Dailyhunt
ದೇಹದ ಖಾಸಗಿ ಭಾಗದೊಳಗೆ ಬಚ್ಚಿಟ್ಟಿದ್ದ 5 ಕೋಟಿ ರೂ. ಮೌಲ್ಯದ ಚಿನ್ನ ಜಪ್ತಿ!

ದೇಹದ ಖಾಸಗಿ ಭಾಗದೊಳಗೆ ಬಚ್ಚಿಟ್ಟಿದ್ದ 5 ಕೋಟಿ ರೂ. ಮೌಲ್ಯದ ಚಿನ್ನ ಜಪ್ತಿ!

ಬೆಂಗಳೂರು: ದೇಹದ ಖಾಸಗಿ ಭಾಗದಲ್ಲಿ ಚಿನ್ನ ಇರಿಸಿಕೊಂಡು ಕಳ್ಳಸಾಗಣೆ ಮಾಡಲು ಯತ್ನಿಸುತ್ತಿದ್ದ ಐವರು ಆರೋಪಿಗಳನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ಅಧಿಕಾರಿಗಳು ಬಂಧಿಸಿದ್ದು, ಅವರಿಂದ ಸುಮಾರು 5 ಕೋಟಿ ರೂ.

ಮೌಲ್ಯದ 3.356 ಕೆ.ಜಿ ಚಿನ್ನದ ಗಟ್ಟಿಗಳನ್ನು ವಶಪಡಿಸಿಕೊಂಡಿದ್ದಾರೆ.

ಐವರು ಬಾಂಗ್ಲಾದೇಶದ ಪ್ರಜೆಗಳನನ್ನು ಬಂಧಿಸಲಾಗಿದೆ. ಆರೋಪಿಗಳು ಸ್ಥಳೀಯರ ಸಹಕಾರದೊಂದಿಗೆ ಚಿನ್ನ ಕಳ್ಳಸಾ ಗಣೆ ಮಾಡಲು ಮುಂದಾಗಿದ್ದರು ಎಂಬುದು ಗೊತ್ತಾಗಿದೆ. ಇತ್ತೀಚೆಗೆ ಕೆಐಎಎಲ್‌ನ ಟರ್ಮಿನಲ್‌ -2 ರ ಮೂಲಕ ಅಂತಾ ರಾಷ್ಟ್ರೀಯ ಮಟ್ಟದ ಕಳ್ಳಸಾಗಣೆಯ ಗ್ಯಾಂಗ್‌ ಚಿನ್ನವನ್ನು ಕಳ್ಳಸಾಗಣೆ ಮಾಡಲು ಮುಂದಾಗಿದೆ.

ಈ ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಡಿಆರ್‌ಐ ಅಧಿಕಾರಿಗಳು ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಅವರಿಂದ 5 ಕೋಟಿ ರೂ. ಮೌಲ್ಯದ ಚಿನ್ನದ ಗಟ್ಟಿ, ಕ್ಯಾಪ್ಸುಲ್‌ ಆಕಾರದ ಪ್ಯಾಕೆಟ್‌ಗಳಲ್ಲಿ ಪೇಸ್ಟ್‌ ರೂಪದಲ್ಲಿದ್ದ ಚಿನ್ನ ವನ್ನು ಜಪ್ತಿ ಮಾಡಿದ್ದಾರೆ. ಚಿನ್ನವನ್ನು ದೇಹದ ವಿವಿಧ ಅಂಗಗಳಲ್ಲಿ ಮರೆ ಮಾಚಿಕೊಂಡು ಅಧಿಕಾರಿಗಳ ಕಣ್ಣು ತಪ್ಪಿಸಿ ಚಿನ್ನವನ್ನು ವರ್ಗಾಯಿಸಲು ಮುಂದಾಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani