Dailyhunt Logo
  • Light mode
    Follow system
    Dark mode
    • Play Story
    • App Story
ಭಾರತ "ಎ'ಗೆ ಜಯ; ಸರಣಿ ಆಸೀಸ್‌ ಪಾಲು

ಭಾರತ "ಎ'ಗೆ ಜಯ; ಸರಣಿ ಆಸೀಸ್‌ ಪಾಲು

ಪುದುಚೇರಿ: ಸೂರ್ಯಾಂಶ್‌ ಶೆಡ್ಗೆ ಅವರ ಸ್ಫೋಟಕ ಬ್ಯಾಟಿಂಗ್‌ ಹಾಗೂ ಗುರ್ಜಪ್ನಿàತ್‌ ಸಿಂಗ್‌ ಅವರ ಬೌಲಿಂಗ್‌ ನೆರವಿನಿಂದ ಪ್ರವಾಸಿ ಆಸ್ಟ್ರೇಲಿಯ "ಎ' ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಭಾರತ "ಎ' ತಂಡ 49 ರನ್‌ಗಳ ಭರ್ಜರಿ ಜಯ ದಾಖಲಿಸಿದೆ.

ಈ ಗೆಲುವಿನ ಹೊರತಾಗಿಯೂ 3 ಪಂದ್ಯಗಳ ಸರಣಿ 2-1 ಅಂತರದಲ್ಲಿ ಆಸೀಸ್‌ ಪಾಲಾಯಿತು.

ಟಾಸ್‌ ಸೋತು ಬ್ಯಾಟಿಂಗ್‌ಗೆ ಇಳಿದ ಭಾರತ, ಒಂದು ಹಂತದಲ್ಲಿ 159ಕ್ಕೆ 6 ವಿಕೆಟ್‌ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ ಒಂದಾದ ಸೂರ್ಯಾಂಶ್‌ (66) ಮತ್ತು ವಿಪ್ರಾಜ್‌ ನಿಗಮ್‌ (40) 7ನೇ ವಿಕೆಟ್‌ಗೆ 85 ರನ್‌ ಸೇರಿಸಿ ತಂಡದ ಮೊತ್ತವನ್ನು 275ಕ್ಕೆ ತಲುಪಿಸಿದರು. ಗುರಿ ಬೆನ್ನತ್ತಿದ ಆಸೀಸ್‌ ಪರ ಜೋಶ್‌ ಫಿಲಿಪ್‌ (56) ಹೋರಾಟ ನಡೆಸಿದರೂ, ಗುರ್ಜಪ್ನಿàತ್‌ (56ಕ್ಕೆ 3) ದಾಳಿಗೆ ತತ್ತರಿಸಿ 226 ರನ್ನಿಗೆ ಆಲೌಟ್‌ ಆಯಿತು.

Dailyhunt
Disclaimer: This content has not been generated, created or edited by Dailyhunt. Publisher: Udayavani