Dailyhunt Logo
  • Light mode
    Follow system
    Dark mode
    • Play Story
    • App Story
CET: ಸಿಬಿಎಸ್‌ಇ ಅಂಕಪಟ್ಟಿ ಸಲ್ಲಿಸಲು 3 ದಿನ ಅವಕಾಶ

CET: ಸಿಬಿಎಸ್‌ಇ ಅಂಕಪಟ್ಟಿ ಸಲ್ಲಿಸಲು 3 ದಿನ ಅವಕಾಶ

ಬೆಂಗಳೂರು: ಸಿಬಿಎಸ್‌ಇ, ಸಿಐಎಸ್‌ಸಿಇ ಹಾಗೂ ಇತರ ರಾಜ್ಯ ಪರೀಕ್ಷಾ ಮಂಡಳಿಗಳ 12ನೇ ತರಗತಿಯ ವಿದ್ಯಾರ್ಥಿಗಳಿಗೆ ಮರು ಮೌಲ್ಯಮಾಪನದಲ್ಲಿ ಅಂಕಗಳು ಪರಿಷ್ಕೃತಗೊಂಡಿದ್ದರೆ ಅಂತವರು ಜು. 4 ರಿಂದ 6ರವರೆಗೆ ತಮ್ಮ ಅಂಕಪಟ್ಟಿ ಸಲ್ಲಿಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆಇಎ) ಅವಕಾಶ ನೀಡಿದೆ.

ಮಲ್ಲೇಶ್ವರದ ಕೆಇಎ ಕಚೇರಿಯಲ್ಲಿ ಅಂಕಪಟ್ಟಿ ಸಲ್ಲಿಸಬೇಕು. ಭಾನುವಾರ ಕೂಡ ಸ್ವೀಕರಿಸಲಾಗುವುದು ಎಂದು ಕೆಇಎ ಕಾರ್ಯನಿರ್ವಾಹಕ ನಿರ್ದೇಶಕ ಹೆಚ್.ಪ್ರಸನ್ನ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.

***

ಕೌನ್ಸೆಲಿಂಗ್ ಪ್ರಕ್ರಿಯೆ ಆರಂಭವಾದ ನಂತರ ಈ ಮಂಡಳಿಗಳು ಮರುಮೌಲ್ಯಮಾಪನದ ಫಲಿತಾಂಶ ಪ್ರಕಟಿಸಿದ್ದು, ಅ ಕಾರಣಕ್ಕೆ ಆರಂಭದಲ್ಲಿ ಪರಿಗಣಿಸಲು ಸಾಧ್ಯ ಇಲ್ಲ ಎಂದು ಹೇಳಲಾಗಿತ್ತು. ನಂತರ ಬಂದ ಮನವಿಗಳ ಆಧಾರದ ಮೇಲೆ ನಿರ್ಧಾರ ಬದಲಿಸಿ, ಅಂಕಪಟ್ಟಿ ಸಲ್ಲಿಸಲು ಅವಕಾಶ ನೀಡಲಾಗಿದೆ ಎಂದಿದ್ದಾರೆ.

ಅಭ್ಯರ್ಥಿಗಳು ಅಂಕಪಟ್ಟಿ ನೀಡಿದರೂ ಅವರ ಡಿಜಿಲಾಕರ್ ಅಕೌಂಟ್ ಮೂಲಕ ಅಂಕ ಪರಿಶೀಲಿಸಿದ ನಂತರವೇ ಅವರ ಮನವಿ ಪರಿಗಣಿಸಲಾಗುವುದು. ಅಂಕ ಹೆಚ್ಚಾಗಿರುವವರು ಮಾತ್ರ ಅರ್ಜಿ ಕೊಟ್ಟಿದ್ದಾರೆ. ಕಡಿಮೆ ಅಂಕ ಬಂದಿರುವವರು ಕೂಡ ಪಿಯುಸಿ ಅಂಕ ಬದಲಿಸಿಕೊಳ್ಳುವ ಅಗತ್ಯ ಇದ್ದು, ಅದರಿಂದಲೂ ರ್‍ಯಾಂಕ್ ನಲ್ಲಿ ಬಹಳಷ್ಟು ವ್ಯತ್ಯಾಸವಾಗುವ ಸಾಧ್ಯತೆಯಿದೆ. ಒಂದು ವೇಳೆ ಹಾಗೆ ಬದಲಾವಣೆ ಮಾಡಿಸಿಕೊಳ್ಳದೆ ಇದ್ದಲ್ಲಿ ಅಂಕಗಳು ವ್ಯತ್ಯಾಸ ಇದ್ದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

****

ಬಿ-ಫಾರ್ಮ, ಫಾರ್ಮಾ-ಡಿ ನಂತರ ಅವಕಾಶ

ಫಾರ್ಮ- ಡಿ, ಬಿ-ಫಾರ್ಮ, ಯೋಗ- ನ್ಯಾಚುರೋಪತಿ ಕೋರ್ಸ್ ಗಳ ಸೀಟ್ ಮ್ಯಾಟ್ರಿಕ್ಸ್ ಇನ್ನೂ ಬಂದಿಲ್ಲ. ಹೀಗಾಗಿ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಿಲ್ಲ. ಈ ವಿಷಯದಲ್ಲಿ ಆತಂಕ ಬೇಡ. ಸೀಟ್ ಮ್ಯಾಟ್ರಿಕ್ಸ್ ಬಂದ ನಂತರ ಆಪ್ಷನ್ಸ್ ದಾಖಲಿಸಲು ಅವಕಾಶ ನೀಡಲಾಗುವುದು ಎಂದು ಅವರು ಹೇಳಿದರು.

Dailyhunt
Disclaimer: This content has not been generated, created or edited by Dailyhunt. Publisher: Udayavani