ಬೆಂಗಳೂರು: ಸ್ಮಾರ್ಟ್ ಹೋಮ್ ತಂತ್ರಜ್ಞಾನದಲ್ಲಿ ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡಿರುವ 'ಡ್ರೀಮಿ ಟೆಕ್ನಾಲಜಿ' ಕಂಪನಿ, ತನ್ನ ಹೊಸ 'ಡ್ರೀಮಿ X60 ಅಲ್ಟ್ರಾ ಕಂಪ್ಲೀಟ್ ರೋಬೋಟ್ ವ್ಯಾಕ್ಯೂಮ್' ಅನ್ನು ಭಾರತದಲ್ಲಿ ಇಂದು (ಸೆ.24ರ ಗುರುವಾರ) ಬಿಡುಗಡೆ ಮಾಡಿದೆ.
ಇದು ಕಂಪನಿಯ ಅತ್ಯಂತ ತೆಳುವಾದ ಮತ್ತು ಅತಿ ಹೆಚ್ಚು ಧೂಳು ಎಳೆಯುವ ಸಾಮರ್ಥ್ಯ (ಸಕ್ಷನ್ ಪವರ್) ಹೊಂದಿರುವ ಯಂತ್ರವಾಗಿದೆ. ಈ ರೋಬೋಟ್ ತನ್ನ ಸುತ್ತಮುತ್ತಲಿನ ಜಾಗವನ್ನು ಅರ್ಥಮಾಡಿಕೊಂಡು, ಮನುಷ್ಯರು ಸ್ವಚ್ಛಗೊಳಿಸಲು ಕಷ್ಟಪಡುವ ಮೂಲೆಗಳಿಗೂ ತೆರಳಿ, ಅಡೆತಡೆಗಳನ್ನು ದಾಟಿ ಮನೆಯನ್ನು ಅತ್ಯಂತ ಸುಲಭವಾಗಿ ಮತ್ತು ಸಂಪೂರ್ಣವಾಗಿ ಸ್ವಚ್ಛಗೊಳಿಸುತ್ತದೆ.
ಈ ಹೊಸ ರೋಬೋಟ್ ವ್ಯಾಕ್ಯೂಮ್ ಬೆಲೆ 1,34,999 ರೂಪಾಯಿಗಳಾಗಿದ್ದು, ಇದು ಸೆಪ್ಟೆಂಬರ್ 27 ರಿಂದ ಅಮೆಜಾನ್‌ನಲ್ಲಿ ಖರೀದಿಗೆ ಸಿಗಲಿದೆ. ಹಾಗೆಯೇ, ಸೆಪ್ಟೆಂಬರ್ 22 ರಿಂದಲೇ ಕಂಪನಿಯ ಅಧಿಕೃತ ವೆಬ್‌ಸೈಟ್‌ನಲ್ಲಿ ಇದು ಲಭ್ಯವಿದ್ದು, ಮುಂದಿನ ದಿನಗಳಲ್ಲಿ ಕ್ರೋಮಾ ಮತ್ತು ಆಯ್ದ ರಿಟೇಲ್ ಅಂಗಡಿಗಳಲ್ಲೂ ಗ್ರಾಹಕರು ಇದನ್ನು ಖರೀದಿಸಬಹುದು.
ಈ ಕುರಿತು ಮಾಹಿತಿ ನೀಡಿದ ಡ್ರೀಮಿ ಟೆಕ್ನಾಲಜಿಯ ವ್ಯವಸ್ಥಾಪಕ ನಿರ್ದೇಶಕ ಮನು ಶರ್ಮಾ, ʼಸ್ಮಾರ್ಟ್ ಹೋಮ್ ತಂತ್ರಜ್ಞಾನ ಈಗ ಹೊಸ ಹಂತ ತಲುಪಿದೆ. ಯಂತ್ರಗಳು ಕೇವಲ ಕೆಲಸ ಮಾಡುವುದಷ್ಟೇ ಅಲ್ಲ, ಅವು ಮನೆಯ ಪರಿಸರವನ್ನು ಎಷ್ಟು ಬುದ್ಧಿವಂತಿಕೆಯಿಂದ ಅರ್ಥಮಾಡಿಕೊಂಡು ಕೆಲಸ ಮಾಡುತ್ತವೆ ಎಂಬುದು ಮುಖ್ಯವಾಗಿದೆ. ಎಐ ತಂತ್ರಜ್ಞಾನ ಹೊಂದಿರುವ ಈ ರೋಬೋಟ್ ವ್ಯಾಕ್ಯೂಮ್ ಮನೆ ಸ್ವಚ್ಛಗೊಳಿಸುವ ಕೆಲಸವನ್ನು ಸ್ವಯಂಚಾಲಿತ ಮಾಡುವುದರ ಜೊತೆಗೆ, ಗ್ರಾಹಕರ ದೈನಂದಿನ ಜೀವನವನ್ನು ಇನ್ನಷ್ಟು ಸರಳ ಮತ್ತು ಸ್ಮಾರ್ಟ್ ಮಾಡಲಿದೆʼ ಎಂದು ತಿಳಿಸಿದ್ದಾರೆ.

