Dailyhunt Logo
  • Light mode
    Follow system
    Dark mode
    • Play Story
    • App Story
ಬೆಂಗಳೂರು: ಗಿಟಾರ್‌ ಬ್ಯಾಗನ್ನೇ ಹಿಂಬದಿ ಸವಾರ ಎಂದು ದಂಡ ಹಾಕಿದ ಎಐ ಕ್ಯಾಮೆರಾ!

ಬೆಂಗಳೂರು: ಗಿಟಾರ್‌ ಬ್ಯಾಗನ್ನೇ ಹಿಂಬದಿ ಸವಾರ ಎಂದು ದಂಡ ಹಾಕಿದ ಎಐ ಕ್ಯಾಮೆರಾ!

ಬೆಂಗಳೂರು: ಸಂಚಾರ ನಿಯಮಗಳ ಉಲ್ಲಂಘನೆ ನಿಯಂತ್ರಣಕ್ಕಾಗಿ ನಗರದ ಬಹುತೇಕ ವೃತ್ತ ಹಾಗೂ ಮುಖ್ಯರಸ್ತೆಗಳಲ್ಲಿ ಕೃತಕ ಬುದ್ದಿಮತ್ತೆ (ಎಐ) ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಆದರೆ, ಅದೇ ಕ್ಯಾಮೆರಾ ಇದೀಗ ಎಡವಟ್ಟು ಮಾಡಿದೆ.

ಗಿಟಾರ್‌ ಬ್ಯಾಗ್‌ ವಿರುದ್ಧ ಹೆಲ್ಮೆಟ್‌ ಹಾಕದಕ್ಕೆ ದಂಡ ವಿಧಿಸಿದೆ.

ಸಾವಿಕ್‌ದತ್ತ ಎಂಬವರು ಬೆನ್ನ ಹಿಂದೆ ಗಿಟಾರ್‌ ಬ್ಯಾಗ್‌ ಹಾಕಿಕೊಂಡು ಹೆಬ್ಟಾಳ ಮತ್ತು ಟಿನ್‌ ಫ್ಯಾಕ್ಟರಿ ಮಾರ್ಗದಲ್ಲಿ ಚಲಿಸುತ್ತಿದ್ದರು. ಮಾರ್ಗಮಧ್ಯೆ ಟ್ರಾಫಿಕ್‌ ಸಿಗ್ನಲ್‌ ವೊಂದರಲ್ಲಿ ಎ.ಐ ಕ್ಯಾಮೆರಾ ಗಿಟಾರ್‌ ಬ್ಯಾಗ್‌ಅನ್ನೇ ಹಿಂಬದಿ ಸವಾರ ಎಂದು ಗ್ರಹಿಸಿ, ಹೆಲ್ಮೆಟ್‌ ಧರಿಸಿಲ್ಲ ಎಂಬ ಕಾರಣಕ್ಕೆ ಫೋಟೋ ಕ್ಲಿಕ್ಕಿಸಿದೆ.

ಅದನ್ನೇ ಸಿಬಂದಿ ವೆಬ್‌ಸೈಟ್‌ಗೆ ಅಪ್‌ ಲೋಡ್‌ ಮಾಡಿ 500 ರೂ. ದಂಡ ವಿಧಿಸಿದ್ದಾರೆ. ಬಳಿಕ, ಸೌವಿಕ್‌ ದತ್ತ ಅವರ ಪತ್ನಿಯ ಮೊಬೈಲ್‌ ಸಂಖ್ಯೆಗೆ ದಂಡ ವಿಧಿಸಿರುವ ಸಂದೇಶ ಕಳುಹಿಸಿದ್ದಾರೆ. ನಂತರ ಚಲನ್‌ ಪರಿಶೀಲಿಸಿದಾಗ ಎಐ ಎಡವಟ್ಟು ಗಮನಕ್ಕೆ ಬಂದಿದೆ.

ದಂಡದ ಚಲನ್‌ ಮತ್ತು ಫೋಟೋವನ್ನು ಸೌವಿಕ್‌ ದತ್ತ ಅವರು ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡು ಸಂಚಾರ ವಿಭಾಗದ ಪೊಲೀಸರಿಗೂ ಟ್ಯಾಗ್‌ ಮಾಡಿದ್ದಾರೆ. ಅದನ್ನು ಪರಿಶೀಲಿಸಿದ ಪೊಲೀಸರು, ಫೋಟೋ ಹಾಗೂ ಚಲನ್‌ ಕಳುಹಿಸುವಂತೆ ಕೋರಿದ್ದಾರೆ. ಸರಿಪಡಿಸುವ ಭರವಸೆಯನ್ನೂ ನೀಡಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani