Dailyhunt Logo
  • Light mode
    Follow system
    Dark mode
    • Play Story
    • App Story
Fitness test: ಟೀಮ್‌ ಇಂಡಿಯಾಗೆ ಫಿಟ್‌ನೆಸ್‌ ಅಗ್ನಿಪರೀಕ್ಷೆ!

Fitness test: ಟೀಮ್‌ ಇಂಡಿಯಾಗೆ ಫಿಟ್‌ನೆಸ್‌ ಅಗ್ನಿಪರೀಕ್ಷೆ!

ಬೆಂಗಳೂರು: ಶ್ರೀಲಂಕಾ ವಿರುದ್ಧದ ಟೆಸ್ಟ್‌ ಸರಣಿ ಮುಗಿದ ಕೇವಲ 48 ಗಂಟೆಗಳ ಒಳಗಾಗಿ ಭಾರತದ ಪ್ರಮುಖ ಕ್ರಿಕೆಟಿಗರು ಶನಿವಾರ ಬೆಂಗಳೂರಿನ ರಾಷ್ಟ್ರೀಯ ಕ್ರಿಕೆಟ್‌ ಅಕಾಡೆಮಿಯಲ್ಲಿ ಕಡ್ಡಾಯ ಫಿಟ್‌ನೆಸ್‌ ಪರೀಕ್ಷೆಗೆ ಹಾಜರಾಗಿದ್ದಾರೆ.

ರವೀಂದ್ರ ಜಡೇಜಾ, ರಿಷಭ್‌ ಪಂತ್‌, ಯಶಸ್ವಿ ಜೈಸ್ವಾಲ್‌, ಶ್ರೇಯಸ್‌ ಅಯ್ಯರ್‌ ಮತ್ತು ಸಂಜು ಸ್ಯಾಮ್ಸನ್‌ ಸೇರಿದಂತೆ ಹಲವು ಆಟಗಾರರು ಕಠಿನ ತರಬೇತಿಯಲ್ಲಿ ಬೆವರು ಹರಿಸಿದರು.

ಮುಂಬರುವ ಬಿಡುವಿಲ್ಲದ ದೇಶೀಯ ಮತ್ತು ಅಂತಾರಾಷ್ಟ್ರೀಯ ಸೀಸನ್‌ಗಾಗಿ ಆಟಗಾರರ ಸಿದ್ಧತೆಯನ್ನು ಪರಿಶೀಲಿಸಲು ಬಿಸಿಸಿಐ ಈ ಯೋ - ಯೋ ಮತ್ತು ಕಠಿನ ಬ್ರಾಂಕೋ ಟೆಸ್ಟ್‌ಗಳನ್ನು ಆಯೋಜಿಸಿದೆ. ಗಾಯಾಳು ಜಸ್‌ ಪ್ರಿತ್‌ ಬುಮ್ರಾ ಮತ್ತು ಹಾರ್ದಿಕ್‌ ಪಾಂಡ್ಯ ಈ ಪರೀಕ್ಷೆಯಿಂದ ಸದ್ಯಕ್ಕೆ ವಿನಾಯಿತಿ ಪಡೆದಿದ್ದಾರೆ. ಭಾರತದ ಹೊಸ ಕ್ರಿಕೆಟ್‌ ಸೀಸನ್‌ ಸೆಪ್ಟಂಬರ್‌ನಲ್ಲಿ ಅಫ್ಘಾನಿಸ್ಥಾನ ವಿರುದ್ಧದ ಟಿ20 ಸರಣಿಯೊಂದಿಗೆ ಆರಂಭವಾಗಲಿದೆ.

Dailyhunt
Disclaimer: This content has not been generated, created or edited by Dailyhunt. Publisher: Udayavani