Sunday, 09 May, 9.05 pm ಉದಯವಾಣಿ

ಟಾಪ್ 10 ಸುದ್ದಿ
ದಾವಣಗೆರೆಯಲ್ಲಿ 393 ಸೋಂಕಿತರು ಗುಣಮುಖ, 453 ಹೊಸ ಪ್ರಕರಣ ಪತ್ತೆ

ದಾವಣಗೆರೆ: ಜಿಲ್ಲೆಯಲ್ಲಿ ಭಾನುವಾರ ಕೊರೊನಾದಿಂದ ಗುಣಮುಖರಾದ 393 ಸೋಂಕಿತರು ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ.

ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 251, ಹರಿಹರದಲ್ಲಿ 43, ಜಗಳೂರಿನಲ್ಲಿ 27, ಚನ್ನಗಿರಿ ಯಲ್ಲಿ 34, ಹೊನ್ನಾಳಿಯಲ್ಲಿ 19 ಹಾಗೂ ಹೊರ ಜಿಲ್ಲೆಯ 19 ಒಳಗೊಂಡಂತೆ 393 ಸೋಂಕಿತರು ಗುಣಮುಖರಾಗಿದ್ದಾರೆ.

ಜಿಲ್ಲೆಯಲ್ಲಿ 453 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ದಾವಣಗೆರೆ ನಗರ ಮತ್ತು ತಾಲೂಕಿನ ಇತರೆ ಭಾಗದ 266, ಹರಿಹರದಲ್ಲಿ 31, ಜಗಳೂರಿನಲ್ಲಿ 26, ಚನ್ನಗಿರಿಯಲ್ಲಿ 46, ಹೊನ್ನಾಳಿಯಲ್ಲಿ 64 ಹಾಗೂ ಹೊರ ಜಿಲ್ಲೆಯ 20 ಜನರು ಒಳಗೊಂಡಂತೆ 453 ಜನರಲ್ಲಿ ಮಹಾಮಾರಿ ಕೊರೊನಾ ಪತ್ತೆಯಾಗಿದೆ.

ಕೊರೊನಾದಿಂದ ಐವರು ಮೃತಪಟ್ಟಿದ್ದಾರೆ. ಐವರ ಸಾವಿನಿಂದ ಜಿಲ್ಲೆಯಲ್ಲಿ ಈವರೆಗೆ ಕೊರೊನಾಕ್ಕೆ ಬಲಿಯಾದವರ ಸಂಖ್ಯೆ 301 ಕ್ಕೆ ಏರಿದೆ. ಸಾವಿನ ಸಂಖ್ಯೆ ಮುನ್ನೂರರ ಗಡಿ ದಾಟಿದೆ.

ದಾವಣಗೆರೆ ತಾಲೂಕಿನ ಹುಚ್ಚವ್ವನಹಳ್ಳಿ ಗ್ರಾಮದ 65 ವರ್ಷದ ವೃದ್ಧೆ, ದಾವಣಗೆರೆ ಬೀಡಿ ಲೇಔಟ್ ನ 56 ವರ್ಷದ ಮಹಿಳೆ, ಇಡಬ್ಲ್ಯುಎಸ್ ಕಾಲೋನಿಯ 39 ವರ್ಷದ ವ್ಯಕ್ತಿ, ಚೌಕಿಪೇಟೆಯ 45 ವರ್ಷದ ವ್ಯಕ್ತಿ, ಹರಿಹರದ 68 ವರ್ಷದ ವೃದ್ಧ ಮೃತಪಟ್ಟವರು.

ಇದನ್ನೂ ಓದಿ :ಕೋವಿಡ್ ವಾರ್ ರೂಂಗೆ ಸಚಿವರಾದ ಎಸ್.ಟಿ. ಸೋಮಶೇಖರ್, ಅಶೋಕ್ ದಿಡೀರ್ ಭೇಟಿ

ಕಳೆದ ವರ್ಷ ಕೊರೊನಾ ಪ್ರಾರಂಭದಿಂದ ದಾವಣಗೆರೆ ತಾಲೂಕಿನಲ್ಲಿ 16917, ಹರಿಹರದಲ್ಲಿ 4225, ಜಗಳೂರಿನಲ್ಲಿ 1510, ಚನ್ನಗಿರಿಯಲ್ಲಿ 2869, ಹೊನ್ನಾಳಿಯಲ್ಲಿ 3342, ಹೊರ ಜಿಲ್ಲೆಯ 845 ಜನರು ಸೇರಿದಂತೆ ಈವರೆಗೆ ಒಟ್ಟು 29,708 ಜನರು ಸೋಂಕಿಗೆ ಒಳಗಾಗಿದ್ದಾರೆ.

ಕೊರೊನಾದಿಂದ ದಾವಣಗೆರೆ ತಾಲೂಕಿನಲ್ಲಿ 14838, ಹರಿಹರದಲ್ಲಿ 3791, ಜಗಳೂರಿನಲ್ಲಿ 1325, ಚನ್ನಗಿರಿಯಲ್ಲಿ 2546, ಹೊನ್ನಾಳಿಯಲ್ಲಿ 2989, ಹೊರ ಜಿಲ್ಲೆಯ 705 ಜನರು ಸೇರಿದಂತೆ 26,194 ಸೋಂಕಿತರು ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ 3213 ಸಕ್ರಿಯ ಪ್ರಕರಣಗಳಿವೆ.

Dailyhunt
Disclaimer: This story is auto-aggregated by a computer program and has not been created or edited by Dailyhunt. Publisher: Udayavani
Top