Dailyhunt Logo
  • Light mode
    Follow system
    Dark mode
    • Play Story
    • App Story
ಎಲೆಕ್ಟ್ರಿಕ್‌ ಭಾರತ! ಕಳೆದ 5 ವರ್ಷಗಳಲ್ಲಿ ಇ- ವಾಹನಗಳ ನೋಂದಣಿಯಲ್ಲಿ ಏರಿಕೆ

ಎಲೆಕ್ಟ್ರಿಕ್‌ ಭಾರತ! ಕಳೆದ 5 ವರ್ಷಗಳಲ್ಲಿ ಇ- ವಾಹನಗಳ ನೋಂದಣಿಯಲ್ಲಿ ಏರಿಕೆ

ಭಾರತದಲ್ಲಿ ಎಲೆಕ್ಟ್ರಿಕ್‌ ವಾಹನಗಳ ನೋಂದಣಿಯಲ್ಲಿ ಭಾರೀ ಏರಿಕೆ ಆಗಿದೆ. ಆದರೆ, ಮೂಲಸೌಕರ್ಯ ಸನ್ನದ್ಧತೆಯಲ್ಲಿ ವಿವಿಧ ರಾಜ್ಯಗಳ ನಡುವೆ ಗಮನಾರ್ಹ ವ್ಯತ್ಯಾಸಗಳು ಕಂಡುಬಂದಿವೆ.

ಕಳೆದ 5 ವರ್ಷಗಳಲ್ಲಿ ಗಣನೀಯ ಬದಲಾವಣೆ

ಭಾರತದಲ್ಲಿ 2018ರಲ್ಲಿ ಕೇವಲ 1.3 ಲಕ್ಷವಿದ್ದ ಇವಿ ನೋಂದಣಿ, 2025ರ ವೇಳೆಗೆ 24.1 ಲಕ್ಷಕ್ಕೆ ತಲುಪಿದ್ದು, 18 ಪಟ್ಟು ಏರಿಕೆ ಕಂಡಿದೆ.

2018ರಲ್ಲಿ ಒಟ್ಟು ವಾಹನ ಮಾರಾಟದಲ್ಲಿ ಕೇವಲ 0.5% ರಷ್ಟಿದ್ದ ಇವಿ ಪಾಲು, 2025-26ರ ವೇಳೆಗೆ 8.25% ಕ್ಕೆ ಏರಿಕೆಯಾಗಿದೆ. ಪ್ರಸ್ತುತ ಭಾರತದ ರಸ್ತೆಗಳಲ್ಲಿ 8.7 ದಶಲಕ್ಷಕ್ಕೂ ಹೆಚ್ಚು ಎಲೆಕ್ಟ್ರಿಕ್‌ ವಾಹನಗಳಿವೆ.

ಸಾರಿಗೆ ವ್ಯವಸ್ಥೆಯಲ್ಲಿ ಇವಿಗಳ ಬಳಕೆಯಲ್ಲಿ ದಿಲ್ಲಿ (77 ಅಂಕ) ಮೊದಲ ಸ್ಥಾನದಲ್ಲಿದ್ದರೆ, ನಾಗಾಲ್ಯಾಂಡ್‌ (4 ಅಂಕ) ಕೊನೆಯ ಸ್ಥಾನದಲ್ಲಿದೆ. ಚಾರ್ಜಿಂಗ್‌ ಮೂಲಸೌಕರ್ಯವು 2022ರ ಡಿಸೆಂಬರ್‌ನಲ್ಲಿ ಇದ್ದ 5,151 ಕೇಂದ್ರಗಳಿಂದ 2025ರ ಜೂನ್‌ ಹೊತ್ತಿಗೆ 29,000 ಕ್ಕೆ ಹೆಚ್ಚಳವಾಗಿದೆ. ಇವಿ ಬೆಳವಣಿಗೆಯು ರಾಷ್ಟ್ರಮಟ್ಟದಲ್ಲಿ ಆಶಾದಾಯಕವಾಗಿದ್ದರೂ, ವಿವಿಧ ರಾಜ್ಯಗಳ ನಡುವೆ ಸಮರ್ಪಕ ಸಹಕಾರ ಇಲ್ಲವಾಗಿದೆ.

ಕರ್ನಾಟಕದ ಸ್ಥಿತಿಗತಿ ಹೇಗಿದೆ?

"ಇಂಡಿಯಾ ಎಲೆಕ್ಟ್ರಿಕ್‌ ಮೊಬಿಲಿಟಿ ಇಂಡೆಕ್ಸ್‌ (ಐಇಎಂಐ) 2025'ರ ಪ್ರಕಾರ, ಕರ್ನಾಟಕವು ಚಾರ್ಜಿಂಗ್‌ ಮೂಲಸೌಕರ್ಯ ಸನ್ನದ್ಧತೆಯಲ್ಲಿ 97ಗಳೊಂದಿಗೆ ದೇಶದಲ್ಲೇ ಅಗ್ರಸ್ಥಾನದಲ್ಲಿದೆ. ಆದರೆ, ಸಾರಿಗೆ ವಾಹನಗಳ ಬಳಕೆಯಲ್ಲಿ ರಾಜ್ಯವು ಕೇವಲ 55 ಅಂಕಗಳನ್ನು ಪಡೆದಿದೆ. ಇದರರ್ಥ ಕರ್ನಾಟಕವು ಎಲೆಕ್ಟ್ರಿಕ್‌ ವಾಹನಗಳಿಗೆ ಅಗತ್ಯವಾದ ಅತ್ಯುತ್ತಮ ಮೂಲಸೌಕರ್ಯಗಳನ್ನು ಹೊಂದಿದ್ದರೂ, ವಾಹನಗಳ ಖರೀದಿಯ ಪ್ರಮಾಣವು ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಕಂಡಿಲ್ಲ.

ಮಾರಾಟ ಹೆಚ್ಚಿಸಲು ಕೈಗೊಳಬಹುದಾದ ಕ್ರಮಗಳು

1)FAME ಯೋಜನೆ, PM E-DRIVE ಮತ್ತು ಬ್ಯಾಟರಿ ಸೆಲ್‌ಗ‌ಳಿಗಾಗಿರುವ PLI (ಉತ್ಪಾದನ ಆಧಾರಿತ ಪ್ರೋತ್ಸಾಹಕ) ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವುದು.

2)ಎಲ್ಲ ರಾಜ್ಯಗಳಲ್ಲಿ ವಾಹನಗಳ ಸಂಖ್ಯೆಗೆ ಅನುಗುಣವಾಗಿ ಸಾರ್ವಜನಿಕ ಚಾರ್ಜಿಂಗ್‌ ಸ್ಟೇಷನ್‌ಗಳನ್ನು ತ್ವರಿತವಾಗಿ ಸ್ಥಾಪಿಸುವುದು.

3)ಪ್ರಸ್ತುತ 28 ರಾಜ್ಯ ಹಾಗೂ 8 ಕೇಂದ್ರಾಡಳಿತ ಪ್ರದೇಶಗಳ ಪೈಕಿ ಕೇವಲ 26ರಲ್ಲಿ ಮಾತ್ರ ಸಕ್ರಿಯ ಇವಿ ನೀತಿಗಳಿವೆ. ಇದನ್ನು ಎಲ್ಲ ರಾಜ್ಯಗಳಿಗೂ ವಿಸ್ತರಿಸಬೇಕು.

4)ಇವಿ ಬಳಕೆಯಿಂದ ಆಗುವ ಆರ್ಥಿಕ/ಪರಿಸರ ಲಾಭಗಳ ಬಗ್ಗೆ ಜಾಗೃತಿ ಮೂಡಿಸುವುದು ಮತ್ತು ಗ್ರಾಹಕರಿಗೆ ತೆರಿಗೆ ವಿನಾಯಿತಿಗಳನ್ನು ನೀಡುವುದು.

Dailyhunt
Disclaimer: This content has not been generated, created or edited by Dailyhunt. Publisher: Udayavani