Dailyhunt Logo
  • Light mode
    Follow system
    Dark mode
    • Play Story
    • App Story
Daily horoscope 06-07-2026 ಸೋಮವಾರ: ಸರಕಾರಿ ಉದ್ಯೋಗಸ್ಥರಿಗೆ ಸವಾಲಿನ ಸನ್ನಿವೇಶ

Daily horoscope 06-07-2026 ಸೋಮವಾರ: ಸರಕಾರಿ ಉದ್ಯೋಗಸ್ಥರಿಗೆ ಸವಾಲಿನ ಸನ್ನಿವೇಶ

ಮೇಷ: ಕೆಲಸಗಳ ಮರು ಹೊಂದಾಣಿಕೆ.ವಸ್ತ್ರ, ಆಭರಣ ವ್ಯಾಪಾರಿಗಳಿಗೆ ಅನುಕೂಲ. ಸರಕಾರಿ ಉದ್ಯೋಗಸ್ಥರಿಗೆ ಸವಾಲಿನ ಸನ್ನಿವೇಶ. ಸಣ್ಣ ಉದ್ಯಮಿಗಳಿಗೆ ಸಮಾಧಾನ. ಮಕ್ಕಳಿಗೆ ಕಲಿಕೆಯಲ್ಲಿ ಉತ್ಸಾಹ ವೃದ್ಧಿ.

ವೃಷಭ: ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಲಾಭ. ವೃತ್ತಿ ಪರಿಣತರಿಗೆ ಉದ್ಯೋಗಾವಕಾಶ.

ವಾಹನ ದುರಸ್ತಿ ಮಾಡುವವರಿಗೆ ಅನುಕೂಲದ ದಿನ. ಕುಟುಂಬದಲ್ಲಿ ಸಾಮರಸ್ಯ ವೃದ್ಧಿ. ಎಲ್ಲರಿಗೂ ಉತ್ತಮ ಆರೋಗ್ಯ ಭಾಗ್ಯ.

ಮಿಥುನ: ನಿಯಮಪೂರ್ವಕ ಕೆಲಸ ಮಾಡುವವರಿಗೆ ಯಶಸ್ಸು. ಕೆಲಸವನ್ನು ಪ್ರೀತಿಸುವ ಪ್ರಯತ್ನದಲ್ಲಿ ಸಫ‌ಲ. ಹಳೆಯ ಗೆಳೆಯ ಮತ್ತೆ ಸಂಪರ್ಕಕ್ಕೆ. ಯುವಜನರಿಗೆ ವೃತ್ತಿಪರ ಶಿಕ್ಷಣ ಆಯೋಜನೆ. ಆರೋಗ್ಯ ವೃದ್ಧಿಯಿಂದ ನೆಮ್ಮದಿ.

ಕರ್ಕಾಟಕ: ಕಾರ್ಯಸಾಧನೆಯಲ್ಲಿ ಸಾಫ‌ಲ್ಯ ದಿಂದ ಸಂತೃಪ್ತಿ. ಉದ್ಯೋಗಸ್ಥರಲ್ಲಿ ಕೆಲವರಿಗೆ ಸ್ಥಾನ ಬದಲಾವಣೆ. ಉದ್ಯಮಗಳಿಗೆ ಸರಕಾರಿ ಸಬ್ಸಿಡಿ ಪ್ರಾಪ್ತಿ. ಮಹಿಳೆಯರ ಸ್ವೋದ್ಯೋಗ ಯೋಜನೆಗಳಿಗೆ ಕೀರ್ತಿ. ದೂರಪ್ರಯಾಣದಿಂದ ಆಯಾಸ.

ಸಿಂಹ: ಉದ್ಯೋಗಸ್ಥರಿಗೆ ಮೇಲಿನವರ ಪ್ರೋತ್ಸಾಹ. ಉದ್ಯಮಕ್ಕೆ ನವಚೈತನ್ಯ ನೀಡುವ ಪ್ರಕ್ರಿಯೆ ಆರಂಭ. ಪರಿಣತರ ಸಲಹೆಯಂತೆ ಹೊಸ ಕ್ರಮಗಳು. ಹತ್ತಿರದ ತೀರ್ಥಕ್ಷೇತ್ರಕ್ಕೆ ಸಂದರ್ಶನ. ಮಿತಾಹಾರ ಸೇವನೆಯಿಂದ ಆರೋಗ್ಯ

ಕನ್ಯಾ: ಪ್ರತಿಭಾವಂತರಿಗೆ ಸ್ಥಾನಗೌರವ. ಸಣ್ಣ ಉದ್ಯಮ ಘಟಕದ ಪ್ರಗತಿಗೆ ಸವಾಲುಗಳು. ಅವಿವಾಹಿತರಿಗೆ ಶೀಘ್ರ ವಿವಾಹ ಯೋಗ. ದೂರದೇಶದಲ್ಲಿರುವ ಬಂಧುಗಳಿಂದ ಶುಭವಾರ್ತೆ. ಲೇವಾದೇವಿ ವ್ಯವಹಾರ ಬಿಡುವುದರಿಂದ ಕ್ಷೇಮ.

ತುಲಾ: ಹೊಸಬರೊಂದಿಗೆ ಮೈತ್ರಿಲಾಭ. ಉತ್ಪಾದನ ಕ್ಷೇತ್ರದಲ್ಲಿ ಪೈಪೋಟಿ ಶಮನ. ಉದ್ಯೋಗಾಪೇಕ್ಷಿಗಳಿಗೆ ಅನುಕೂಲ ವಾತಾವರಣ. ಲೇವಾದೇವಿ ವ್ಯವಹಾರದಲ್ಲಿ ನಷ್ಟ. ಮಧ್ಯವಯಸ್ಕರ ಆರೋಗ್ಯದ ಕಡೆಗೆ ಗಮನ ಇರಲಿ.

ವೃಶ್ಚಿಕ: ನಿಕಟ ಭವಿಷ್ಯದಲ್ಲಿ ಯಾವುದೇ ಸಮಸ್ಯೆ ಬಾಧಿಸದು. ಉದ್ಯೋಗಸ್ಥರಿಗೆ ಒಂದು ಬಗೆಯ ನಿಶ್ಚಿಂತೆ. ಸರಕಾರಿ ಅಧಿಕಾರಿಗಳಿಗೆ ಕೊಂಚ ಕಿರಿಕಿರಿ. ರಾಜಕಾರಣಿಗಳಿಗೆ ಅನಿಶ್ಚಿತ ಪರಿಸ್ಥಿತಿ. ವಸ್ತ್ರ, ಆಭರಣ, ಗೃಹೋಪಯೋಗಿ ಸಾಮಗ್ರಿಗಳ ವ್ಯಾಪಾರಿಗಳಿಗೆ ಲಾಭ.

ಧನು: ಎಡೆಬಿಡದ ಪ್ರಯತ್ನದಿಂದ ವಾತಾವರಣ ಶುದ್ಧಿ. ಉದ್ಯಮದ ವೈವಿಧ್ಯೀಕರಣ ಯೋಜನೆ ಸಫ‌ಲ. ಹಿರಿಯ ನಾಗರಿಕರ ಆರೋಗ್ಯ ರಕ್ಷಣೆಗೆ ಸಹಾಯ. ಮಕ್ಕಳ ಪ್ರತಿಭೆ ವಿಕಸನಕ್ಕೆ ಪ್ರೋತ್ಸಾಹ. ಆರೋಗ್ಯ ಕಾರ್ಯಕರ್ತರಿಗೆ ಕೆಲಸದ ಒತ್ತಡ..

ಮಕರ: ಉದ್ಯೋಗಸ್ಥರ ಹಳೆಯ ಸಮಸ್ಯೆಗೆ ಪರಿಹಾರ. ಹಿತಶತ್ರುಗಳ ಸಂಚಿಗೆ ಸೋಲು. ಉದ್ಯಮಿಗಳಿಗೆ ಹಠಾತ್‌ ನಷ್ಟವಾಗುವ ಭೀತಿ. ಯಂತ್ರೋಪಕರಣ ಉದ್ಯಮಿಗಳಿಗೆ ಅನುಕೂಲದ ವಾತಾವರಣ. ಹಿರಿಯರನ್ನು ಸಮ್ಮಾನಿಸುವ ಅವಕಾಶ ಪ್ರಾಪ್ತಿ.

ಕುಂಭ: ಉದ್ಯೋಗಸ್ಥರಿಗೆ ಹಿತಕರವಾದ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆಯ ಅನುಭವ. ಶೇರು ಮಾರುಕಟ್ಟೆಯಲ್ಲಿ ಹೂಡಿಕೆಯಿಂದ ಲಾಭ. ಸಾಹಿತ್ಯ, ಸಂಗೀತ, ನೃತ್ಯಾದಿ ಲಲಿತ ಕಲೆಗಳಲ್ಲಿ ಆಸಕ್ತರಿಗೆ ಹರ್ಷ.

ಮೀನ: ಕೆಲಸಕ್ಕೆ ಅನುಕೂಲ ವಾತಾವರಣ. ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ.ಇಲಾಖೆಗಳವರಿಂದ ಉತ್ತಮ ಸಹಕಾರ. ಆವಶ್ಯಕತೆ ಉಳ್ಳವರಿಗೆ ಸಹಾಯ ಮಾಡುವ ಅವಕಾಶ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ. ಶಿವಾಲಯ ಬೇಟಿಯ ಸಾಧ್ಯತೆ.

Dailyhunt
Disclaimer: This content has not been generated, created or edited by Dailyhunt. Publisher: Udayavani