ನವದೆಹಲಿ: ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಭಾರತ ಮತ್ತು ಇಸ್ರೇಲ್ ನಡುವೆ ಸಹಿಯಾಗಿದ್ದ ದ್ವಿಪಕ್ಷೀಯ ಹೂಡಿಕೆ ಒಪ್ಪಂದ (ಬಿಐಎ) ಜು.4ರಿಂದ ಜಾರಿಗೆ ಬಂದಿದೆ.
ಹೂಡಿಕೆದಾರರಿಗೆ ಹೆಚ್ಚಿನ ರಕ್ಷಣೆ, ಪಾರದರ್ಶಕ ವಿವಾದ ಪರಿಹಾರ ವ್ಯವಸ್ಥೆ ಹಾಗೂ ಹೂಡಿಕೆ ಉತ್ತೇಜನಕ್ಕೆ ಈ ಒಪ್ಪಂದ ನೆರವಾಗಲಿದೆ.
ಮೂಲಸೌಕರ್ಯ, ಉತ್ಪಾದನೆ, ತಂತ್ರಜ್ಞಾನ, ನವೀಕರಿಸಬಹುದಾದ ಇಂಧನ, ಕೃಷಿ, ಫಿನ್‌ಟೆಕ್, ಆರೋಗ್ಯ ಹಾಗೂ ನಾವೀನ್ಯತೆ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಸಹಕಾರ ವಿಸ್ತರಿಸುವ ಮೂಲಕ ಉಭಯ ದೇಶಗಳ ಆರ್ಥಿಕ ಸಂಬಂಧ ಮತ್ತು ಹೂಡಿಕೆದಾರರ ವಿಶ್ವಾಸವನ್ನು ಬಲಪಡಿಸುವ ಗುರಿಯನ್ನು ಹೊಂದಿದೆ.

