Dailyhunt Logo
  • Light mode
    Follow system
    Dark mode
    • Play Story
    • App Story
ಬಿಜೆಪಿ ಸ್ಟ್ರಾಂಗ್‌ ರೂಂಗೆ ಪ್ರವೇಶಿಸಿದೆ: ಟಿಎಂಸಿಯಿಂದ ಗಂಭೀರ ಆರೋಪ!

ಬಿಜೆಪಿ ಸ್ಟ್ರಾಂಗ್‌ ರೂಂಗೆ ಪ್ರವೇಶಿಸಿದೆ: ಟಿಎಂಸಿಯಿಂದ ಗಂಭೀರ ಆರೋಪ!

ಕೋಲ್ಕತಾ: ಇಲ್ಲಿನ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿರುವ ಸ್ಟ್ರಾಂಗ್‌ ರೂಂನೊಳಗೆ ಬಿಜೆಪಿ ನಾಯಕರು ಪ್ರವೇಶಿಸಿ, ಮತಗಳನ್ನು ತಿರುಚಲು ಯತ್ನಿಸಿದ್ದಾರೆ ಎಂಬ ಗಂಭೀರ ಆರೋಪವನ್ನು ಟಿಎಂಸಿ ಮಾಡಿದೆ.

ಚುನಾವಣ ಅಧಿಕಾರಿಗಳು ಇಲ್ಲದ ಸಮಯದಲ್ಲಿ ಮತಪೆಟ್ಟಿಗೆಗಳನ್ನು ತೆರೆದು, ಇವಿಎಂಗಳನ್ನು ತಿರುಚಲು ಯತ್ನಿಸಲಾಗಿದೆ ಎಂದು ಟಿಎಂಸಿ ಹೇಳಿದೆ.

ಇದಕ್ಕೆ ಸಂಬಂಧಿಸಿದ ವಿಡಿಯೋವೊಂದನ್ನು ಹಂಚಿಕೊಂಡಿದೆ. ಇದು ಭಾರೀ ಚರ್ಚೆಗೆ ಕಾರಣವಾದ ಬೆನ್ನಲ್ಲೇ ಇವಿಎಂಗಳನ್ನು ಇರಿಸಿರುವ ಸ್ಟ್ರಾಂಗ್‌ರೂಂಗೆ ಸಿಎಂ ಮಮತಾ ಬ್ಯಾನರ್ಜಿ ತೆರಳಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಸ್ಟ್ರಾಂಗ್‌ ರೂಂನ ಹೊರಗೆ ಟಿಎಂಸಿ ಕಾರ್ಯಕರ್ತರು ಭಾರೀ ಪ್ರತಿಭಟನೆ ಆರಂಭಿಸಿದ್ದು, ಚುನಾವಣ ಆಯೋಗ ಮತ್ತು ಬಿಜೆಪಿಯ ವಿರುದ್ಧ ಘೋಷಣೆಗಳನ್ನು ಕೂಗಿದ್ದಾರೆ. ಈ ಆರೋಪವನ್ನು ಬಿಜೆಪಿ ತಿರಸ್ಕರಿಸಿದ್ದು, ಇದೊಂದು ಸುಳ್ಳು ವದಂತಿ ಎಂದು ಕರೆದಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani