ಭಾರತದಲ್ಲಿ ಡಿಜಿಟಲ್ ಪಾಲ್ಗೊಳ್ಳುವಿಕೆಯಲ್ಲಿ ಮಹಿಳೆಯರ ಪ್ರಮಾಣಕಳೆದ ನಾಲ್ಕು ವರ್ಷಗಳಲ್ಲಿ ಗಮನಾರ್ಹ ಏರಿಕೆಯಾಗಿದೆ. ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆ (NFHS-6) ದತ್ತಾಂಶದ ಪ್ರಕಾರ, ಜೀವನದಲ್ಲಿ ಕನಿಷ್ಠ ಒಮ್ಮೆಯಾದರೂ ಇಂಟರ್‌ನೆಟ್ ಬಳಸಿರುವ 15- 49 ವರ್ಷದ ಮಹಿಳೆಯರ ಪ್ರಮಾಣ 2019 -21ರ ಅವ ಧಿಯಲ್ಲಿ ಶೇ.
33.3ರಷ್ಟಿದ್ದರೆ, 2023 -24ರಲ್ಲಿ ಶೇ. 64.3ಕ್ಕೆ ಏರಿಕೆಯಾಗಿದೆ. ಅಂದರೆ ಮಹಿಳೆಯರ ಇಂಟರ್‌ನೆಟ್ ಬಳಕೆ ಸುಮಾರು ದ್ವಿಗುಣವಾಗಿದೆ. 2019-21ರ ವೇಳೆ ಶೇ.54.0ರಷ್ಟು ಮಹಿಳೆಯರು ಮೊಬೈಲ್ ಹೊಂದಿದ್ದರೆ, 2023-24 ಅಂಕಿ ಅಂಶದಲ್ಲಿ ಅದು ಶೇ. 63.6ಕ್ಕೆ ಏರಿಕೆಯಾಗಿದೆ.
ಕಳೆದ ಮೂರು ವರ್ಷಗಳ ಅಂಕಿ ನೋಟ
NFHS- ಸುತ್ತು ಸಮೀಕ್ಷೆ ಅವಧಿ ಇಂಟರ್‌ನೆಟ್ ಬಳಸಿರುವ ಮಹಿಳೆಯರು
NFHS-4 2015- 16 ಮಾಹಿತಿ ಸಂಗ್ರಹಿಸಿರಲಿಲ್ಲ
NFHS- 5 2019 -21 ಶೇ. 33.3
NFHS- 6 2023- 24 ಶೇ. 64.3
ಗ್ರಾಮೀಣ -ನಗರ ನೋಟ
ಮಹಿಳೆಯರ ಡಿಜಿಟಲ್ ಪಾಲ್ಗೊಳ್ಳುವಿಕೆಯ ಅಂಕಿ-ಅಂಶಗಳು ಆಶಾದಾಯಕ ಚಿತ್ರಣ ನೀಡಿದರೂ ಡಿಜಿಟಲ್ ಅಂತರವಿನ್ನೂ ಕಡಿಮೆಯಾಗಿಲ್ಲ. ನಗರ ಪ್ರದೇಶದ ಮಹಿಳೆಯರು, ಹೆಚ್ಚಿನ ಶಿಕ್ಷಣ ಪಡೆದವರು ಮತ್ತು ಉತ್ತಮ ಆರ್ಥಿಕ ಹಿನ್ನೆಲೆಯ ಕುಟುಂಬಗಳ ಮಹಿಳೆಯರು ಡಿಜಿಟಲ್ ಸೌಲಭ್ಯಗಳನ್ನು ಹೆಚ್ಚು ಬಳಸುತ್ತಿದ್ದಾರೆ. ಗ್ರಾಮೀಣ ಪ್ರದೇಶಗಳು, ಕಡಿಮೆ ಆದಾಯದ ಕುಟುಂಬಗಳು ಹಾಗೂ ಕಡಿಮೆ ಶಿಕ್ಷಣ ಹೊಂದಿರುವ ಮಹಿಳೆಯರಲ್ಲಿ ಇಂಟರ್‌ನೆಟ್ ಬಳಕೆ ಇನ್ನೂ ಹಿಂದುಳಿದಿದೆ.
ಗ್ರಾಮೀಣ ಮತ್ತು ನಗರ
ವಿಭಾಗ NFHS-- 5 (2019- 21) NFHS-- 6 (2019- 21ಏರಿಕೆ (ಶೇ.)
ಗ್ರಾಮೀಣ ಮಹಿಳೆಯರು 27.0% 58.0% 31
ನಗರ ಮಹಿಳೆಯರು 51.8% 80.7% 28.9
ಇನ್ನು ಈ ಸೂಚ್ಯಂಕದಲ್ಲಿ ತ್ರಿಪುರಾ ಅತ್ಯಂತ ಕಡಿಮೆ ಪ್ರಮಾಣವನ್ನು ದಾಖಲಿಸಿದ್ದು, ಅಲ್ಲಿ ಮಹಿಳೆಯರ ಇಂಟರ್‌ನೆಟ್ ಬಳಕೆ ಶೇ. 48.8ರಷ್ಟಾಗಿದೆ. ಒಡಿಶಾ (51.8%), ಅಸ್ಸಾಂ (53.5%) ಮತ್ತು ಛತ್ತೀಸ್‌ಗಢ (54.4%) ರಾಜ್ಯಗಳಿವೆ. ಇದೇ ವೇಳೆ ಗೋವಾದಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಮಹಿಳೆಯರು ಇಂಟರ್‌ನೆಟ್ ಬಳಸುತ್ತಿದ್ದಾರೆ.
ಟಾಪ್ 5 ರಾಜ್ಯಗಳು
ಸ್ಥಾನ ರಾಜ್ಯ/ಕೇಂ.ಪ್ರದೇಶ ನೆಟ್ ಬಳಕೆ (ಶೇ.)
1 ಗೋವಾ 94.0
2 ಸಿಕ್ಕಿಂ 90.3
3 ಕೇರಳ 87.3
4 ಚಂಡೀಗಢ 83.9
5 ಮಿಜೋರಾಂ 82.5

