ಹೊಸದಿಲ್ಲಿ: "ಭಯೋತ್ಪಾದನೆ, ಪ್ರತ್ಯೇಕತಾವಾದ ಮುಕ್ತ ಪ್ರದೇಶವನ್ನು ನಿರ್ಮಾಣ ಮಾಡುವುದೇ ನಮ¬¾ ಗುರಿ. ಇದನ್ನು ನಿರ್ಮಾಣ ಮಾಡಲು ಉಜ್ಬೇಕಿಸ್ಥಾನದ ಜತೆ ಕೆಲಸ ಮಾಡುತ್ತೇವೆ' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
4 ದಿನಗಳ ಪ್ರವಾಸಕ್ಕಾಗಿ ಉಜ್ಬೇಕಿಸ್ಥಾನದಲ್ಲಿ ಇಳಿದ ಪ್ರಧಾನಿ ಮೋದಿ ಅವರನ್ನು ಅಧ್ಯಕ್ಷ ಶಾವಕಾಟ್ ಮಿರ್ಜಿಯೋಯೆವ್ ಅವರು ಸ್ವಾಗತಿಸಿದರು.
ಭಯೋತ್ಪಾದನೆ ಮುಕ್ತ ಪ್ರದೇಶವಾಗಿಸಲು ಸದಸ್ಯ ರಾಷ್ಟ್ರಗಳ ಜತೆ ಕೆಲಸ ಮಾಡುವುದಲ್ಲದೆ, ಭಾರತದ ದೃಷ್ಟಿಕೋನವನ್ನು ಪ್ರತಿಪಾದಿಸಲು ಕಾತರದಿಂದ ಶೃಂಗಸಭೆಯನ್ನು ಎದುರು ನೋಡುತ್ತಿದ್ದೇನೆ' ಎಂದು ಅವರು ಹೇಳಿದರು.
ಭೇಟಿಯ ವೇಳೆ ತಾಷ್ಕೆಂಟ್ ನಲ್ಲಿರುವ ಶಾಸ್ತ್ರಿ ಸ್ಮಾರಕ ತಾಷ್ಕೆಂಟ್ ವಿಶ್ವವಿದ್ಯಾಲಯದ ಓರಿಯಂಟಲ್ ಸ್ಟಡೀಸ್‌ನಲ್ಲಿರುವ ಗಾಂಧಿ ಕೇಂದ್ರಕ್ಕೂ ಭೇಟಿ ನೀಡಿ ನಮನ ಸಲ್ಲಿಸಲಿದ್ದಾರೆ. ಉಜ್ಬೇಕಿಸ್ಥಾನ ಪ್ರಧಾನಿ ಜತೆ ಮಾತುಕತೆ ನಡೆಸಲಿದ್ದಾರೆ.

