ಚಿಂತಾಮಣಿ : ದ್ವಿಚಕ್ರವಾಹನಕ್ಕೆ ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರವಾಹನ ಸವಾರ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ಚಿಂತಾಮಣಿ ತಾಲೂಕಿನ ಪೆರಮಾಚನಹಳ್ಳಿ ಕ್ರಾಸ್ ಬಳಿ ಸಂಭವಿಸಿದೆ.
ಮೃತಪಟ್ಟ ವ್ಯಕ್ತಿ ಚಿಂತಾಮಣಿ ತಾಲೂಕಿನ ದೊಡ್ಡಹಳ್ಳಿ ಗ್ರಾಮದ ಐವತ್ತು ವರ್ಷದ ನಾಗರಾಜು ಎಂಬುವರಾಗಿದ್ದು, ಮೃತರು ಅಪಾರ ಬಂಧುಬಳಗದವರನ್ನು ಅಗಲಿದ್ದಾರೆ.
ಮೃತ ನಾಗರಾಜು ತಮ್ಮಗ್ರಾಮಕ್ಕೆ ತೆರಳಲು ಪೆರಮಾಚನಹಳ್ಳಿ ಬಳಿ ಹೋಗುತ್ತಿದ್ದ ವೇಳೆ ಬೆಂಗಳೂರು ಕಡೆಯಿಂದ ಚಿಂತಾಮಣಿ ಗೆ ಬರುತ್ತಿದ್ದ ಕಾರು ಅತಿ ವೇಗ ಮತ್ತು ಅಜಾಗೃತೆಯಿಂದ ಬಂದು ಢಿಕ್ಕಿ ಹೊಡೆದ ಪರಿಣಾಮ ದ್ವಿಚಕ್ರ ವಾಹನ ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾರೆ.
ಈ ಘಟನೆ ಸಂಭವಿಸಿದ ಕೂಡಲೇ ಕಾರು ಚಾಲಕ ಅಲ್ಲಿಂದ ಓಡಿಹೋಗಿ ಚಿಂತಾಮಣಿ ಗ್ರಾಮಾಂತರ ಠಾಣೆ ಸೇರಿಕೊಂಡಿದ್ದಾರೆ.
ಖ್ಯಾತ ಮಲಯಾಳಂ ನಟ ರಮೇಶ್ ವಲಿಯಸಲಾ ಆತ್ಮಹತ್ಯೆ
ವಿಷಯ ತಿಳಿದ ಕೂಡಲೆ ಸ್ಥಳಕ್ಕೆ ಭೇಟಿ ನೀಡಿದ ಚಿಂತಾಮಣಿ ಗ್ರಾಮಾಂತರ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

