ಮೇಷ: ಆರು ದಿನ ದುಡಿದವರಿಗೆ ವಿರಾಮದ ಆನಂದ. ಕೃಷಿ ಕ್ಷೇತ್ರದ ಅಭಿವೃದ್ಧಿ ಕಾರ್ಯಗಳ ವೀಕ್ಷಣೆ. ಬಂಧುವರ್ಗದಲ್ಲಿ ಶಿಶು ಜನನ. ಸಂಸಾರದಲ್ಲಿ ಪ್ರೀತಿ, ವಿಶ್ವಾಸ, ಸಮಾಧಾನಗಳ ವಾತಾವರಣ. ಆರೋಗ್ಯ ಉತ್ತಮ.ವೃಷಭ: ಜಂಜಾಟದ ಬಳಿಕ ವಿರಾಮದ ಆನಂದ. ದೂರ ದೇಶದಲ್ಲಿರುವ ಮಕ್ಕಳೊಡನೆ ಸಂಭಾಷಣೆ.
ಬಂಧುಗಳ ಮನೆಯಲ್ಲಿ ದೇವತಾಕಾರ್ಯ. ಆಪ್ತಮಿತ್ರನ ಹಠಾತ್ ಭೇಟಿ. ಇಷ್ಟದೇವರ ಆಲಯ ಸಂದರ್ಶನ. ಮನೆಯಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ.
ಮಿಥುನ: ಭಗವಂತನ ಅನುಗ್ರಹದಿಂದ ಕ್ಷೇಮದ ಅನುಭವ. ಉದ್ಯೋಗ ಸ್ಥಾನದ ಮಿತ್ರರ ಆಗಮನ. ಬಾಲ್ಯದ ಒಡನಾಡಿಯ ಅನಿರೀಕ್ಷಿತ ದರ್ಶನ. ಪಿತ್ರಾರ್ಜಿತ ಆಸ್ತಿ ಅಭಿವೃದ್ಧಿ ಕಾರ್ಯ ಮುಂದುವರಿಕೆ. ಲೇವಾದೇವಿ ವ್ಯವಹಾರದಿಂದ ದೂರವಿರಿ.
ಕರ್ಕಾಟಕ: ಸಿಹಿನೆನಪುಗಳನ್ನು ಮೆಲುಕು ಹಾಕುತ್ತಾ ವಿರಾಮವನ್ನು ಅನುಭವಿಸಿ. ವಸ್ತ್ರ, ಸಿದ್ಧ ಉಡುಪು, ಪಾದರಕ್ಷೆ, ಶೋಕಿ ಸಾಮಗ್ರಿ ವ್ಯಾಪಾರಿಗಳಿಗೆ ಕೈತುಂಬಾ ಲಾಭ. ಚಂಚಲ ಹವಾಮಾನದಿಂದ ಕೃಷಿಗೆ ತೊಂದರೆ. ಲೇವಾದೇವಿ ವ್ಯವಹಾರದಲ್ಲಿ ಹಿನ್ನಡೆ. ಹಿರಿಯರ ಮನೆಯಲ್ಲಿ ದೇವತಾ ಕಾರ್ಯ.
ಸಿಂಹ: ಸಪ್ತಾಹದ ಸಾಧನೆಗಳ ಸಿಂಹಾವಲೋಕನ. ಮನೆಗೆ ಬಂದ ಕಿರಿಯ ಸಹೋದ್ಯೋಗಿಗಳಿಂದ ಗೌರವಾರ್ಪಣೆ. ಉದ್ಯೋಗಾಸಕ್ತ ಹುಡುಗರಿಗೆ ಮಾರ್ಗದರ್ಶನ. ಐಟಿ ಉದ್ಯೋಗಿಗಳಿಗೆ ಆಪ್ತ ಸಲಹಾ ಕಾರ್ಯಕ್ರಮ. ಹಿರಿಯರು, ಮಹಿಳೆಯರು, ಮಕ್ಕಳಿಗೆ ಆನಂದದ ದಿನ.
ಕನ್ಯಾ: ಆಗಾಗ ಅಡ್ಡಗಾಲು ಹಾಕುವ ಹಿತಶತ್ರುಗಳು. ಸರಕಾರಿ ಅಧಿಕಾರಿಗಳಿಗೆ ಮತ್ತು ನೌಕರರಿಗೆ ನೆಮ್ಮದಿ. ಹಳೆಯ ಒಡನಾಡಿಯ ಪುನರ್ಮಿಲನ. ಕುಟುಂಬದ ಹಿರಿಯರ ಭೇಟಿ. ದೂರದಲ್ಲಿರುವ ಕುಲದೇವರ ದೇವಾಲಯ, ನಾಗಸನ್ನಿಧಿ ಸಂದರ್ಶನ.
ತುಲಾ: ನಿಯೋಜಿತ ಕಾರ್ಯಗಳು ಮುಗಿದ ತೃಪ್ತಿ. ಸಹೋದ್ಯೋಗಿಯ ಮನೆಯಲ್ಲಿ ಧಾರ್ಮಿಕ ಕಾರ್ಯಕ್ರಮ ಅವಿವಾಹಿತ ಹುಡುಗ- ಹುಡುಗಿಯರಿಗೆ ಶುಭಕಾಲ ಬರುವ ಸೂಚನೆ. ಮಕ್ಕಳ ಪ್ರತಿಭೆ ಅನಾವರಣದಿಂದ ಪೋಷಕರಿಗೆ ಹರ್ಷ.
ವೃಶ್ಚಿಕ: ನಾಳೆಯ ಹೊಸ ಜವಾಬ್ದಾರಿ ನಿರ್ವಹಣೆಗೆ ಸಿದ್ಧತೆ. ಮಗನಿಗೆ ವಿದೇಶದಲ್ಲಿ ಉದ್ಯೋಗ. ಲೇವಾದೇವಿ ವ್ಯವಹಾರದಲ್ಲಿ ಮಧ್ಯಮ ಲಾಭ. ಯಂತ್ರೋಪಕರಣ ವ್ಯಾಪಾರಿಗಳಿಗೆ ಆದಾಯ ವೃದ್ಧಿ. ಮೆಕ್ಯಾನಿಕ್ ವೃತ್ತಿಯವರಿಗೆ ಉದ್ಯೋಗಾವಕಾಶ.
ಧನು: ಆಂತರಿಕ ಸಾಧನೆಯಲ್ಲಿ ಪ್ರಗತಿ. ಸಾಹಿತ್ಯ ಸಂಗೀತಾದಿ ಕಲಾಸಂಬಂಧಿ ಚಟುವಟಿಕೆಗಳಲ್ಲಿ ಆಸಕ್ತಿ. ಹಳೆಯ ಗೆಳೆಯರ ಸಂಪರ್ಕದಿಂದ ಹರ್ಷ. ಕೃಷಿ ಚಟುವಟಿಕೆಗಳು ಪ್ರಗತಿಯಲ್ಲಿ. ಯಂತ್ರೋಪಕರಣ ಬಿಡಿಭಾಗಗಳಿಗೆ ಅಧಿಕ ಬೇಡಿಕೆ.
ಮಕರ: ಕಾರ್ಯರಂಗದ ಒತ್ತಡಗಳಿಗೆ ಒಂದು ದಿನದ ವಿರಾಮ. ಮನೆಮಂದಿಯೊಂದಿಗೆ ದೇವತಾ ರಾಧನೆ. ಬಂಧುಗಳ ಮನೆಯಲ್ಲಿ ನಾಮಸಂಕೀರ್ತನೆ. ಟೈಲರಿಂಗ್ ವೃತ್ತಿಯವರಿಗೆ ಅನುಕೂಲ. ಬಂಧುಗಳ ಜತೆಯಲ್ಲಿ ದೇವಾಲಯಕ್ಕೆ ಭೇಟಿ.
ಕುಂಭ: ವಾರವಿಡೀ ಅವಿಶ್ರಾಂತ ದುಡಿದರೂ ದೇಹಕ್ಕೆ ವಿಶ್ರಾಂತಿ ಇಲ್ಲ.ಉತ್ಪನ್ನಗಳಿಗಾಗಿ ಬಂದ ಬೇಡಿಕೆಗಳ ಕಡೆಗೆ ಗಮನ ಹರಿಸುವ ಅನಿವಾರ್ಯತೆ. ಸಮಾಜ ಸೇವಾ ಕಾರ್ಯಗಳತ್ತ ಗಮನ..ಕುಲದೇವರ ಆಲಯ ಸಂದರ್ಶನ. ಮನೆಯಲ್ಲಿ ಹಿರಿಯರು, ಸಂಗಾತಿ, ಮಕ್ಕಳಿಗೆ ಸಂಭ್ರಮ.
ಮೀನ: ಸಂಸಾರ,ಉದ್ಯೋಗ, ವ್ಯವಹಾರಗಳಲ್ಲಿ ಮುಳುಗಿದ ಬಳಿಕ ಒಂದು ದಿನದ ವಿರಾಮ.ವೃತ್ತಿಬಾಂಧವರಿಂದ ಕೃತಜ್ಞತೆ ಸಲ್ಲಿಕೆ. ತಾಯಿಯ ಯೋಗಕ್ಷೇಮ ವಿಚಾರಣೆ..ಗುರುಹಿರಿಯರ ಭೇಟಿಗಾಗಿ ಸಣ್ಣ ಪ್ರಯಾಣ ಸಂಭವ.ಮನೆಮಂದಿಯ ಆರೋಗ್ಯ ಉತ್ತಮ.

