ದೆಹಲಿ : ದೆಹಲಿಯದಲ್ಲಿ ಕೋವಿಡ್ ಸೋಂಕು ಹಿನ್ನೆಲೆಯಲ್ಲಿ ಕಳೆದ 24 ಗಂಟೆಗಳಲ್ಲಿ 347 ಮಂದಿ ಸಾವನ್ನಪ್ಪಿದ್ದಾರೆ. ಅಲ್ಲದೆ 24,103 ಜನರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ
ಈಗಾಗಲೇ ದೆಹಲಿ ರಾಜ್ಯದಲ್ಲಿ ಲಕ್ ಡೌನ್ ಘೋಷಣೆ ಮಾಡಿ, ಒಂದು ವಾರಗಳೇ ಕಳೆದಿವೆ. ಜನರ ಗುಂಪುಗೂಡುವಿಕೆಯನ್ನು ನಿಯಂತ್ರಿಸಿದರೂ ಕೂಡ ಇಷ್ಟೆಲ್ಲ ಕೋವಿಡ್ ಸೋಂಕು ಪತ್ತೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಕಳೆದ 24 ಗಂಟೆ ಅಂದ್ರೆ ಶನಿವಾರ ಸಂಜೆ ಕೊನೆಯಾಗುವವರೆಗೆ 74,702 ಮಂದಿಯನ್ನು ಪರೀಕ್ಷೆ ಮಾಡಲಾಗಿದ್ದು, ಅವರಲ್ಲಿ ಶೇ 32.27ರಷ್ಟು ಜನರಿಗೆ ಕೊವಿಡ್ ಸೋಂಕು ದೃಢಪಟ್ಡಿದೆ.
ಪ್ರಸ್ತುತ ದೆಹಲಿಯಲ್ಲಿ 93,080 ಸಕ್ರಿಯ ಪ್ರಕರಣಗಳಿವೆ. ಕಳೆದ ಮಾರ್ಚ್‌ನಿಂದ ಇದುವರೆಗೆ ಸೋಂಕಿಗೆ ಒಳಗಾದವರ ಸಂಖ್ಯೆ 10 ಲಕ್ಷದ ಗಡಿ ದಾಟಿದ್ದು, ಶನಿವಾರ 10,04,782 ತಲುಪಿದೆ.

