ಉದಯವಾಣಿ
ಉದಯವಾಣಿ

ಚೀನ ರೇಷ್ಮೆಗೆ ಕಡಿವಾಣ, ರೈತರಿಗೆ ವರ?

ಚೀನ ರೇಷ್ಮೆಗೆ ಕಡಿವಾಣ, ರೈತರಿಗೆ ವರ?
  • 920d
  • 89 shares

ಬೆಂಗಳೂರು: ಭಾರತ-ಚೀನ ಸಂಘರ್ಷದ ಹಿನ್ನೆಲೆಯಲ್ಲಿ ಅಲ್ಲಿಂದ ಆಮದಾಗುವ ರೇಷ್ಮೆಗೆ ನಿಗದಿತ ಅವಧಿಗೆ ನಿಷೇಧ ಹೇರುವ ಅಥವಾ ಆಮದು ಸುಂಕ ಹೆಚ್ಚಳಕ್ಕೆ ಕೇಂದ್ರ ಸರಕಾರ ಗಂಭೀರ ಚಿಂತನೆ ನಡೆ ಸಿದೆ.
ಇದು ಮುಂದಿನ‌ ದಿನಗಳಲ್ಲಿ ರಾಜ್ಯದ ರೇಷ್ಮೆ ಬೆಳೆಗಾರರಿಗೆ ವರವಾಗುವ ಸಾಧ್ಯತೆ ಇದೆ.
ಚೀನ ಆಯಪ್‌ ಮತ್ತಿತರ ಉತ್ಪನ್ನ ಗಳಿಗೆ ನಿಷೇಧ ವಿಧಿಸಿದಂತೆ ರೇಷ್ಮೆ ಆಮದು ಕೂಡ ನಿಷೇಧಿಸಬೇಕು. ಇದರಿಂದ ಬೆಳೆಗಾರರು ಮತ್ತು ಸ್ಥಳೀಯ ರೇಷ್ಮೆ ಮಾರುಕಟ್ಟೆಗೆ ಅನುಕೂಲ ಆಗಲಿದೆ ಎಂದು ಕರ್ನಾಟಕವು ಕೇಂದ್ರಕ್ಕೆ ಈಚೆಗೆ ಪತ್ರ ಬರೆದಿದೆ.
ರೇಷ್ಮೆ ಬೆಳೆಯುವ ಇತರ ರಾಜ್ಯಗಳಿಂದಲೂ ಒತ್ತಡ ಬಂದಿದ್ದು, ಈ ನಿಟ್ಟಿನಲ್ಲಿ ಚಿಂತನೆ ನಡೆದಿದೆ ಎನ್ನಲಾಗಿದೆ.
ನಿಷೇಧ ಕಷ್ಟ ; ನಿರ್ಬಂಧ ಸಾಧ್ಯ
ವಿಶ್ವ ವ್ಯಾಪಾರ ಸಂಸ್ಥೆ (WTO) ನಿಯಮ ಪ್ರಕಾರ ಏಕಾಏಕಿ ಆಮದು ನಿಷೇಧಿಸಲಾಗದು.

No Internet connection

Link Copied