ಮುಂಬೈ: ಬಾಲಿವುಡ್ ಸೂಪರ್‌ಸ್ಟಾರ್ ಆಮೀರ್ ಖಾನ್ ಅವರು ತಮ್ಮ ಗೆಳತಿ ಗೌರಿ ಸ್ಪ್ರ್ಯಾಟ್ ಅವರೊಂದಿಗೆ ಜುಲೈ 5ರಂದು ಮುಂಬೈನಲ್ಲಿರುವ ತಮ್ಮ ನಿವಾಸದಲ್ಲೇ ಸರಳವಾಗಿ ವಿವಾಹವಾಗಲಿದ್ದಾರೆ.
ಖ್ಯಾತ ನಿರ್ದೇಶಕ ರಾಜ್‌ಕುಮಾರ್ ಹಿರಾನಿ ಅವರ ಬಹುನಿರೀಕ್ಷಿತ ವೆಬ್ ಸರಣಿ 'ಪ್ರೀತಮ್ ಆಂಡ್ ಪೆಡ್ರೊ' ಪ್ರೀವಿಶೋ ಪ್ರದರ್ಶನದಲ್ಲಿ ತಮ್ಮ ಮಗ ಜುನೈದ್ ಖಾನ್ ಅವರೊಂದಿಗೆ ಪಾಲ್ಗೊಂಡಿದ್ದ 61 ವರ್ಷದ ನಟ ಆಮೀರ್ ಖಾನ್, ಸುದ್ದಿಗಾರರೊಂದಿಗೆ ಮಾತನಾಡುವಾಗ ಈ ಮಹತ್ವದ ವಿಷಯವನ್ನು ಅಧಿಕೃತವಾಗಿ ಹಂಚಿಕೊಂಡಿದ್ದಾರೆ.
ಸುಮಾರು 150 ಅತಿಥಿಗಳು ಮದುವೆಯಲ್ಲಿ ಪಾಲ್ಗೊಳ್ಳಲಿದ್ದಾರೆ.

