ಭಟ್ಕಳ: ಮೀನುಗಾರಿಕೆಗೆ ತೆರಳಿದ ವೇಳೆ ಕಾಲು ಜಾರಿ ಸಮುದ್ರಕ್ಕೆ ಬಿದ್ದ ಯುವಕನೊಬ್ಬ ನಾಪತ್ತೆಯಾಗಿರುವ ಘಟನೆ ಅಳೇಕೋಡಿ ಬಂದರಿನಲ್ಲಿ ವರದಿಯಾಗಿದೆ.
ಒಡಿಶಾ ರಾಜ್ಯದ ಸುಂದರಗಢ ಜಿಲ್ಲೆಯ ನಿವಾಸಿ ಜೈರಾಮ್ ಬಿರಗಂಟಿ (27) ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದೆ.
ಮಂಗಳವಾರ ರಾತ್ರಿ ೮ ಗಂಟೆಯ ಸುಮಾರಿಗೆ ಘಟನೆ ಸಂಭವಿಸಿದೆ. ಜನಾಬಾಯಿ ಅವರಿಗೆ ಸೇರಿದ "ಶ್ರೀ ಮುಕಾಂಬಿಕಾ ಬೋಟ್"ನಲ್ಲಿ ಮೀನುಗಾರಿಕೆ ಮಾಡಿಕೊಂಡಿದ್ದ ಈತ ಮೀನುಗಾರಿಕೆಗಾಗಿ ಬೋಟ್ ಹತ್ತುವ ಸಂದರ್ಭದಲ್ಲಿ ಅಕಸ್ಮಾತ್ ಕಾಲು ಜಾರಿ ಸಮುದ್ರಕ್ಕೆ ಬಿದ್ದಿದ್ದು ತಕ್ಷಣ ಶೋಧ ಕಾರ್ಯ ನಡೆಸಿದರೂ ಕೂಡಾ ಪತ್ತೆಯಾಗಿಲ್ಲ.
ಈ ಕುರಿತು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು ತನಿಖೆ ನಡೆಸಲಾಗಿದೆ.

