Dailyhunt Logo
  • Light mode
    Follow system
    Dark mode
    • Play Story
    • App Story
ಎಚ್‌1ಬಿ ರಿಯಾಯಿತಿ ಅವಧಿ ರದ್ದತಿಗೆ ಅಮೆರಿಕ ಚಿಂತನೆ!

ಎಚ್‌1ಬಿ ರಿಯಾಯಿತಿ ಅವಧಿ ರದ್ದತಿಗೆ ಅಮೆರಿಕ ಚಿಂತನೆ!

ವಾಷಿಂಗ್ಟನ್‌: ಅಮೆರಿಕದಲ್ಲಿ ಎಚ್‌-1ಬಿ ವೀಸಾ ಹೊಂದಿರುವ ಉದ್ಯೋಗಿಗಳಿಗೆ ಲಭ್ಯವಿರುವ 60 ದಿನಗಳ ರಿಯಾಯಿತಿ ಅವಧಿಯನ್ನು ಸಂಪೂರ್ಣವಾಗಿ ರದ್ದುಪಡಿಸಲು ಡೊನಾಲ್ಡ್ ಟ್ರಂಪ್‌ ಆಡಳಿತ ಮುಂದಾಗಿದ್ದು, ಈ ಸಂಬಂಧದ ಪ್ರಸ್ತಾವನೆ ಶ್ವೇತಭವನದ ಆಡಳಿತ ಮತ್ತು ನಿಯಂತ್ರಣ ಕಚೇರಿಯು ಪ್ರಮುಖ ಪರಿಶೀಲನೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ.

ಪ್ರಸ್ತುತ , ಉದ್ಯೋಗ ಕಳೆದುಕೊಂಡ ಎಚ್‌-1ಬಿ, ಎಲ್‌-1, ಇತರೆ ನುರಿತ ವೃತ್ತಿಪರರು ಅಮೆರಿಕದಲ್ಲಿ ಹೊಸ ಉದ್ಯೋಗ ಹುಡುಕಿಕೊಳ್ಳಲು, ವೀಸಾ ಸ್ಥಿತಿಯನ್ನು ಬದಲಾಯಿಸಲು 60 ದಿನಗಳ ಕಾಲಾವಕಾಶ ಪಡೆಯುತ್ತಿದ್ದರು. ಹೊಸ ಪ್ರಸ್ತಾವನೆಯಲ್ಲಿ, ಉದ್ಯೋಗ ಕಳೆದುಕೊಂಡ ತಕ್ಷಣವೇ ದೇಶ ತೊರೆಯಬೇಕಾದ ಪರಿಸ್ಥಿತಿ ಎದುರಾಗಲಿದ್ದು, ಇದು ವಿಶೇಷವಾಗಿ ಲಕ್ಷಾಂತರ ಭಾರತೀಯರ ಮೇಲೆ ಗಂಭೀರ ಪರಿಣಾಮ ಬೀರಲಿದೆ.

ಅಮೆರಿಕದ ಟೆಕ್‌ ವಲಯದಲ್ಲಿ ಭಾರತೀಯರೇ ಹೆಚ್ಚಿದ್ದಾರೆ. ಈ ನಿರ್ಧಾರದಿಂದ ಉದ್ಯೋಗಿಗಳು, ಅವರ ಕುಟುಂಬಗಳ ವಸತಿ, ಮಕ್ಕಳ ಶಿಕ್ಷಣ ಮತ್ತು ವೀಸಾ ಮುಂದುವರಿಕೆಗೆ ಸಂಬಂಧಿಸಿದಂತೆ ದೊಡ್ಡ ಮಟ್ಟದ ಅನಿಶ್ಚಿತತೆ ಸೃಷ್ಟಿಯಾಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani