Dailyhunt Logo
  • Light mode
    Follow system
    Dark mode
    • Play Story
    • App Story
ಎಟಿಎಫ್ ದರ ಹೆಚ್ಚಳ: ಅಕ್ಟೋಬರ್ 6ರಿಂದ ಇಂಡಿಗೋ ವಿಮಾನ ಪ್ರಯಾಣ ದರ ದುಬಾರಿ!

ಎಟಿಎಫ್ ದರ ಹೆಚ್ಚಳ: ಅಕ್ಟೋಬರ್ 6ರಿಂದ ಇಂಡಿಗೋ ವಿಮಾನ ಪ್ರಯಾಣ ದರ ದುಬಾರಿ!

ನವದೆಹಲಿ: ವಿಮಾನ ಇಂಧನ (ATF) ಬೆಲೆಯಲ್ಲಿ ಸತತ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ದೇಶದ ಅತಿದೊಡ್ಡ ವಿಮಾನಯಾನ ಸಂಸ್ಥೆಯಾದ 'ಇಂಡಿಗೋ', ತನ್ನ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನ ಯಾನಗಳ ಮೇಲೆ ಇಂಧನ ಹೆಚ್ಚುವರಿ ಶುಲ್ಕವನ್ನು (Fuel Surcharge) ಹೆಚ್ಚಿಸುವುದಾಗಿ ಸೋಮವಾರ ಘೋಷಿಸಿದೆ.

ಪರಿಷ್ಕೃತ ಶುಲ್ಕಗಳು ಅಕ್ಟೋಬರ್ 6ರಿಂದ ಜಾರಿಗೆ ಬರಲಿದ್ದು, ಸಾರ್ವಜನಿಕರ ವಿಮಾನ ಪ್ರಯಾಣದ ವೆಚ್ಚ ಇನ್ನಷ್ಟು ದುಬಾರಿಯಾಗಲಿದೆ.

ಕಳೆದ ಕೆಲವು ತಿಂಗಳುಗಳಿಂದ ಮಧ್ಯಪ್ರಾಚ್ಯದಲ್ಲಿ ಎದುರಾಗಿರುವ ಭೌಗೋಳಿಕ-ರಾಜಕೀಯ ಉದ್ವಿಗ್ನತೆಯಿಂದಾಗಿ ವಿಮಾನ ಇಂಧನದ ಬೆಲೆಗಳು ವಿಪರೀತ ಏರಿಳಿತ ಕಾಣುತ್ತಿವೆ. ತಿಂಗಳಿನಿಂದ ತಿಂಗಳಿಗೆ ಇಂಧನ ದರ ಶೇಕಡಾ 14ಕ್ಕೂ ಹೆಚ್ಚು ಹೆಚ್ಚಾಗಿದ್ದು, ಕಳೆದ ಒಂದು ದಶಕದಲ್ಲೇ ಅತ್ಯಂತ ಗರಿಷ್ಠ ಮಟ್ಟವನ್ನು ತಲುಪಿದೆ ಎಂದು ಕಂಪನಿ ತಿಳಿಸಿದೆ. ಸಂಸ್ಥೆಯ ಕಾರ್ಯಚರಣೆಯ ವೆಚ್ಚದಲ್ಲಿ ಇಂಧನವೇ ಬಹುಮುಖ್ಯ ಪಾಲು ವಹಿಸುವುದರಿಂದ ಅನಿವಾರ್ಯವಾಗಿ ಶುಲ್ಕ ಹೆಚ್ಚಿಸಲಾಗುತ್ತಿದೆ ಎಂದು ಇಂಡಿಗೋ ಸ್ಪಷ್ಟಪಡಿಸಿದೆ.

ದೇಶೀಯ ಮಾರ್ಗಗಳ ಪರಿಷ್ಕೃತ ಇಂಧನ ಶುಲ್ಕ (ದೂರದ ಆಧಾರದ ಮೇಲೆ):
500 ಕಿ.ಮೀ ವರೆಗೆ: ₹375
501 ರಿಂದ 1,000 ಕಿ.ಮೀ: ₹600
1,001 ರಿಂದ 1,500 ಕಿ.ಮೀ: ₹900
1,501 ರಿಂದ 2,000 ಕಿ.ಮೀ: ₹1,150
2,000 ಕಿ.ಮೀ ಗಿಂತ ಹೆಚ್ಚು: ₹1,300

ಅಂತಾರಾಷ್ಟ್ರೀಯ ಮಾರ್ಗಗಳ ಪರಿಷ್ಕೃತ ಶುಲ್ಕ
ಅಂತಾರಾಷ್ಟ್ರೀಯ ಪಯಣಕ್ಕೂ ಇಂಧನ ಶುಲ್ಕವನ್ನು ಹೆಚ್ಚಿಸಲಾಗಿದ್ದು, ಸಾರ್ಕ್ (SAARC) ದೇಶಗಳ ವಿಮಾನಗಳಿಗೆ ₹1,000 ದಿಂದ ₹3,000 ಹಾಗೂ ಆಫ್ರಿಕಾ ತಲುಪುವ ವಿಮಾನಗಳಿಗೆ ₹6,000 ದರ ನಿಗದಿಪಡಿಸಲಾಗಿದೆ. ಯುರೋಪ್ ತಲುಪುವ ಸೇವೆಗಳಿಗೆ ₹10,000 ಹಾಗೂ ಆಗ್ನೇಯ ಏಷ್ಯಾ, ಗಲ್ಫ್ (GCC), ಮಧ್ಯಪ್ರಾಚ್ಯ, ಉತ್ತರ ಮತ್ತು ಪೂರ್ವ ಏಷ್ಯಾದ ವಿಮಾನ ಪ್ರಯಾಣಕ್ಕೆ ₹5,500 ರವರೆಗೆ ಶುಲ್ಕವನ್ನು ವಿಧಿಸಲಾಗುತ್ತಿದೆ.

ಪ್ರಯಾಣಿಕರಿಗೆ ಎದುರಾಗುವ ಈ ಹೆಚ್ಚುವರಿ ವೆಚ್ಚದ ಹೊರೆಗೆ ವಿಷಾದ ವ್ಯಕ್ತಪಡಿಸಿರುವ ಇಂಡಿಗೋ, ಪ್ರತಿದಿನ 2,200ಕ್ಕೂ ಹೆಚ್ಚು ವಿಮಾನಗಳ ಕಾರ್ಯಾಚರಣೆ ನಡೆಸುತ್ತಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani