ಚಿತ್ರದುರ್ಗ: ಇಲ್ಲಿನ ಕೋವಿಡ್ ಸೋಂಕಿತ ವಿನಯ್ ಎಂಬುವವರಿಗೆ ರೆಮ್‌ಡೆಸಿವಿಯರ್ ಚುಚ್ಚುಮದ್ದು ತಲುಪಿಸುವುದಾಗಿ ಬಾಲಿವುಡ್ ನಟ ಸೋನು ಸೂದ್ ಟ್ವಿಟರ್‌ನಲ್ಲಿ ಭರವಸೆ ನೀಡಿ ವಾರವಾದರೂ ತಲುಪದ ಕಾರಣ ಪರ್ಯಾಯ ವ್ಯವಸ್ಥೆ ಮಾಡಲಾಗಿದೆ.
“ರೆಮ್‌ಡೆಸಿವಿಯರ್ ಪೂರೈಕೆ ಬಗ್ಗೆ ಕಾಳಜಿ ತೋರಿಸಿದ ಹರ್ಭಜನ್ ಸಿಂಗ್ ಹಾಗೂ ಸೋನು ಸೂದ್ ಅವರಿಗೆ ಧನ್ಯವಾದ ಹೇಳುತ್ತೇನೆ. ಆದರೆ ಈವರೆಗೆ ಸೋನು ಸೂದ್ ಕಡೆಯವರಿಂದ ಫೋನ್ ಕಾಲ್ ಬಂದಿಲ್ಲ. ಚುಚ್ಚುಮದ್ದೂ ತಲುಪಿಲ್ಲ. ನಮಗೆ ಸಮಸ್ಯೆ ಆಗಿತ್ತು. ಈಗ ಆಸ್ಪತ್ರೆಯವರು ಹಾಗೂ ಸಂಬಂಧಿಕರು ಸೇರಿ ವ್ಯವಸ್ಥೆ ಮಾಡಿದ್ದಾರೆ’ ಎಂದು ವಿನಯ್ ಪತ್ನಿ ಪೂಜಾ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ನಾವು ಯಶಸ್ಸು ಕಾಣಬೇಕಾದರೆ ಬಿಜೆಪಿಯಂತೆ ದೊಡ್ಡದಾಗಿ ಯೋಚಿಸಬೇಕು: ಹಿರಿಯ ಕಾಂಗ್ರೆಸ್ ನಾಯಕ
ಕಳೆದ ವಾರ ವಿನಯ್‌ಗೆ ಚುಚ್ಚುಮದ್ದು ಅಗತ್ಯವಿದೆ ಎಂದು ಸೋಷಿಯಲ್ ಮೀಡಿಯಾದಲ್ಲಿ ಮನವಿ ಮಾಡಲಾಗಿತ್ತು.

