Dailyhunt Logo
  • Light mode
    Follow system
    Dark mode
    • Play Story
    • App Story
Daily horoscope 5-7-2026 ರವಿವಾರ: ಹಿತಶತ್ರುಗಳ ಮಸಲತ್ತಿಗೆ ಸೋಲು

Daily horoscope 5-7-2026 ರವಿವಾರ: ಹಿತಶತ್ರುಗಳ ಮಸಲತ್ತಿಗೆ ಸೋಲು

ಮೇಷ: ಸಪ್ತಾಹದ ಕೊನೆಯಲ್ಲಿ ಕಳೆದ ಆರು ದಿನಗಳ ಸಾಧನೆಯ ಸಿಂಹಾವಲೋಕನ. ಸಮಯಕ್ಕೆ ತಕ್ಕ ಮಾರ್ಗೋಪಾಯ ಅನುಸರಣೆ. ಸರಕಾರಿ ಉದ್ಯೋಗಸ್ಥರಿಗೆ ನೆಮ್ಮದಿ ಕಡಿಮೆ. ಉದ್ಯಮಿಗಳ ವರ್ಗಕ್ಕೆ ಸಮಾಧಾನ.ವೃಷಭ: ರವಿವಾರ ಮಂದಗತಿ ಸ್ವಾಭಾವಿಕ. ವಾಹನ ದುರಸ್ತಿ ಮಾಡುವವರಿಗೆ ಅನುಕೂಲದ ದಿನ.

ಸಿದ್ಧ ಉಡುಪುಗಳು ಹಾಗೂ ವಸ್ತ್ರ ಉದ್ಯಮಕ್ಕೆ ಶುಕ್ರದೆಶೆ. ಕುಟುಂಬದಲ್ಲಿ ಸಾಮರಸ್ಯ ವೃದ್ಧಿ. ಸಾಕಷ್ಟು ದ್ರವಾಹಾರ ಸೇವಿಸಿ.

ಮಿಥುನ: ಕಾರ್ಯ ನಿರ್ವಹಣೆಯಲ್ಲಿ ಚುರುಕುತನ ಪ್ರಕಟ. ಹುದ್ದೆಯ ಮೇಲೆ ಹೆಚ್ಚಿದ ಪ್ರೀತಿ. ಹಳೆಯ ಗೆಳೆಯ ಮತ್ತೆ ಸಂಪರ್ಕಕ್ಕೆ. ಜನಸೇವಾ ಕಾರ್ಯಗಳಲ್ಲಿ ಆಸಕ್ತಿ. ಪ್ರಕೃತಿಗೆ ನಿಕಟವಾಗಿ ನೆಮ್ಮದಿ. ಮಕ್ಕಳಿಗೆ ಕಲಿಕೆಯಲ್ಲಿ ಹೆಚ್ಚಿನ ಆಸಕ್ತಿ.

ಕರ್ಕಾಟಕ: ಶಿಸ್ತಿನ ನಡವಳಿಕೆಯಿಂದ ವ್ಯಕ್ತಿತ್ವಕ್ಕೆ ಮೆರುಗು. ಉದ್ಯೋಗಸ್ಥರಿಗೆ ಉತ್ತೇಜನದ ಅನುಭವ. ಉದ್ಯಮಗಳ ಬೆಳವಣಿಗೆಗೆ ಅನುಕೂಲದ ಸನ್ನಿವೇಶ. ಮಹಿಳೆಯರ ಸ್ವೋದ್ಯೋಗ ಯೋಜನೆಗಳಿಗೆ ಕೀರ್ತಿ ರಾತ್ರಿ ಪ್ರಯಾಣದಲ್ಲಿ ಎಚ್ಚರ.

ಸಿಂಹ: ಎಲ್ಲರ ಸಹಕಾರ ಗಿಟ್ಟಿಸುವ ಬುದ್ಧಿವಂತಿಕೆ. ಉದ್ಯಮಕ್ಕೆ ನವಚೈತನ್ಯ ನೀಡುವ ಪ್ರಕ್ರಿಯೆ ಮುಂದುವರಿಕೆ. ಪರಿಣತರ ಸಲಹೆಯಂತೆ ಹೊಸ ಕ್ರಮಗಳು. ಕುಟುಂಬದಲ್ಲಿ ಎಲ್ಲರಿಗೂ ಉತ್ತಮ ಆರೋಗ್ಯ.ಲೋಕಹಿತ ಚಿಂತನೆಯಿಂದ ನೆಮ್ಮದಿ.

ಕನ್ಯಾ: ಎಡೆಬಿಡದ ಸಾಧನೆ ನೀಡಿದ ಸತ್ಫಲ. ಸಣ್ಣ ಉದ್ಯಮ ಘಟಕಗಳು ಪ್ರಗತಿಪಥದಲ್ಲಿ. ದೂರದೇಶದಲ್ಲಿರುವ ಮಿತ್ರರಿಂದ ವ್ಯವಹಾರದ ಪ್ರಸ್ತಾವ. ಕೇಟರಿಂಗ್‌ ವ್ಯವಹಾರಸ್ಥರಿಗೆ ಮಧ್ಯಮ ಫ‌ಲ. ವಿವಾಹ ಮಾತುಕತೆಯಲ್ಲಿ ಭಾಗಿ.

ತುಲಾ: ಪರಿಚಿತರಲ್ಲಿ ಮಿತ್ರತ್ವ ವೃದ್ಧಿ. ಉತ್ಪಾದನ ಕ್ಷೇತ್ರದಲ್ಲಿ ಪೈಪೋಟಿ ಶಮನ. ಉದ್ಯೋಗಾಪೇಕ್ಷಿಗಳಿಗೆ ಅನುಕೂಲ ವಾತಾವರಣ. ಲೇವಾದೇವಿ ವ್ಯವಹಾರದಲ್ಲಿ ನಷ್ಟ.ಅಪರಿಚಿತರೊಡನೆ ಸ್ನೇಹ ಬೆಳೆಸುವಾಗ ಎಚ್ಚರ.

ವೃಶ್ಚಿಕ: ಉದ್ಯೋಗಸ್ಥರಿಗೆ ಕಾರ್ಯ ಮುಗಿದ ಸಮಾಧಾನ. ಸರಕಾರಿ ಅಧಿಕಾರಿಗಳಿಗೆ ಸತ್ವಪರೀಕ್ಷೆ. ರಾಜಕಾರಣಿಗಳಿಗೆ ಅನಿಶ್ಚಿತ ಪರಿಸ್ಥಿತಿ. ವಸ್ತ್ರ , ಆಭರಣ, ಗೃಹೋಪಯೋಗಿ ಸಾಮಗ್ರಿಗಳ ವ್ಯಾಪಾರಿಗಳಿಗೆ ಲಾಭ. ಆಸ್ತಿ ಖರೀದಿ- ಮಾರಾಟ ವ್ಯವಹಾರಸ್ಥರಿಗೆ ಹಾನಿ.

ಧನು: ಉದ್ಯಮ ವೈವಿಧ್ಯೀಕರಣ ಯಶಸ್ವಿ. ಹಿರಿಯ ನಾಗರಿಕರ ಆರೋಗ್ಯ ರಕ್ಷಣೆಗೆ ಸಹಾಯ. ಮಕ್ಕಳ ಪ್ರತಿಭೆ ವಿಕಸನಕ್ಕೆ ಪ್ರೋತ್ಸಾಹ. ಸಾಮೂಹಿಕ ಪ್ರಯತ್ನದಿಂದ ವಾತಾವರಣ ಶುದ್ಧಿ. ಬೌದ್ಧಿಕ ಶ್ರಮಕ್ಕೆ ಯೋಗ್ಯ ಪ್ರತಿಫ‌ಲ.

ಮಕರ: ಹಿತಶತ್ರುಗಳ ಮಸಲತ್ತಿಗೆ ಸೋಲು. ಉದ್ಯಮಿಗಳಿಗೆ ಹಠಾತ್‌ ನಷ್ಟವಾಗುವ ಭೀತಿ. ಯಂತ್ರೋಪಕರಣ ಉದ್ಯಮಿಗಳಿಗೆ ಅನುಕೂಲದ ವಾತಾವರಣ. ಪ್ರಾಪ್ತಿ. ಮಕ್ಕಳ ಓದು ಸುಧಾರಣೆಯತ್ತ ಗಮನ. ಹಿರಿಯ ಬಂಧು ಹಠಾತ್‌ ಭೇಟಿ.

ಕುಂಭ: ಸಪ್ತಾಹದ ಮುಖ್ಯ ಕಾರ್ಯಗಳು ಮುಕ್ತಾಯ. ಉದ್ಯೋಗಸ್ಥರಿಗೆ ಹಿತಕರ ವಾತಾವರಣ. ಸರಕಾರಿ ನೌಕರರಿಗೆ ನಿಶ್ಚಿಂತೆಯ ಅನುಭವ. ದೇವತಾಕಾರ್ಯದಲ್ಲಿ ಭಾಗಿ. ಸಾಹಿತ್ಯ, ಲಲಿತ ಕಲೆಗಳಲ್ಲಿ ಆಸಕ್ತರಿಗೆ ಆನಂದ.

ಮೀನ: ಸಪ್ತಾಹದ ಸಿಂಹಾವಲೋಕನದಿಂದ ತೃಪ್ತಿ. ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ. ಇಲಾಖೆಗಳವರಿಂದ ಉತ್ತಮ ಸಹಕಾರ. ಆವಶ್ಯಕತೆ ಉಳ್ಳವರಿಗೆ ಸಹಾಯ ಮಾಡುವ ಅವಕಾಶ. ಸಂಸಾರದಲ್ಲಿ ಪ್ರೀತಿ, ಸಾಮರಸ್ಯ ವೃದ್ಧಿ.

Dailyhunt
Disclaimer: This content has not been generated, created or edited by Dailyhunt. Publisher: Udayavani