Sunday, 11 Apr, 12.27 pm ಉದಯವಾಣಿ

ಟಾಪ್ 10 ಸುದ್ದಿ
ಚುನಾವಣಾ ಆಯೋಗವನ್ನು 'ಎಮ್ ಸಿ ಸಿ' ಎಂದು ಮರು ನಾಮಕರಣ ಮಾಡಬೇಕು : ಮಮತಾ ಕಿಡಿ

ಕೊಲ್ಕತ್ತಾ : ಕೂಚ್ ಬೆಹರ್ ಜಿಲ್ಲೆಯ ಸಿಟಾಲ್ಕುಚಿ ಕ್ಷೇತ್ರದಲ್ಲಿ ನಿನ್ನೆ(ಶನಿವಾರ ಏ.10) ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೇಂದ್ರವನ್ನು ದೂಷಿಸಿದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಇಂದು ಮತ್ತೆ ಚುನಾವಣಾ ಆಯೋಗ ಹಾಗೂ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಈ ಕುರಿತಾಗಿ ತಮ್ಮ ಅಧಿಕೃತ ಟ್ವೀಟರ್ ಮೂಲಕ ಚುನಾವಣಾ ಆಯೋಗ ಕೂಚ್ ಬೆಹರ್ ಜಿಲ್ಲೆಗೆ ಪ್ರವೇಶಿಸದಂತೆ ರಾಜಕಾರಣಿಗಳಿಗೆ ಮೂರು ದಿನಗಳ ನಿಷೇದ ಹೇರಿರುವುದಕ್ಕೆ ಪರೋಕ್ಷವಾಗಿ ಕುಟುಕಿದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ನೊಂದವರ ಕುಟುಂಬವನ್ನು ಭೇಟಿ ಮಾಡಲು ನನಗೆ ಮೂರು ದಿನಗಳು ನೀವು ನಿರ್ಬಂಧ ಹೇರಬಹುದು. ನಾನು ನಾಲ್ಕನೇ ದಿನ ಭೇಟಿ ಮಾಡಿಯೇ ಮಾಡುತ್ತೇನೆ ಎಂದು ಹೇಳಿದ್ದಾರೆ.

ಓದಿ : ಬಿಜೆಪಿ ಎಂದರೆ 'ಭ್ರಷ್ಟಾಚಾರ ಜನತಾ ಪಾರ್ಟಿ': ಸಿದ್ದರಾಮಯ್ಯ ಟೀಕೆ

ಇನ್ನು, ಚುನಾವಣಾ ಆಯೋಗವನ್ನು ಎಮ್ ಸಿ ಸಿ (ಮೋದಿ ಕೋಡ್ ಆಫ್ ಕಂಡಕ್ಟ್) ಎಂದು ಮರು ನಾಮಕರಣ ಮಾಡಬೇಕು. ಆಗ ಬಿಜೆಪಿಗೆ ಎಲ್ಲಾ ಅಧಿಕಾರವನ್ನು ಬಳಸಿಕೊಳ್ಳಲು ಸಾಧ್ಯವಾಗುತ್ತದೆ. ಜನರೊಂದಿಗೆ ನಾನು ಮಾತನಾಡುವುದನ್ನು, ಅವರ ನೋವನ್ನು ಕೇಳುವುದನ್ನು ಕೂಡ ತಡೆ ಹಿಡಿಯುವುದಕ್ಕೆ ಸಾಧ್ಯವಾಗುತ್ತದೆ ಎಂದು ಅವರು ಆಕ್ರೋಶ ಹೊರ ಹಾಕಿದ್ದಾರೆ.

ನಿನ್ನೆ(ಶನಿವಾರ, ಏ. 10) ಕೂಚ್ ಬೆಹರ್ ಜಿಲ್ಲೆಯನ್ನು ಯಾವ ರಾಜಕರಣಿಗಳು ಮೂರು ದಿನಗಳ ಕಾಲ ಪ್ರವೇಶಿಸಬಾರದು ಎಂದು ನಿಷೇದ ಹೇರುವುದಕ್ಕೆ ಒಂದು ಗಂಟೆಯ ಮೊದಲು ಮಮತಾ ಬ್ಯಾನರ್ಜಿ ಭಾನುವಾರ ನೊಂದವರ ಕುಟುಂಬದ ಮನೆಗೆ ಭೇಟಿ ನೀಡುವುದಾಗಿ ಹೇಳಿದ್ದರು.

ಇನ್ನು, ನಿನ್ನೆ ನಡೆದ ಹಿಂಸಾಚಾರದ ಕಾರಣದಿಂದಾಗಿ ಚುನಾವಣಾ ಪ್ರಚಾರದ ಅವಧಿಯನ್ನು ಕಡಿತಗೊಳಿಸಿ ಚುನಾವಣಾ ಆಯೋಗ ಆದೇಶಿಸಿದ್ದು, ಐದನೇ ಹಂತದ ಚುನಾವಣಾ ಕ್ಷೇತ್ರಗಳಾದ್ಯಂತ ಬಿಗಿ ಬಂದೋಬಸ್ತ್ ಮಾಡಲಾಗಿದೆ.

ಓದಿ : ಕೋವಿಡ್ 19 : ಧಾರ್ಮಿಕ ಸ್ಥಳಗಳಲ್ಲಿ ಗುಂಪುಗೂಡುವಿಕೆಗೆ ಅವಕಾಶವಿಲ್ಲ: ಉ. ಪ್ರ ಸರ್ಕಾರ

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top