Dailyhunt Logo
  • Light mode
    Follow system
    Dark mode
    • Play Story
    • App Story
Cobra: ಪ್ಯಾಲೇಸ್ ರೋಡಲ್ಲಿ ಹೆಡೆ ಎತ್ತಿ ನಿಂತ ಬುಸ್ ಬುಸ್... 40 ನಿಮಿಷ ಸಂಚಾರ ಅಸ್ತವ್ಯಸ್ತ

Cobra: ಪ್ಯಾಲೇಸ್ ರೋಡಲ್ಲಿ ಹೆಡೆ ಎತ್ತಿ ನಿಂತ ಬುಸ್ ಬುಸ್... 40 ನಿಮಿಷ ಸಂಚಾರ ಅಸ್ತವ್ಯಸ್ತ

ಬೆಂಗಳೂರು: ಸಿಲಿಕಾನ್ ಸಿಟಿಯ ಟ್ರಾಫಿಕ್ ಜಾಮ್‌ಗಳ ಬಗ್ಗೆ ನೀವು ಕೇಳಿರುತ್ತೀರಿ, ಆದರೆ ಸೋಮವಾರ (ಜು. 6) ಸಂಜೆ ಬೆಂಗಳೂರಿನ ಪ್ಯಾಲೇಸ್ ರಸ್ತೆಯಲ್ಲಿ ಸಂಭವಿಸಿದ ಟ್ರಾಫಿಕ್ ಜಾಮ್ ಮಾತ್ರ ವಿಭಿನ್ನವಾಗಿತ್ತು. ಹೌದು, ಇಲ್ಲಿನ ರಸ್ತೆಯ ಮಧ್ಯೆ ನಾಗರಹಾವೊಂದು ಹೆಡೆ ಎತ್ತಿ ನಿಂತಿದ್ದು ಇದರಿಂದ ಈ ಮಾರ್ಗದಲ್ಲಿ ಸಂಚರಿಸುವ ವಾಹನ ಸವಾರರು ಕೆಲ ಕಾಲ ಪರದಾಡುವಂತಾಯಿತು.

ಪ್ಯಾಲೇಸ್ ರಸ್ತೆಯ ಮಧ್ಯಭಾಗಕ್ಕೆ ಬಂದ ನಾಗರಹಾವು ಸುಮಾರು 30 ರಿಂದ 40 ನಿಮಿಷಗಳ ಕಾಲ ರಸ್ತೆಯಲ್ಲೇ ಬೀಡುಬಿಟ್ಟಿತ್ತು. ಇದರಿಂದ ವಾಹನ ಸವಾರರು ಹಾವು ಅಲ್ಲಿಂದ ಸರಿಯುವವವರೆಗೆ ಅಲ್ಲೇ ನಿಂತು ಕಾಯುವ ಸ್ಥಿತಿ ನಿರ್ಮಾಣವಾಗಿತ್ತು. ಇದರೊಂದಿಗೆ ಕೊಂಚ ಹೆಚ್ಚಿನ ಮಟ್ಟದಲ್ಲೇ ಟ್ರಾಫಿಕ್ ಜಾಮ್ ಉಂಟಾಗಿತ್ತು

ಈ ಅಪರೂಪದ ದೃಶ್ಯವನ್ನು ಕೆಲವರು ತಮ್ಮ ಮೊಬೈಲ್‌ನಲ್ಲಿ ಸೆರೆಹಿಡಿದು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ಅದು ವೈರಲ್ ಆಗಿದೆ. "ಬೆಂಗಳೂರು ಟ್ರಾಫಿಕ್‌ಗೆ ಹೊಸ ವಿಐಪಿ ಅತಿಥಿ ಬಂದಿದ್ದಾರೆ.ಎಂದು ನೆಟ್ಟಿಗರು ಹಾಸ್ಯಭರಿತವಾಗಿ ಪ್ರತಿಕ್ರಿಯಿಸಿದ್ದಾರೆ.

ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸ್ ಸಿಬ್ಬಂದಿ ಮತ್ತು ಉರಗ ರಕ್ಷಕರು ಹಾವನ್ನು ಅತ್ಯಂತ ಸುರಕ್ಷಿತವಾಗಿ ರಕ್ಷಿಸಿ, ಬೇರೆಡೆಗೆ ಸ್ಥಳಾಂತರಿಸಿದ್ದಾರೆ. ಇದರಿಂದಾಗಿ ನಾಗರಹಾವು ಹಾಗೂ ಸವಾರರು ಇಬ್ಬರೂ ಯಾವುದೇ ಅಪಾಯವಿಲ್ಲದೆ ಪಾರಾಗಿದ್ದಾರೆ. ಹಾವು ರಸ್ತೆಯಿಂದ ದೂರವಾದ ಬಳಿಕ ಸಂಚಾರ ಎಂದಿನಂತೆ ಮುಂದುವರಿಯಿತು.

Dailyhunt
Disclaimer: This content has not been generated, created or edited by Dailyhunt. Publisher: Udayavani