Dailyhunt
ಡಾಲಿಯ "ಹೆಡ್‌ ಆಯಂಡ್‌ ಬುಷ್‌' ಟೀಮ್‌ ಗೆ ರಘು ಮುಖರ್ಜಿ ಎಂಟ್ರಿ

ಡಾಲಿಯ "ಹೆಡ್‌ ಆಯಂಡ್‌ ಬುಷ್‌' ಟೀಮ್‌ ಗೆ ರಘು ಮುಖರ್ಜಿ ಎಂಟ್ರಿ

ಇನ್ನು ನಟ ಧನಂಜಯ್‌ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸುತ್ತಿರುವ, ಬೆಂಗಳೂರಿನ ಮಾಜಿ ಡಾನ್‌ ಎಂ.ಪಿ ಜಯರಾಜ್‌ ಜೀವನ ಆಧರಿಸಿ ತಯಾರಾಗುತ್ತಿರುವ “ಹೆಡ್‌ ಆಯಂಡ್‌ ಬುಷ್‌’ ಚಿತ್ರಕ್ಕೆ ಹೊಸದಾಗಿ ಮತ್ತೂಬ್ಬ ನಟ ರಘು ಮುಖರ್ಜಿ ಸೇರ್ಪಡೆಯಾಗಿದ್ದಾರೆ.

ಚಿತ್ರದಲ್ಲಿ ಧನಂಜಯ್‌ಗೆ ನಾಯಕಿಯಾಗಿ ತೆಲುಗಿನ ಖ್ಯಾತ ನಟಿ ಪಾಯಲ್‌ ರಜಪೂತ್‌ ಜೋಡಿಯಾಗಿದ್ದು, ಈಗಾಗಲೇ ವಸಿಷ್ಠ ಸಿಂಹ, ಲೂಸ್‌ ಮಾದ ಯೋಗೇಶ್‌, ಬಾಲು ನಾಗೇಂದ್ರ, ಶ್ರುತಿ ಹರಿಹರನ್‌ ಮೊದಲಾದವರು “ಹೆಡ್‌ ಆಯಂಡ್‌ ಬುಷ್‌’ ಚಿತ್ರದ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಟ್ರೆಡಿಷನಲ್‌ ಲುಕ್‌ ನಲ್ಲಿ ಮಿಂಚಿದ 'ಹರಿಪ್ರಿಯಾ'

ಇದೀಗ ಈ ತಂಡಕ್ಕೆ ಹೊಸದಾಗಿ ರಘು ಮುಖರ್ಜಿ ಎಂಟ್ರಿಯಾಗಿದೆ. ಸ್ವತಃ ಧನಂಜಯ್‌ ತಮ್ಮ ಸೋಶಿಯಲ್‌ ಮೀಡಿಯಾ ಖಾತೆಯಲ್ಲಿ ರಘು ಮುಖರ್ಜಿ ಚಿತ್ರದ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿರುವುದರ ಬಗ್ಗೆ ಮಾಹಿತಿ ನೀಡಿದ್ದಾರೆ.

ಈ ವರ್ಷದ ಆರಂಭದಲ್ಲಿ ತೆರೆಕಂಡ ಪ್ರಜ್ವಲ್‌ ದೇವರಾಜ್‌ ಅಭಿನಯದ “ಇನ್ಸ್‌ಪೆಕ್ಟರ್‌ ವಿಕ್ರಂ’ ಸಿನಿಮಾದಲ್ಲಿ ರಘು ಮುಖರ್ಜಿ ನೆಗೆಟಿವ್‌ ಪಾತ್ರದಲ್ಲಿ ಅಭಿನಯಿಸಿದ್ದರು. ಅದಾದ ಬಳಿಕ “ಹೆಡ್‌ ಆಯಂಡ್‌ ಬುಷ್‌’ ಚಿತ್ರದಲ್ಲಿ ಅಭಿನಯಿಸುತ್ತಿರುವ ಘೋಷಣೆಯಾಗಿದ್ದು, ಸದ್ಯಕ್ಕೆ ರಘು ಮುಖರ್ಜಿ ಪಾತ್ರದ ಬಗ್ಗೆ ಹೆಚ್ಚಿನ ಮಾಹಿತಿ ಹೊರಬಂದಿಲ್ಲ

Dailyhunt
Disclaimer: This content has not been generated, created or edited by Dailyhunt. Publisher: Udayavani