Dailyhunt
ಎನ್‌ಸಿಇಆರ್‌ಟಿಗೆ ಈಗ ಡೀಮ್ಡ್‌ ವಿವಿ ಪಟ್ಟ: ಪದವಿ ನೀಡುವ ಅಧಿಕಾರ ಲಭ್ಯ

ಎನ್‌ಸಿಇಆರ್‌ಟಿಗೆ ಈಗ ಡೀಮ್ಡ್‌ ವಿವಿ ಪಟ್ಟ: ಪದವಿ ನೀಡುವ ಅಧಿಕಾರ ಲಭ್ಯ

ವದೆಹಲಿ: ಎನ್‌ಸಿಇಆರ್‌ಟಿ (ರಾಷ್ಟ್ರೀಯ ಶೈಕ್ಷಣಿಕ ಸಂಶೋಧನಾ ಮತ್ತು ತರಬೇತಿ ಸಂಸ್ಥೆ)ಯನ್ನು ಕೇಂದ್ರ ಸರ್ಕಾರ ಡೀಮ್ಡ್‌ ವಿಶ್ವವಿದ್ಯಾಲಯ ಎಂದು ಅಧಿಕೃತವಾಗಿ ಘೋಷಿಸಿದ್ದು, ಇದು ಎನ್‌ಸಿಆರ್‌ಟಿಗೆ ಶೈಕ್ಷಣಿಕ ಪದವಿಗಳನ್ನು ನೀಡುವ ಅಧಿಕಾರವನ್ನು ಕೊಡುತ್ತದೆ.

ವಿಶ್ವವಿದ್ಯಾಲಯಗಳ ಧನಸಹಯೋಗ ಆಯೋಗ (ಯುಜಿಸಿ)ವು ಶಿಕ್ಷಣ ಸಚಿವಾಲಯಕ್ಕೆ ನೀಡಿದ ಸಲಹೆಯಂತೆ ಎನ್‌ಸಿಇಆರ್‌ಟಿ ಮತ್ತು ಅದರ ಇತರ 6 ಘಟಕಗಳನ್ನು ವಿಶಿಷ್ಟ ವರ್ಗದಡಿ ಡೀಮ್ಡ್‌ ವಿವಿಗಳೆಂದು ಘೋಷಿಸಿದೆ ಎಂದು ಅಧಿಸೂಚನೆ ತಿಳಿಸಿದೆ.

ಅದರಂತೆ, ಮೈಸೂರು, ಅಜ್ಮೇರ್‌, ಭೋಪಾಲ್‌, ಭುವನೇಶ್ವರ, ಶಿಲ್ಲಾಂಗ್‌ನಲ್ಲಿನ ಎನ್‌ಸಿಇಆರ್‌ಟಿ ಪ್ರಾದೇಶಿಕ ಸಂಸ್ಥೆಗಳಿಗೂ ಈ ಸ್ಥಾನಮಾನ ಅನ್ವಯಿಸುತ್ತದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ ವಿವಿಗಳ ಜತೆ ಶೈಕ್ಷಣಿಕ ಒಪ್ಪಂದ ಮಾಡಿಕೊಳ್ಳಲೂ ಎನ್‌ಸಿಇಆರ್‌ಟಿಗೆ ಸಾಧ್ಯವಾಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani