ಹಾಸನ
ಬುಡಕಟ್ಟುಗಳ ಅಭಿವೃದ್ಧಿ ಅನುದಾನ ಮಾರ್ಚ್‌ನೊಳಗೆ ಬಳಸಿ

ಹೊಳೆನರಸೀಪುರ: ವಿವಿಧ ಇಲಾಖೆಗಳಿಂದ ವಿಶೇಷ ಘಟಕ ಯೋಜನೆಯಡಿ ಗಿರಿಜನ ಮತ್ತು ಬುಡಕಟ್ಟುಗಳ ಅಭಿವೃದ್ಧಿಗೆ ಬರುವ ವಿಶೇಷಅನುದಾನವನ್ನು ಮಾರ್ಚ್ ಅಂತ್ಯದೊಳಗೆಪೂರ್ಣಗೊಳಿಸಬೇಕೆಂದು ತಾಪಂ ಇಒ ಕೆ. ಯೋಗೇಶ್ ನುಡಿದರು.
ತಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಸಭೆಆರಂಭಕ್ಕೆ ಮುನ್ನ ಮಾತನಾಡಿದ ಅವರು, ಗಿರಿಜನ ಮತ್ತು ಬುಡಕಟ್ಟು ಜನಾಂಗಕ್ಕೆ ಸರ್ಕಾರದಿಂದ ಸಿಗುವ ಅನುದಾನವನ್ನು ತಪ್ಪದೇಫಲಾನುಭವಿಗಳಿಗೆ ತಲುಪಿಸುವಲ್ಲಿ ಎಲ್ಲಾ ಅಧಿಕಾರಿಗಳು ಸಹಕರಿಸಬೇಕೆಂದು ಮನವಿ ಮಾಡಿದರು.
ಇಲ್ಲಿಯವರೆಗೆ ಈ ವಿಶೇಷ ಸಭೆಗೆ ಅವಕಾಶ ಇರಲಿಲ್ಲ, ಸರ್ಕಾರ ಹೊಸ ನೀತಿಯನ್ನು ಜಾರಿಗೆತಂದಿದ್ದು, ಅದರಂತೆ ವಿವಿಧ ಇಲಾಖೆಗಳಲ್ಲಿ ಸಿಗುವಸೌಲಭ್ಯಗಳು ಸದುಪಯೋಗ ಆಗುತ್ತಿದೆಯೇ,ಇಲ್ಲವೇ ಎಂಬ ಬಗ್ಗೆ ಮಾಸಿಕ ಸಭೆಗಳನ್ನು ನಡೆಸುವಂತೆ ಸುತ್ತೋಲೆ ನೀಡಿದೆ. ಅದರಂತೆ ಪ್ರಥಮ ಸಭೆ ಮಾಡಲಾಗುತ್ತಿದೆ ಎಂದು ಹೇಳಿದರು.
ನಾಲ್ಕು ದಿನ ಮುಂಚೆ ಮಾಹಿತಿ ನೀಡಿ: ಇನ್ನು ಮುಂದೆ ಪ್ರತಿ ತಿಂಗಳು ಈ ಪರಾಮರ್ಶೆ ಸಭೆಯನ್ನು ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳು ನಿಗದಿಗೊಳಿಸುತ್ತಾರೆ. ಆ ಸಭೆಗೆ ತಾಲೂಕಿನ ಬಹುತೇಕ ಇಲಾಖೆ ಅಧಿಕಾರಿಗಳುಬರಬೇಕಾಗಿದೆ. ಸಭೆಗೆ ಬರುವ ಮುನ್ನ ತಮ್ಮ ಇಲಾಖೆಯ ಸೌಲಭ್ಯ, ಅನುದಾನ ಬಳಕೆ, ಇತರೆಮಾಹಿತಿಯನ್ನು ಮೂರು ನಾಲ್ಕು ದಿನಗಳ ಮೊದಲುಲಿಖೀತವಾಗಿತಮಗೆತಲುಪಿಸಬೇಕೆಂದುಸಭೆಯಲ್ಲಿ ಭಾಗವಹಿಸಿದ್ದ ಅಧಿಕಾರಿಗಳಲ್ಲಿ ಮನವಿ ಮಾಡಿದರು.
ನೋಟಿಸ್ ನೀಡಲು ಸೂಚನೆ: ಈ ಸಭೆ ಪ್ರಥಮವಾಗಿರುವುದರಿಂದ ಬೆರಳೆಣಿಕೆಯಷ್ಟು ಅಧಿಕಾರಿಗಳು ಆಗಮಿಸಿದ್ದಾರೆ. ಮುಂದಿನ ಸಭೆಗೆ ಪ್ರತಿಯೊಬ್ಬರು ಕಡ್ಡಾಯವಾಗಿ ಹಾಜರಾಗುವಂತೆ ಕೋರಿದ ಅವರು, ಈ ಸಭೆಯಲ್ಲಿ ಹಾಜರಾಗದಅಧಿಕಾರಿಗಳಿಗೆ ಸಮಾಜ ಕಲ್ಯಾಣಇಲಾಖೆಯಿಂದನೋಟಿಸ್ ನೀಡುವಂತೆ ಅಧಿಕಾರಿ ಸಿದ್ಲಿಂಗುಗೆ ಸೂಚನೆ ನೀಡಿದರು.
ಇಒ ಅಧ್ಯಕ್ಷರು: ಈ ವಿಶೇಷ ಸಭೆಗೆ ತಾಪಂ ಇಒ ಅಧ್ಯಕ್ಷರು, ತಹಶೀಲ್ದಾರ್ ಕೆ.ಆರ್.ಶ್ರೀನಿವಾಸ್ ಉಪಾಧ್ಯಕ್ಷರಾಗಿದ್ದು, ಸದಸ್ಯ ಕಾರ್ಯದರ್ಶಿ ಆಗಿಸಮಾಜ ಕಲ್ಯಾಣ ಇಲಾಖೆ ಅಧಿಕಾರಿ ಸಿದ್ಲಿಂಗುಇರುತ್ತಾರೆ. ಈ ಸಮಿತಿಗೆ ತಾಪಂನಿಂದ ಓರ್ವಸದಸ್ಯ ಚಂದ್ರಶೇಖರ್ ನಾಮನಿರ್ದೇಶಿತ ರಾಗಿರಲಿದ್ದಾರೆ ಎಂದು ಮಾಹಿತಿ ನೀಡಿದರು.
ಈ ದಿನದ ಸಭೆಯಲ್ಲಿ ನೀರಾವರಿ ಇಲಾಖೆ, ಪುರಸಭೆ ಅಧಿಕಾರಿಗಳು ನೀಡಿದ ಮಾಹಿತಿಯಂತೆಅನುದಾನ ಬಳಕೆ ಆಗಿಲ್ಲ, ಅದನ್ನು ಬರುವ ಮಾರ್ಚ್ 31 ರೊಳಗೆ ಫಲಾನುಭಗಳಿಗೆ ತಲುಪಿಸುವಲ್ಲಿ ಕಾರ್ಯಪ್ರವರ್ತರಾಗುವಂತೆ ಸೂಚನೆ ನೀಡಿದರು.
ಸಮಯ ಬದಲಾವಣೆ: ಸಭೆಯನ್ನು ಬೆಳಗ್ಗೆ 11 ಗಂಟೆಗೆ ನಿಗದಿಗೊಳಿಸಲಾಗಿತ್ತು. ಆದರೆ, ಇದೇ ಸಭಾಂಗಣದಲ್ಲಿ ತಾಪಂ ಉಪಾಧ್ಯಕ್ಷರ ಆಯ್ಕೆಪ್ರಕ್ರಿಯೆ ಉಪವಿಭಾಗಾಧಿಕಾರಿ ಜಗದೀಶ್ ಅವರನೇತೃತ್ವದಲ್ಲಿ ನಡೆಸಬೇಕಾದ ಅನಿವಾರ್ಯ ಇದ್ದರಿಂದ ಬೆಳಗಿನ ಸಭೆಯನ್ನು ಸಂಜೆ ಮೂರೂವರೆಗೆ ಬದಲು ಮಾಡಲಾಯಿತು. ಸಮಾಜ ಕಲ್ಯಾಣ ಇಲಾಖೆಯ ಅಧಿಕಾರಿ ಸಿದ್ಲಿಂಗುಕಾರ್ಯಕ್ರಮದಲ್ಲಿ ಸ್ವಾಗತಿಸಿ, ವಂದಿಸಿದರು.
related stories
-
ಚಾಮರಾಜ ನಗರ ಅಕ್ರಮ ಗಣಿಗಾರಿಕೆ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಸೂಚನೆ
-
ಜಿಲ್ಲಾ ಸುದ್ದಿಗಳು ಮಾರ್ಚ್ ಅಂತ್ಯದೊಳಗೆ ವಸತಿ ಇಲಾಖೆ ಸಮಸ್ಯೆಗಳನ್ನ ನಿವಾರಿಸಿ: ಶಾಸಕ ಬಾಲಚಂದ್ರ ಜಾರಕಿಹೊಳಿ
-
ಬಳ್ಳಾರಿ ಉಚಿತ ಹೊಲಿಗೆ ಯಂತ್ರ ವಿತರಣೆ