Dailyhunt Logo
  • Light mode
    Follow system
    Dark mode
    • Play Story
    • App Story
ದುಗ್ಗಲಡ್ಕ: ವಿದ್ಯಾರ್ಥಿಗೆ ಕಚ್ಚಿದ ಹುಚ್ಚುನಾಯಿ ದಾಳಿ

ದುಗ್ಗಲಡ್ಕ: ವಿದ್ಯಾರ್ಥಿಗೆ ಕಚ್ಚಿದ ಹುಚ್ಚುನಾಯಿ ದಾಳಿ

ಸುಳ್ಯ: ದುಗ್ಗಲಡ್ಕ ಪೇಟೆಯಲ್ಲಿ ಹುಚ್ಚುನಾಯಿಯೊಂದು ಸುತ್ತಾಡುತ್ತಿದ್ದು ಪ್ರೌಢಶಾಲಾ ವಿದ್ಯಾರ್ಥಿಯೊಬ್ಬನ ಮೇಲೆ ದಾಳಿ ನಡೆಸಿ ಕಚ್ಚಿ ಗಾಯಗೊಳಿಸಿದ ಘಟನೆ ಜು.4ರ ಶನಿವಾರ ಬೆಳಗ್ಗೆ ಸಂಭವಿಸಿದೆ.

ಶಾಲೆಗೆ ತೆರಳುತ್ತಿದ್ದ ವೇಳೆ ಭಜನ ಮಂದಿರದ ಸಮೀಪ ಆತನ ಕಾಲಿಗೆ ನಾಯಿ ಕಚ್ಚಿದೆ ಎನ್ನಲಾಗಿದೆ.

ಗಾಯಗೊಂಡ ವಿದ್ಯಾರ್ಥಿ ಶಾಲೆಗೆ ತಲುಪಿ ಘಟನೆಯ ಬಗ್ಗೆ ಅಧ್ಯಾಪಕರಿಗೆ ಮಾಹಿತಿ ನೀಡಿದ್ದು ಬಳಿಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿದೆ.

ಇತ್ತೀಚಿನ ದಿನಗಳಲ್ಲಿ ದುಗ್ಗಲಡ್ಕ ಪೇಟೆ ಹಾಗೂ ಸುತ್ತಮುತ್ತ ಬೀದಿ ನಾಯಿಗಳು ಮತ್ತು ಹುಚ್ಚುನಾಯಿಗಳ ಹಾವಳಿ ಹೆಚ್ಚಾಗಿದ್ದು ಸಾರ್ವಜನಿಕರಲ್ಲಿ ಆತಂಕ ಮನೆಮಾಡಿದೆ. ಶಾಲಾ ಮಕ್ಕಳು ಹಾಗೂ ಪಾದಚಾರಿಗಳ ಸುರಕ್ಷತೆಯ ದೃಷ್ಟಿಯಿಂದ ಸಂಬಂಧಪಟ್ಟ ಸ್ಥಳೀಯ ಆಡಳಿತ ತಕ್ಷಣ ಕ್ರಮ ಕೈಗೊಂಡು ಬೀದಿ ನಾಯಿಗಳ ಹಾವಳಿ ನಿಯಂತ್ರಿಸಲು ಅಗತ್ಯ ಕ್ರಮ ಜರಗಿಸಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

Dailyhunt
Disclaimer: This content has not been generated, created or edited by Dailyhunt. Publisher: Udayavani