Dailyhunt Logo
  • Light mode
    Follow system
    Dark mode
    • Play Story
    • App Story
ಬಿಟ್ಟು ಬಿಟ್ಟು ಸುರಿವ ಮಳೆ; ಡೆಂಗ್ಯೂ ಏರಿಕೆಗೆ ಪೂರಕ

ಬಿಟ್ಟು ಬಿಟ್ಟು ಸುರಿವ ಮಳೆ; ಡೆಂಗ್ಯೂ ಏರಿಕೆಗೆ ಪೂರಕ

ಮಂಗಳೂರು: ಬಿಟ್ಟು ಬಿಟ್ಟು ಮಳೆ ಸುರಿಯುತ್ತಿದ್ದು, ಡೆಂಗ್ಯೂ ಭೀತಿ ಎದುರಾಗಿದೆ.ಕರಾವಳಿಯಲ್ಲಿ ಎರಡು ದಿನಗಳಿಂದ ಆಗಾಗ್ಗೆ ಮಳೆ ಸುರಿಯುತ್ತಿದೆ. ಇದರಿಂದ ನೀರು ನಿಂತು ಲಾರ್ವಾ ಉತ್ಪತ್ತಿಯಾಗುವ ಸಾಧ್ಯತೆ ಹೆಚ್ಚಿರುತ್ತದೆ. ಡೆಂಗ್ಯೂ ಹರಡದಂತೆ ತಡೆಯಲು ಜಾಗ್ರತೆ ವಹಿಸಬೇಕು ಎನ್ನುತ್ತದೆ ಆರೋಗ್ಯ ಇಲಾಖೆ.

ಮಂಗಳೂರು ನಗರದಲ್ಲಿ ಅತ್ಯಧಿಕ ಡೆಂಗ್ಯೂ ಪ್ರಕರಣಗಳು ದಾಖಲಾಗುತ್ತಿವೆ. ವಿವಿಧ ಜಿಲ್ಲೆ, ರಾಜ್ಯಗಳ ವಿದ್ಯಾರ್ಥಿಗಳು, ಸಾರ್ವಜನಿಕರು ಕೆಲಸ, ವಿದ್ಯಾಬ್ಯಾಸ ಸಹಿತ ವಿವಿಧ ಕಾರಣಗಳಿಗೆ ನಗರಕ್ಕೆ ಬರುತ್ತಾರೆ. ಹಾಗೆ ಬರುವ ಕೆಲವರಲ್ಲಿ ಡೆಂಗ್ಯೂ ಇದ್ದರೆ ಅದು ಹರಡುವ ಸಾಧ್ಯತೆ ಹೆಚ್ಚು. ಆರೋಗ್ಯ ಇಲಾಖೆ ನಗರ ಪ್ರದೇಶ ದೊಂದಿಗೆ ಗ್ರಾಮೀಣ ಪ್ರದೇಶಕ್ಕೆ ಡೆಂಗ್ಯೂ ತಡೆ ಕಾರ್ಯ ಯೋಜನೆ ರೂಪಿಸಿದೆ. ಮುಖ್ಯವಾಗಿ ರಬ್ಬರ್‌ ತೋಟ ಇರುವ ಪ್ರದೇಶಗಳಲ್ಲಿ ಮುನ್ನೆಚ್ಚರಿಕೆ ವಹಿಸಲು ಆಶಾ ಕಾರ್ಯಕರ್ತೆಯರಿಗೆ ಮಾಹಿತಿ ನೀಡಲಾಗುತ್ತಿದೆ.

ರೋಗ ಲಕ್ಷಣಗಳೇನು?
ಡೆಂಗ್ಯೂ ಉಂಟಾದ ತತ್‌ಕ್ಷಣ ರೋಗ ಲಕ್ಷಣ ಹೆಚ್ಚಾಗಿ ತೋರದು. ಆದರೆ 4ರಿಂದ 7 ದಿನಗಳ ಬಳಿಕ ತಲೆ-ಮೈ ಕೈ ನೋವು, ಕೀಲು ನೋವು, ವಾಕರಿಕೆ, ವಾತ, ಕಣ್ಣುಗಳ ಹಿಂಭಾಗ ನೋವು, ದೇಹದ ಅಲ್ಲಲ್ಲಿ ಕಲೆಗಳು ಕಾಣಿಸಿಕೊಳ್ಳುತ್ತದೆ.

ಡೆಂಗ್ಯೂ ಮತ್ತೆ ಏರಿಕೆ ಸಾಧ್ಯತೆ
ಈ ವರ್ಷ ಜನವರಿಯಿಂದ ಈವರೆಗೆ ಜಿಲ್ಲೆಯಲ್ಲಿ 28 ಖಚಿತ ಪ್ರಕರಣಗಳಿವೆ. ಆದರೆ ಸದ್ಯದ ಹವಾಮಾನ ಡೆಂಗ್ಯೂ ಹರಡಲು ಪೂರಕವಾಗಿದೆ. ಹೀಗಾಗಿ ಎಚ್ಚರಿಕೆ ವಹಿಸಬೇಕಾಗಿದೆ.

ಡೆಂಗ್ಯೂ-ಮಳೆಗಾಲ ಮುನ್ನೆಚ್ಚರಿಕೆ ವಹಿಸಿ

-ಸೊಳ್ಳೆ ಉತ್ಪತ್ತಿಯಾಗುವ ತ್ಯಾಜ್ಯಗಳ ಮೂಲವನ್ನು ನಿರ್ವಹಿಸಿ.

-ಮನೆಯ ಸುತ್ತಮತ್ತ, ತಾರಸಿ, ಹೂ ಕುಂಡಗಳಲ್ಲಿ ನೀರು ನಿಲ್ಲದಂತೆ ಎಚ್ಚರ ವಹಿಸಿ.

-ನೀರು ಶೇಖರಣಾ ತೊಟ್ಟಿ, ಟ್ಯಾಂಕ್‌ ಮುಚ್ಚಳ ಭದ್ರವಾಗಿ ಮುಚ್ಚಿ

-ಸೊಳ್ಳೆ ಪರದೆಯನ್ನು ಉಪಯೋಗಿಸಿ

-ತೊಟ್ಟಿ, ಡ್ರಮ್‌ಗಳಲ್ಲಿ 2 ರಿಂದ 3 ದಿನಗಳಿಗೊಮ್ಮೆ ನೀರು ಬದಲಾಯಿಸಿ ಸ್ವಚ್ಛಗೊಳಿಸಿ.

-ಕೈಕಾಲುಗಳನ್ನು ಚೆನ್ನಾಗಿ ತೊಳೆದುಕೊಳ್ಳಿ, ಹೆಚ್ಚಾಗಿ ಬೆಚ್ಚಗಿನ ಉಡುಪುಗಳನ್ನು ಧರಿಸಿ.

-ಕುಡಿಯಲು ಕುದಿಸಿ ಆರಿಸಿದ ಶುದ್ಧ ನೀರನ್ನು ಉಪಯೋಗಿಸಿ

-ರೋಗ ನಿರೋಧಕ ಶಕ್ತಿ ಹೆಚ್ಚಿಸುವ ಆಹಾರಗಳನ್ನು ಸೇವಿಸಿ

-ಜ್ವರ ಸಹಿತ ರೋಗ ಲಕ್ಷಣ ಕಂಡು ಬಂದರೆ ವೈದ್ಯರನ್ನು ಸಂಪರ್ಕಿಸಿ

-ವೈದ್ಯರ ಸಲಹೆಯಿಲ್ಲದೆ ಯಾವುದೇ ಮಾತ್ರೆ ಸೇವಿಸಬೇಡಿ.

Dailyhunt
Disclaimer: This content has not been generated, created or edited by Dailyhunt. Publisher: Udayavani