Dailyhunt Logo
  • Light mode
    Follow system
    Dark mode
    • Play Story
    • App Story
Bengaluru: ಡೇ ಕೇರ್‌ ಸೆಂಟರ್‌ ಪ್ರಕರಣ: ಇಬ್ಬರು ಮಹಿಳಾ ಸಿಬ್ಬಂದಿ ಬಂಧನ

Bengaluru: ಡೇ ಕೇರ್‌ ಸೆಂಟರ್‌ ಪ್ರಕರಣ: ಇಬ್ಬರು ಮಹಿಳಾ ಸಿಬ್ಬಂದಿ ಬಂಧನ

ಬೆಂಗಳೂರು: ಇಲ್ಲಿನ ಬ್ರೂಕ್‌ಫೀಲ್ಡ್‌ನಲ್ಲಿರುವ ಡೇಕೇರ್‌ ಸೆಂಟರ್‌ ಒಂದದಲ್ಲಿ ನಡೆದ ಅಮಾನವೀಯ ಘಟನೆಗೆ ಸಂಬಂಧಿಸಿದಂತೆ ಇಬ್ಬರು ಆರೈಕೆದಾರರನ್ನು ಪೊಲೀಸರು ಬಂಧಿಸಿದ್ದಾರೆ. ಪುಟಾಣಿ ಮಕ್ಕಳ ಯೋಗಕ್ಷೇಮ ನೋಡಿಕೊಳ್ಳಬೇಕಾದ ಇವರುಗಳು, ಚಿಕ್ಕಮಕ್ಕಳಿಗೆ ಹಿಂಸೆ ನೀಡುವ ವಿಡಿಯೋ ವೈರಲ್‌ ಆಗಿತ್ತು.

ಡೇ ಕೇರ್‌ ನೆಪದಲ್ಲಿ ಚಿಕ್ಕಮಕ್ಕಳನ್ನು ಬಾತ್‌ ರೂಂನಲ್ಲಿ ಕೂಡಿ ಹಾಕಿರುವುದು ಮಾತ್ರವಲ್ಲದೆ, ವಾಷಿಂಗ್‌ ಮಷೀನ್‌ ಒಳಗಡೆ ಹಾಕಿದ್ದ ವಿಡಿಯೋ ವೈರಲ್ ಆದಾಗ ಘಟನೆ ಬೆಳಕಿಗೆ ಬಂದಿತ್ತು.

ಹಗಲು ಪಾಲನಾ ಕೇಂದ್ರದ ಇಬ್ಬರು ಸಿಬ್ಬಂದಿಗಳಾದ ವಿಜಯಲಕ್ಷ್ಮೀ ಮತ್ತು ಮಂಜುಳಾರನ್ನು ಬಂಧಿಸಲಾಗಿದೆ.

ಈ ಇಬ್ಬರ ವಿರುದ್ಧ ಪೊಲೀಸರಿಗೆ ಸಾಕಷ್ಟು ಸಾಕ್ಷಿಗಳು ದೊರೆತಿದೆ. ಬಂಧಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ವರದಿ ಹೇಳಿದೆ.

ಘಟನೆಯಲ್ಲಿ ಐಟಿ ಸಂಸ್ಥೆಯ ಪಾತ್ರ ಮತ್ತು ಲಿಟಲ್‌ ಸ್ಕಾಲರ್‌ ಎಂಬ ಏಜೆನ್ಸಿಯ ಪಾತ್ರದ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ವರದಿಯಾಗಿದೆ.

ಬೇಬಿ ಡೇ ಕೇರ್‌ ಸೆಂಟರ್‌ನಲ್ಲಿ ಗಲಾಟೆ ಮಾಡುವ ಮಕ್ಕಳನ್ನು ವಾಷಿಂಗ್‌ ಮೆಷಿನ್‌ನಲ್ಲಿ ಹಾಕಿ ದೈಹಿಕ ಹಿಂಸೆ ನೀಡಿದ್ದ ಆಘಾತಕಾರಿ ಘಟನೆ ನಾಗರಿಕ ಸಮಾಜವನ್ನು ಬೆಚ್ಚಿ ಬೀಳಿಸಿದೆ. ವಿಡಿಯೋ ವೈರಲ್‌ ಆದ ಬೆನ್ನಲ್ಲೇ ಮಕ್ಕಳ ಪೋಷಿಸುವ ಹಗಲು ಪಾಲನಾ ಕೇಂದ್ರಗಳ (ಡೇ ಕೇರ್‌ ಸೆಂಟರ್‌) ಮೇಲ್ವಿಚಾರಣೆಗೆ ವಿಶೇಷ ತಂಡ ರಚಿಸುವಂತೆ ಒತ್ತಾಯಿಸಿ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವು ಮುಖ್ಯಮಂತ್ರಿಗೆ ಮನವಿ ಮಾಡಿದೆ

Dailyhunt
Disclaimer: This content has not been generated, created or edited by Dailyhunt. Publisher: Udayavani