ನಿರ್ದೇಶಕಿಯಾಗಿ, ನಿರ್ಮಾಪಕಿಯಾಗಿ ರೂಪ ರಾವ್ ಇದೀಗ ಮತ್ತೂಂದು ಹೊಸ ಬಗೆಯ ಕಥಾನಕಕ್ಕೆ ದೃಶ್ಯರೂಪ ನೀಡುವ ಸಂಭ್ರಮದಲ್ಲಿದ್ದಾರೆ. ಅವರ ಹೊಸ ಚಿತ್ರದ ಟೈಟಲ್ ಮೋಷನ್ ಪೋಸ್ಟರ್ ಬಿಡುಗಡೆಗೊಂಡಿದೆ.
'ಭಯಂಕರ ಪ್ರೀತಿ' ಎಂಬ ಈ ಶೀರ್ಷಿಕೆಯ ಮೂಲಕವೇ ಕಥೆಯ ಭಿನ್ನ ಪಥದ ಸುಳಿವನ್ನೂ ರೂಪ ರಾವ್ ರವಾನಿಸಿದಂತಿದೆ.
ಚಿತ್ರದಲ್ಲಿ ತೇಜು ಬೆಳವಾಡಿ ಮತ್ತು ಪ್ರಣವ್ ಶ್ರೀಧರ್ ನಾಯಕ ನಾಯಕಿಯರಾಗಿ ನಟಿಸುತ್ತಿದ್ದಾರೆ. ಅವರಿಬ್ಬರ ಪಾತ್ರಗಳ ಜೊತೆಗೆ ಟೈಟಲ್ ಮೋಷನ್ ಪೋಸ್ಟರ್ ಅನ್ನು ರೂಪಾ ರಾವ್ ರೂಪಿಸಿದ್ದಾರೆ.
ಈ ಹಿಂದೆ ಗಂಟುಮೂಟೆ ಸಿನಿಮಾ ಮೂಲಕ ನಿರ್ದೇಶಕಿಯಾಗಿ ಗುರುತಿಸಿಕೊಂಡಿದ್ದ ರೂಪಾ ರಾವ್, ಆ ಬಳಿಕ ಅಮೇಯುಕ್ತಿ ಸ್ಟುಡಿಯೋಸ್ ಮೂಲಕ ನಿರ್ಮಾಪಕಿಯಾ ಗಿಯೂ ಸದ್ದು ಮಾಡಿದ್ದರು. ಭಯಂಕರ ಪ್ರೀತಿ ಚಿತ್ರ ಕೂಡಾ ಅಮೇಯುಕ್ತಿ ಸ್ಟುಡಿಯೋಸ್ ಬ್ಯಾನರ್‌ನಡಿಯಲ್ಲಿಯೇ ನಿರ್ಮಾಣಗೊಳ್ಳುತ್ತಿದೆ.
ಆಶಿತ್, ಅನನ್ಯಾ ಮೋಹನ್, ವಿನಯ್ ಭಾರದ್ವಾಜ್, ಶೀತಲ್ ರಾವ್, ಸುಧಾ ಪ್ರಸಾದ್, ಅನಘ, ಚಂದ್ರಶೇಖರ್, ಪೃಥ್ವಿ ಬನವಾಸಿ, ರಾಮ್ ಮಂಜೊನಾಥ್, ವಿಶಾಲ್, ವೈಭವ್ ಶೆಟ್ಟಿ, ಚೇತನ್, ನಿತಿನ್, ಗಗನಶ್ರೀ ಮುಂತಾವರ ತಾರಾಗಣವಿದೆ. ಪ್ರದೀಪ್ ನಾಯಕ್ ಸಂಕಲನ, ಶಿಬಿ ಶ್ರೀನಿವಾಸನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಸಹದೇವ್ ಕೆಲವಡಿ ನಿರ್ಮಾಣದಲ್ಲಿ ಜೊತೆಯಾಗಿದ್ದಾರೆ.

