Dailyhunt Logo
  • Light mode
    Follow system
    Dark mode
    • Play Story
    • App Story
ಬೀದಿ ಬದಿ ದೀಪಗಳ ನಿರ್ವಹಣೆಯಲ್ಲಿ ಲೋಪ:ಎಂಜಿನಿಯರ್‌ ಅಮಾನತು

ಬೀದಿ ಬದಿ ದೀಪಗಳ ನಿರ್ವಹಣೆಯಲ್ಲಿ ಲೋಪ:ಎಂಜಿನಿಯರ್‌ ಅಮಾನತು

ಬೆಂಗಳೂರು: ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕೇಂದ್ರ ನಗರ ಪಾಲಿಕೆಯ ಕಾರ್ಯಪಾಲಕ ಅಭಿಯಂತರ (ವಿದ್ಯುತ್‌) ಎಚ್‌. ವಿ.ರಮೇಶ್‌ ಅವರನ್ನು ಅಮಾನತು ಗೊಳಿಸಿ ಆದೇಶ ಹೊರಡಿಸಲಾಗಿದೆ.

ಗ್ರೇಟರ್‌ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ ಅವರು ಹಡ್ಸನ್‌ ವೃತ್ತದಿಂದ ಚಾಲುಕ್ಯ ವೃತ್ತದವರೆಗಿನ ರಸ್ತೆಯಲ್ಲಿ ಖುದ್ದಾಗಿ ವಿದ್ಯುತ್‌ ಬೀದಿ ದೀಪಗಳ ಪರಿವೀಕ್ಷಣೆ ಮಾಡುವ ಸಂದರ್ಭದಲ್ಲಿ ಒಟ್ಟು 222 ಪೈಕಿ 140 ವಿದ್ಯುತ್‌ ಕಂಬಗಳಲ್ಲಿನ ದೀಪಗಳು ಕಾರ್ಯನಿರ್ವಹಿಸದಿರುವುದು ಕಂಡು ಬಂದಿದ್ದವು.

ಅಲ್ಲದೆ ಈ ಹಿಂದೆ ಸಚಿವರು ಎರಡೂ ಬಾರಿ ಸಭೆ ನಡೆಸಿ ಬೀದಿ ದೀಪಗಳ ನಿರ್ವಹಣೆ ಸಂಬಂಧ ಸಭೆ ನಡೆಸಿ ಸೂಚನೆ ನೀಡಿದ್ದರು. ಆದರೂ ಸಚಿವರ ಸೂಚನೆ-ನಿರ್ದೇಶನಗಳನ್ನು ಗಂಭೀರವಾಗಿ ತೆಗೆದುಕೊಳ್ಳದ ಕಾರಣ ಮಂಗಳವಾರ ಕರ್ತವ್ಯಲೋಪಕ್ಕೆ ಸಂಬಂಧಿಸಿದಂತೆ ತತ್‌ ಕ್ಷಣಕ್ಕೆ ಜಾರಿಯಾಗುವಂತೆ ಅಮಾನತುಗೊಳಿಸಲಾಗಿದೆ ಎಂದು ಜಿಬಿಎ ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani