Dailyhunt Logo
  • Light mode
    Follow system
    Dark mode
    • Play Story
    • App Story
ಈದ್‌ ಮಿಲಾದ್‌ ಮೆರವಣಿಗೆ ವೇಳೆ ಗಲಾಟೆ: 2 ಸಮುದಾಯಗಳ 6 ಆರೋಪಿಗಳ ಬಂಧನ

ಈದ್‌ ಮಿಲಾದ್‌ ಮೆರವಣಿಗೆ ವೇಳೆ ಗಲಾಟೆ: 2 ಸಮುದಾಯಗಳ 6 ಆರೋಪಿಗಳ ಬಂಧನ

ಬೆಂಗಳೂರು: ಈದ್‌ ಮಿಲಾದ ಹಬ್ಬದ ಮೆರವಣಿಗೆ ವೇಳೆ 2 ಗುಂಪುಗಳ ನಡುವೆ ನಡೆದ ಗಲಾಟೆಗೆ ಸಂಬಂಧಿಸಿದಂತೆ ದೂರು-ಪ್ರತಿದೂರು ದಾಖಲಾಗಿದ್ದು, ಹಿಂದೂ ಕಾರ್ಯಕರ್ತ ಪುನೀತ್‌ ಕೆರೆಹಳ್ಳಿ ಸೇರಿ 6 ಮಂದಿಯನ್ನು ಬಸವನಗುಡಿ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಇದೇ ವೇಳೆ ಇಬ್ಬರು ಅಪ್ರಾಪ್ತರನ್ನು ವಶಕ್ಕೆ ಪಡೆಯಲಾಗಿದೆ.

ಬಸವನಗುಡಿ ಕಾನೂನು, ಸುವ್ಯವಸ್ಥೆ ಹಾಗೂ ಸಂಚಾರ ಠಾಣೆಯಲ್ಲಿ ಪ್ರತ್ಯೇಕ 3 ಪ್ರಕರಣ ದಾಖಲಾಗಿದೆ. ಮೊದಲ ಪ್ರಕರಣದಲ್ಲಿ ಅಬ್ದುಲ್‌ ರಜಾಕ್‌ ಎಂಬುವರು ನೀಡಿದ ದೂರಿನ ಮೇರೆಗೆ ಪುನೀತ್‌ ಕೆರೆಹಳ್ಳಿ, ರಾಮನಗರದ ಹಾಗಲಹಳ್ಳಿ ನಿವಾಸಿ ಗೋಪಿಗೌಡ, ವಿನೋದ್‌ ನಾಯಕ್‌ ಎಂಬುವರನ್ನು ಬಂಧಿಸಲಾಗಿದೆ.

2ನೇ ಪ್ರಕರಣದಲ್ಲಿ ಪುನೀತ್‌ ಕೆರೆಹಳ್ಳಿ ನೀಡಿದ ದೂರಿನ ಮೇರೆಗೆ ಬನಶಂಕರಿ ನಿವಾಸಿ ಅಕ್ಮಲ್‌ ಪಾಷಾ, ಅಬೂಬಕರ್‌ ಸಿದ್ದಿಕ್‌, ಸೈಯದ್‌ ಅನಸ್‌ ಎಂಬುವರನ್ನು ಬಧಿಸಲಾಗಿದೆ. ಇನ್ನು ಘಟನೆ ಕುರಿತು ರಸ್ತೆ ತಡೆದು ಪ್ರತಿಭಟನೆ ನಡೆಸಿದ ಆರೋಪದಡಿ ಬನಶಂಕರಿ ಸಂಚಾರ ಠಾಣೆಯಲ್ಲಿ ಪುನೀತ್‌ ಕೆರೆಹಳ್ಳಿ ವಿರುದ್ಧ ಪ್ರಕರಣ ದಾಖಲಾಗಿದೆ.

ಬಸವನಗುಡಿ ಕೆ.ಆರ್‌.ರಸ್ತೆಯಲ್ಲಿರುವ ಗರಡಿ ಅಪಾರ್ಟ್‌ಮೆಂಟ್‌ ಬಳಿ ಎರಡು ಗುಂಪುಗಳು ಧಾರ್ಮಿಕ ಭಾವುಟಗಳನ್ನು ಹಿಡಿದುಕೊಂಡು ಘೋಷಣೆ ಕೂಗುತ್ತಿದ್ದ ವೇಳೆ ನಡೆದ ಗಲಾಟೆ ವಿಕೋಪಕ್ಕೆ ತಿರುಗಿ ಪರಸ್ಪರರು ಬಡಿದಾಡಿಕೊಂಡಿದ್ದಾರೆ. ಘಟನೆ ಹಿನ್ನೆಲೆ: ಈದ್‌ ಮಿಲಾದ್‌ ಹಬ್ಬದ ನಿಮಿತ್ತ ಬುಧವಾರ ಮಧ್ಯಾಹ್ನ 3.30ರ ಸುಮಾರಿಗೆ ಬಸವನಗುಡಿಯ ಕೆ.ಆರ್‌.ರಸ್ತೆ ಕಡೆಗೆ ಬನಶಂಕರಿಯಿಂದ ಮೆರವಣಿಗೆ ಮಾಡಿಕೊಂಡು 1 ಗುಂಪು ಬಂದಿದೆ. ಈ ವೇಳೆ ರಾಷ್ಟ್ರ ರಕ್ಷಣಾ ಪಡೆಯ ಪುನೀತ್‌ ಕೆರೆಹಳ್ಳಿ, ಕೆಲವರು ಶ್ರೀರಾಮನ ಧ್ವಜ ಹಿಡಿದು ಘೋಷಣೆ ಕೂಗುತ್ತಾ ಬಂದಿದ್ದಾರೆ. ಎರಡು ಗುಂಪಿನ ಕಡೆವರ ನಡುವೆ ಘೋಷಣೆ ವಿಚಾರವಾಗಿ ಗಲಾಟೆ ನಡೆದಿದೆ. ಗಲಾಟೆ ವೇಳೆ ಮುರುಳಿ ಎಂಬಾತ ಗಾಯಗೊಂಡಿದ್ದಾನೆ. ಎಚ್ಚೆತ್ತ ಪೊಲೀಸರು 2ಗುಂಪನ್ನು ಚದುರಿಸಿದ್ದಾರೆ. ಈ ಕುರಿತು ತಡರಾತ್ರಿ ಎರಡು ಕಡೆಯವರು ಪರಸ್ಪರರ ದೂರು-ಪ್ರತಿ ದೂರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani