Dailyhunt Logo
  • Light mode
    Follow system
    Dark mode
    • Play Story
    • App Story
ಬೇಟೆಯಾಡಲು ಮಾಂಸದಂಗಡಿಗೆ ನುಗ್ಗಿದ ಹೆಬ್ಬಾವನ್ನೇ ಹಿಡಿದು ಕುತ್ತಿಗೆಗೆ ಸುತ್ತಿಕೊಂಡ ವ್ಯಕ್ತಿ!

ಬೇಟೆಯಾಡಲು ಮಾಂಸದಂಗಡಿಗೆ ನುಗ್ಗಿದ ಹೆಬ್ಬಾವನ್ನೇ ಹಿಡಿದು ಕುತ್ತಿಗೆಗೆ ಸುತ್ತಿಕೊಂಡ ವ್ಯಕ್ತಿ!

ತ್ತರ ಪ್ರದೇಶ: ಮೇಕೆಯನ್ನು ಬೇಟೆಯಾಡಲು ಮಾಂಸದಂಗಡಿಗೆ ನುಗ್ಗಿದ ಹೆಬ್ಬಾವನ್ನೇ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಕೈಯಲ್ಲಿ ಹಿಡಿದು ಕುತ್ತಿಗೆಗೆ ಸುತ್ತಿಕೊಂಡು ಆಟವಾಡಿರುವ ಭಯಾನಕ ಘಟನೆಯೊಂದು ಉತ್ತರ ಪ್ರದೇಶದ ಬರಾಬಂಕಿಯಲ್ಲಿ ನಡೆದಿದೆ.

ಶುಕ್ರವಾರ ತಡರಾತ್ರಿ ಸುಮಾರು ಹದಿನೈದು ಅಡಿ ಉದ್ದದ ಹೆಬ್ಬಾವೊಂದು ಮೇಕೆಯನ್ನು ಬೇಟೆಯಾಡಲು ಇಲ್ಲಿನ ಮಾಂಸದಂಗಡಿಗೆ ನುಗ್ಗಿದೆ ಇನ್ನೇನು ಮೇಕೆಯ ಮೇಲೆ ದಾಳಿ ನಡೆಸಬೇಕು ಎನ್ನುವಷ್ಟರಲ್ಲಿ ಮಾಂಸದಂಗಡಿಯ ಮಾಲೀಕ ಹೆಬ್ಬಾವನ್ನು ಗಮನಿಸಿದ್ದಾನೆ ಅಲ್ಲದೆ ಭಯದಿಂದ ಜೋರಾಗಿ ಕಿರುಚಾಡಿದ್ದಾನೆ, ಅಷ್ಟರಲ್ಲೇ ಅಲ್ಲೇ ಪಕ್ಕದಲ್ಲಿದ್ದ ಮದ್ಯವ್ಯಸನಿ ವ್ಯಕ್ತಿಯೊಬ್ಬ ಸ್ಥಳಕ್ಕೆ ಬಂದು ಮದ್ಯದ ಅಮಲಿನಲ್ಲೇ ಹಾವನ್ನು ಹಿಡಿಯಲು ಮುಂದಾಗಿದ್ದಾನೆ, ಅಲ್ಲದೆ ಬರಿಗೈಯಲ್ಲೇ ಹಾವನ್ನು ಹಿಡಿದ್ದಾನೆ ಈ ವೇಳೆ ಹಾವು ವ್ಯಕ್ತಿಯ ಕೈಗೆ ಸುತ್ತಿಹಾಕಿಕೊಂಡಿದೆ, ಯಾವುದಕ್ಕೂ ಕ್ಯಾರೆ ಅನ್ನದ ವ್ಯಕ್ತಿ ಹಾವನ್ನು ಕೈಯಿಂದ ಬಿಚ್ಚಿ ಹೂವಿನ ಹಾರ ಧರಿಸುವಂತೆ ಕತ್ತಿಗೆ ಸುತ್ತಿಕೊಂಡು ಸಾರ್ವಜನಿಕವಾಗಿ ಪ್ರದರ್ಶನ ನೀಡಿದ್ದಾನೆ.

ಈ ವಿಚಿತ್ರ ದೃಶ್ಯವನ್ನು ಕಂಡು ನೂರಾರು ಜನರು ದಿಗ್ಭ್ರಮೆಗೊಂಡಿದ್ದಾರೆ.

ಬಳಿಕ ವ್ಯಕ್ತಿ ಹೆಬ್ಬಾವನ್ನು ದೊಡ್ಡ ಡ್ರಮ್ ಒಳಗೆ ಸುರಕ್ಷಿತವಾಗಿ ಹಾಕಿ, ಅದನ್ನು ಚರಂಡಿಯೊಂದಕ್ಕೆ ಕೊಂಡೊಯ್ದು ಬಿಟ್ಟಿದ್ದಾನೆ. ಈ ವೇಳೆ ಹೆಬ್ಬಾವು ಸುಮಾರು ಮೂರು ಅಡಿ ಎತ್ತರಕ್ಕೆ ತಲೆಯೆತ್ತಿ ಕೆಲಕಾಲ ನಿಂತು ಬಳಿಕ ಅಲ್ಲಿಂದ ಕಣ್ಮರೆಯಾಯಿತು. ಹಾವು ತೆರಳಿದ ನಂತರವೇ ಸ್ಥಳೀಯರು ನಿಟ್ಟುಸಿರು ಬಿಟ್ಟಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani