Friday, 24 Sep, 11.20 am ಉದಯವಾಣಿ

ಟಾಪ್ 10 ಸುದ್ದಿ
ಚೊಚ್ಚಲ ಟಿ20 ವಿಶ್ವಕಪ್ ಗೆಲುವಿಗೆ ಇಂದಿಗೆ 14 ವರ್ಷ: ಇಲ್ಲಿದೆ ಹೈಲೈಟ್ಸ್

ಮುಂಬೈ: ಟಿ20 ಎಂಬ ಚುಟುಕು ಮಾದರಿಯ ಮೊದಲ ವಿಶ್ವಕಪ್ ನಲ್ಲಿ ಭಾರತದ ತಂಡ ಸಾಧಿಸಿದ ವಿಜಯ ಯಾತ್ರೆಗೆ ಇಂದು 14 ವರ್ಷದ ಸಂಭ್ರಮ. 2007 ಸೆ.24ರಂದು ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಯುವ ಭಾರತ ತಂಡ ವಿಶ್ವಕಪ್ ಗೆದ್ದು ಬೀಗಿತ್ತು.

ಕೂಟದಲ್ಲಿ ಹಲವು ಅಚ್ಚರಿಗಳಿಗೆ ಕಾರಣವಾಗಿ ಫೈನಲ್ ಪ್ರವೇಶ ಪಡೆದಿದ್ದ ಭಾರತದ ತಂಡ ಅಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ಥಾನವನ್ನು ಎದುರಿಸಿತ್ತು. ಈಗಾಗಲೇ ಲೀಗ್ ಹಂತದಲ್ಲಿ ಪಾಕ್ ವಿರುದ್ಧ ಬಾಲ್ ಔಟ್ ಮುಖಾಂತರ ಜಯ ಸಾಧಿಸಿದ್ದ ಭಾರತ ಮತ್ತೊಂದು ಹೈ ವೋಲ್ಟೇಜ್ ಪಂದ್ಯಕ್ಕೆ ಸಜ್ಜಾಗಿತ್ತು.

ಫೈನಲ್ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ್ದ ಭಾರತ ತಂಡ 157 ರನ್ ಗಳಿಸಿದ್ದರೆ, ಪಾಕಿಸ್ಥಾನ ತಂಡ 152 ರನ್ ಮಾತ್ರ ಗಳಿಸಿ ಐದು ರನ್ ಅಂತರದ ಸೋಲನುಭವಿಸಿತ್ತು.

ಬಲಗೈ ಬ್ಯಾಟರ್ ಆಗಿದ್ದ ನಾನು ಸೌರವ್ ಗಂಗೂಲಿ ಕಾರಣಕ್ಕೆ ಬದಲಾದೆ: ವೆಂಕಟೇಶ್ ಅಯ್ಯರ್

ಗೌತಮ್ ಗಂಭೀರ್ 75 ರನ್ ಗಳಿಸಿದ್ದರೆ, ರೋಹಿತ್ ಶರ್ಮಾ 30 ರನ್ ಕೊಡುಗೆ ನೀಡಿದ್ದರು. ಉಳಿದ ಯಾರಿಂದಲೂ ಹೇಳಿಕೊಳ್ಳುವ ಪ್ರದರ್ಶನ ತಂಡಕ್ಕೆ ಸಿಗಲಿಲ್ಲ. ಪಾಕ್ ಪರ ಉಮರ್ ಗುಲ್ ಮೂರು ವಿಕೆಟ್ ಕಿತ್ತಿದ್ದರು.

ಸಾಧಾರಣ ಗುರಿ ಬೆನ್ನತ್ತಿದ್ದ ಪಾಕ್ ಗೆ ಇಮ್ರಾನ್ ನಜೀರ್ 33 ರನ್ ಮತ್ತು ಯೂನಿಸ್ 24 ರನ್ ಗಳಿಸಿದರು. ಓಂದೆಡೆ ವಿಕೆಟ್ ಬೀಳುತ್ತಿದ್ದರೂ ಮಿಸ್ಬಾ ಉಲ್ ಹಕ್ ಆಡುತ್ತಿದ್ದರು. ಕೊನೆಯ ಓವರ್ ನಲ್ಲಿ 13 ರನ್ ಬೇಕಾಗಿತ್ತು. ಕೈಯಲ್ಲಿ ಇದ್ದಿದ್ದು ಒಂದು ವಿಕೆಟ್. ಜೋಗಿಂದರ್ ಶರ್ಮಾರ ಎರಡನೇ ಎಸೆತವನ್ನು ಸಿಕ್ಸರ್ ಗೆ ಅಟ್ಟಿದ ಮಿಸ್ಬಾ ಮೂರನೇ ಎಸೆತವನ್ನು ಫೈನ್ ಲೆಗ್ ಗೆ ಸ್ಕೂಪ್ ಮಾಡಿದ್ದರು. ಆದರೆ ಚೆಂಡು ಶ್ರೀಶಾಂತ್ ಕೈ ಸೇರಿತ್ತು.

ಚೊಚ್ಚಲ ಟಿ20 ವಿಶ್ವಕಪ್ ಗೆದ್ದು ಬೀಗಿತ್ತು. ಹೊಸ ನಾಯಕ ಮಹೇಂದ್ರ ಸಿಂಗ್ ಧೋನಿ ನೇತೃತ್ವದ ಯುವಪಡೆ ಇತಿಹಾಸ ಸೃಷ್ಟಿಸಿತ್ತು.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top