Wednesday, 16 Sep, 9.21 pm ಉದಯವಾಣಿ

ಟಾಪ್ 10 ಸುದ್ದಿ
ಚಾಮರಾಜನಗರದಲ್ಲಿ 66 ಮಂದಿಯಲ್ಲಿ ಕೋವಿಡ್ ಸೋಂಕು ದೃಢ! 40 ಮಂದಿ ಗುಣಮುಖ

ಚಾಮರಾಜನಗರ: ಜಿಲ್ಲೆಯಲ್ಲಿ ಬುಧವಾರ 66 ಕೋವಿಡ್ ಪ್ರಕರಣಗಳು ಪತ್ತೆಯಾಗಿವೆ. 40 ಮಂದಿ ಗುಣಮುಖರಾಗಿದ್ದಾರೆ. 565 ಸಕ್ರಿಯ ಪ್ರಕರಣಗಳಿವೆ.

ಜಿಲ್ಲೆಯಲ್ಲಿ ಇದುವರೆಗೆ 3173 ಪ್ರಕರಣಗಳು ದೃಢಪಟ್ಟಿವೆ. ಇದರಲ್ಲಿ 2541 ಮಂದಿ ಗುಣಮುಖರಾಗಿದ್ದಾರೆ. ಬುಧವರ ಒಟ್ಟು 877 ಮಾದರಿಗಳನ್ನು ಪರೀಕ್ಷಿಸಲಾಗಿತ್ತು. 816 ಮಾದರಿಗಳ ಫಲಿತಾಂಶ ನೆಗೆಟಿವ್ ಆಗಿದೆ.

239 ಮಂದಿ ಜಿಲ್ಲೆಯಲ್ಲಿ ಹೋಂ ಐಸೋಲೇಷನ್‌ನಲಿದ್ದಾರೆ. 21 ಮಂದಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇಂದಿನ ಪ್ರಕರಣಗಳು -66
ಇಂದು ಗುಣಮುಖ -40
ಒಟ್ಟು ಗುಣಮುಖ -2541
ಇಂದಿನ ಸಾವು -00
ಒಟ್ಟು ಸಾವು -68
ಸಕ್ರಿಯ ಪ್ರಕರಣಗಳು -565
ಒಟ್ಟು ಸೋಂಕಿತರು -3173

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top