಅತಿ ಹೆಚ್ಚು ರನ್‌ ಗಳಿಸಿದ ಜೋಡಿ ಎಂಬ ವಿಶ್ವ ದಾಖಲೆಯನ್ನು ಸ್ಥಾಪಿಸಿದರು.

ಫೆ.2023 ರಲ್ಲಿ, ಅವರು ಟೆಸ್ಟ್‌ ವೃತ್ತಿಜೀವನದಲ್ಲಿ ಹೊಡೆದ ಒಟ್ಟು ಸಿಕ್ಸರ್‌ಗಳ ಸಂಖ್ಯೆಯ ಹೊಸ ದಾಖಲೆಯನ್ನು ಸ್ಥಾಪಿಸಿದರು, ಆ ಸಮಯದಲ್ಲಿ ಅವರ ತರಬೇತುದಾರ ಬ್ರೆಂಡನ್‌ ಮೆಕಲಮ್‌ನ ಹಿಂದಿನ 107 ಸಿಕ್ಸರ್‌ಗಳ ಸಂಖ್ಯೆಯನ್ನು ಮೀರಿಸಿದರು. ಫೆ. 15, 2024 ರಂದು ಭಾರತ ವಿರುದ್ಧ ತಮ್ಮ 100 ನೇ ಟೆಸ್ಟ್‌ ಪಂದ್ಯವನ್ನು ಆಡಿದರು ಹಾಗೂ ಪ್ರಸ್ತುತ ಜೂನ್‌ 2026 ರಲ್ಲಿ ನ್ಯೂಜಿಲ್ಯಾಂಡ್‌ ನ ವಿರುದ್ದ ಕೊನೆಯ ಪಂದ್ಯದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದರು.

ಬೆನ್‌ ಸ್ಟೋಕ್ಸ್‌ 121 ಟೆಸ್ಟ್‌ ಪಂದ್ಯಗಳಿಂದ 7,228 ರನ್‌ ಮತ್ತು 246 ವಿಕೆಟ್‌, 114 ಏಕದಿನ ಪಂದ್ಯಗಳಿಂದ 3,463 ಹಾಗೂ 73 ವಿಕೆಟ್‌ 43 ಖ20 ಪಂದ್ಯ ಗಳಿಂದ 585 ರನ್‌ 26 ವಿಕೆಟ್‌ ಗಳಿಸಿದ್ದಾರೆ. ಇಬರ ನಿವೃತ್ತಿ ಕ್ರಿಕೆಟ್‌ ಜಗತ್ತು ಮತ್ತು ಇಂಗ್ಲೆಂಡ್‌ ಕ್ರಿಕೆಟ್‌ ಆಕ್ರಮಣಕಾರಿ ಯುಗದ ಅಂತ್ಯವೆಂದರೆ ಅತಿಶಯೋಕ್ತಿಯಾಗಲಾರದು.

-ರಾಸುಮ ಭಟ್‌

ಚಿಕ್ಕಮಗಳೂರು

Dailyhunt
Disclaimer: This content has not been generated, created or edited by Dailyhunt. Publisher: Udayavani